
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನ್ಯಾಯಾಲಯದ ಆದೇಶದಂತೆ ನಮ್ಮ ಜಮೀನನ್ನು ಕಬ್ಜಾ ಮಾಡಿಕೊಳ್ಳಲು ಹೋದಾಗ ನಮಗೆ ಜೀವ ಬೆದರಿಕೆ ನೀಡಿ ನಮ್ಮ ಜಮೀನಿಗೆ ಬರದಂತೆ ತಡೆ ನೀಡಿದ ಕುಟುಂಬ ಸಮೇತರಾಗಿ ಬೇವೂರು ಪೊಲೀಸ್ ಠಾಣೆಗೆ ದೂರು ನೀಡಿ ಹೋದರೆ ಈ ಆಸ್ತಿ ವಿಚಾರ ಸಿವಿಲ್ ಸ್ವರೂಪವಾಗಿರುವುದರಿಂದ ಅದನ್ನು ಇಲಾಖೆಯಲ್ಲಿ ಬಗೆಹರಿಸಿಕೊಳ್ಳಿ ಎಂದು ಪೊಲೀಸರು ಹೇಳಿದ್ದಾರೆ. ನ್ಯಾಯಾಲಯದ ಆದೇಶವನ್ನು ಉಪ ವಿಭಾಗ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದಾಗ ಒತ್ತುವರಿ ಮಾಡಿದ ಜಮೀನನ್ನು ಹಾಗೂ ಕಬ್ಜಾ ಬಿಡಿಸಿಕೊಡಲು ಉಪವಿಭಾಗದ ಅಧಿಕಾರಿಗಳು ತಹಶೀಲ್ದಾರ್ ಅವರಿಗೆ ಸೂಚನೆಯನ್ನು ಕಳುಹಿಸಲು ಇಲ್ಲಿಯವರೆಗೆ ಸಮಸ್ಯೆ ಬಗೆಹರಿಸುವ ತಹಶೀಲ್ದಾರ್ ಅವರು ಮಾಡುತ್ತಿಲ್ಲ, ಮಂಗಳೂರಿನಲ್ಲಿ ನಡೆದ ಜಿಲ್ಲಾಧಿಕಾರಿಗಳ ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಿಗೆ ಕೂಡ ಮನವಿ ಮಾಡಿದ್ದೇವೆ, ಮಾನ್ಯ ಜಿಲ್ಲಾಧಿಕಾರಿಗಳು ತಹಶೀಲ್ದಾರ್ ಕುಕನೂರು, ಭೂಮಾಪಕರಿಗೆ, ಹೆಚ್ಚುವರಿ ನಿರೀಕ್ಷಕರು ಮಂಗಳೂರು ಇವರಿಗೆ ಒತ್ತುವರಿ ಮಾಡಿದ ಜಮೀನನ್ನು ಸೂಚಿಸಿ ಕಬ್ಜಾ ಬಿಡಿಸಿಕೊಡಲು ಸೂಚಿಸಿದರು ಕೂಡ ಅಧಿಕಾರಿಗಳು ನಮಗೆ ನ್ಯಾಯ ದೊರಕಿಸುತ್ತಿಲ್ಲ, ಎದುರಾಳಿಗಳು ರಾಜಕೀಯವಾಗಿ ಆರ್ಥಿಕವಾಗಿ ಬಲಾಢ್ಯರಾಗಿರುತ್ತಾರೆ ನಮಗೆ ಮಾನಸಿಕವಾಗಿ ದೈಹಿಕವಾಗಿ ಹಿಂಸೆ ನೀಡಿ ಜೀವ ಬೆದರಿಕೆ ಹಾಕುತ್ತಿದ್ದಾರೆ. ನ್ಯಾಯ ಕೇಳಿ ತಹಶೀಲ್ದಾರ್ ಕಚೇರಿಗೆ ಸತತ ಎರಡು ವರ್ಷಗಳ ಕಾಲ ಅಲೆದಾಟ ಮಾಡಿದ್ದೇನೆ, ಇಲಾಖೆ ಅಧಿಕಾರಿಗಳು ತಹಶೀಲ್ದಾರ ಇಲ್ಲಿಯವರೆಗೂ ನ್ಯಾಯ ದೊರಕಿಸಲು ಆಗುತ್ತಿಲ್ಲ. ನಮಗೆ ನ್ಯಾಯ ಸಿಗದೇ ಇದ್ದಲ್ಲಿ ನಾನು ಮತ್ತು ನಮ್ಮ ಕುಟುಂಬದವರು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ, ಇದಕ್ಕೆ ನೇರವಾಗಿ ತಹಶೀಲ್ದಾರ್ರು ಮತ್ತು ಜಮೀನು ಒತ್ತುವರಿ ಮಾಡಿದವರು ನೇರ ಕಾರಣರಾಗುತ್ತಾರೆ ಎಂದು ಅಳಲು ತೊಡಿಕೊಂಡರು.
ಈ ಸಂದರ್ಭದಲ್ಲಿ ಅವರ ಕುಟುಂಬದವರಾದ ಮುದುಕಮ್ಮ, ರತ್ನಮ್ಮ ಗ್ರಾಮದವರಾದ ಹನುಮಪ್ಪ ಕಂಬಾರರು.
