ಕಾಂಗ್ರೆಸ್ ಸರ್ಕಾರ ನಮ್ಮ ಬಂಜಾರ, ಬೋವಿ ,ಕೊರಮ, ಕೊರಚ, ನಮ್ಮ ವಿಚಾರ ಕಷ್ಟ ಗಳಿಗೆ ಸಮಾಜಕ್ಕೆ ಸ್ಪಂದನೆ ಕೊಡುತ್ತಿಲ್ಲoplus_1026
ಕಾಂಗ್ರೆಸ್ ಸರ್ಕಾರ ನಮ್ಮ ಬಂಜಾರ, ಬೋವಿ ,ಕೊರಮ, ಕೊರಚ, ನಮ್ಮ ವಿಚಾರ ಕಷ್ಟಗಳಿಗೆ ಸಮಾಜಕ್ಕೆ ಸ್ಪಂದನೆ ಕೊಡುತ್ತಿಲ್ಲ
ಕಾಂಗ್ರೆಸ್ ಸರ್ಕಾರ ನಮ್ಮ ಬಂಜಾರ, ಬೋವಿ ,ಕೊರಮ, ಕೊರಚ, ನಮ್ಮ ವಿಚಾರ ಕಷ್ಟಗಳಿಗೆ ಸಮಾಜಕ್ಕೆ ಸ್ಪಂದನೆ ಕೊಡುತ್ತಿಲ್ಲ.

ಒಳಮೀಸಲಾತಿಯಲ್ಲಿ ಕರ್ನಾಟಕ ಸರ್ಕಾರ ಮಾಡಿರುವ ಅನ್ಯಾಯದ ವಿರುದ್ಧ ಪತ್ರಿಕಾಗೋಷ್ಠಿ

ಕೊಪ್ಪಳ ಜಿಲ್ಲೆಯ ಕುಕನೂರ ನಿರೀಕ್ಷಣಾ ಮಂದಿರದಲ್ಲಿ ಒಳಮೀಸಲಾತಿಯಲ್ಲಿ ಕರ್ನಾಟಕ ಸರ್ಕಾರ ಮಾಡಿರುವ ಅನ್ಯಾಯದ ವಿರುದ್ಧ ಪತ್ರಿಕಾಗೋಷ್ಠಿ ನಡೆಸಲಾಯಿತು.
ಸುರೇಶ ಬಳೂಟಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋರ ಸೇನಾ ಮಾತನಾಡಿ

ಕಾಂಗ್ರೆಸ್ ಸರ್ಕಾರ ನಮ್ಮ ಬಂಜಾರ, ಬೋವಿ ,ಕೊರಮ, ಕೊರಚ, ನಮ್ಮ ವಿಚಾರ ಕಷ್ಟ ಗಳಿಗೆ ಸಮಾಜಕ್ಕೆ ಸ್ಪಂದನೆ ಕೊಡುತ್ತಿಲ್ಲ ಅಕ್ಟೋಬರ್ 6ನೇ ತಾರೀಕು ಕೊಪ್ಪಳದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿಯ ಸಿದ್ದರಾಮಯ್ಯನವರ ಸರ್ಕಾರದ ವಿರುದ್ಧ ಬಸಾಪುರ ವಿಮಾನ ನಿಲ್ದಾಣದ ಹತ್ತಿರ ಗೆರಾವು ಹಾಕುವುದರ ಮೂಲಕ ಸಮಾಜಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡಿ ಬಿಸಿ ಮುಟ್ಟಿಸಬೇಕಾಗಿದೆ. ನಮ್ಮ ಸಮಾಜಗಳ ಬೆಂಬಲದಿಂದ ಈ ಕಾಂಗ್ರೆಸ್ ಪಕ್ಷ ಬರೋಬ್ಬರಿ 133 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಸುಭದ್ರ ಸರ್ಕಾರ ರಚನೆ ಮಾಡಿದೆ.ಆದರೆ ಇದನ್ನು ಸಿದ್ದರಾಮಯ್ಯ ಅವರು ಮರೆತು ನಮಗೆ ದ್ರೋಹ ಮಾಡಿದ್ದಾರೆ. ಗದಗ ಜಿಲ್ಲೆಯಲ್ಲಿ ಕೂಡ ಅಕ್ಟೋಬರ್ 6ನೇ ತಾರೀಕು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಪ್ರಾರಂಭಗೊಂಡು ಅಕ್ಟೋಬರ್ 17 ನೇ ತಾರೀಕಿಗೆ ಕರ್ನಾಟಕ ರಾಜ್ಯದ ಸಮಾಜ ಬಾಂಧವರು ಭಾಗವಹಿಸಿ ಹೋರಾಟದಲ್ಲಿ ಪಾಲ್ಗೊಂಡು ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕು ಎಂದರು.

ಈಗ ಶಾಂತಿಯಿಂದ ಪ್ರತಿಭಟನೆ ಮಾಡುತ್ತಿದ್ದು ನ್ಯಾಯ ಸಿಗದೇ ಇದ್ದ ಪಕ್ಷದಲ್ಲಿ ಕ್ರಾಂತಿಯಿಂದ ನ್ಯಾಯ ಕೊಡುವುದಾದರೆ. ಅದಕ್ಕೂ ಸಿದ್ದ,
ಪ್ರತಿಭಟನೆ ಮಾಡುವದರ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸಲಿದ್ದೇವೆ.ಇದರ ಮೇಲೂ ಸಿದ್ದರಾಮಯ್ಯ ಎಚ್ಚೆತ್ತುಕೊಳ್ಳದಿದ್ದರೆ. ಕಾಂಗ್ರೆಸ್ ಪಕ್ಷ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಅದರ ಪ್ರತಿಫಲ ಅನುಭವಿಸಲು ಸಿದ್ಧವಿರಬೇಕು ಎಂಬ ಎಚ್ಚರಿಕೆ ನೀಡಲಾಯಿತು. ಈ ಪ್ರತಿಭಟನೆಗಳಿಗೆ ಪಕ್ಷಾತೀತವಾಗಿ ಎಲ್ಲರೂ ಬಂದು ಭಾಗವಹಿಸಿ ಎಂದು ನಮ್ಮ ಸಮಾಜಗಳ ಬಾಂಧವರಿಗೆ ಈ ಮೂಲಕ ಕರೆ ನೀಡಲಾಯಿತು. ಈ ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರಾದ , ಹಂಪಣ್ಣ ಕಟ್ಟಿಮನಿ,ವಾಲೀಪ್ಪ ತಲ್ಲೂರು, ಯಮನೂರ ಭಾನಾಪೂರ, ಪ್ರಕಾಶ ಬಳಗೇರಿ,ರಾಘವೇಂದ್ರ ಬಳಗೇರಿ, ಚೇತನ ಬಳಗೇರಿ, ಲಿಂಬಣ್ಣ ನಾಯ್ಕ್ ಇದ್ದರು.

ಸಂಪಾದಕರು :-ಚನ್ನಯ್ಯ ಹಿರೇಮಠ ಕುಕನೂರು

 

 

Leave a Reply

Your email address will not be published. Required fields are marked *