*ರೈತಪರ ಕಾಳಜಿ ಇರುವ ದಕ್ಷ ಪೋಲಿಸ್ ಅಧಿಕಾರಿ ಟಿ. ಗುರುರಾಜ್ : ದೇವಪ್ಪ ಸೋಬಾನದ,,* 

 *ಪಟ್ಟಣ ಆರಕ್ಷಕ ಠಾಣೆಯ ಪಿಎಸ್ಐ ಟಿ.ಗುರುರಾಜ್ ಗೆ ರೈತ ಸಂಘಟನೆಯಿಂದ ಸನ್ಮಾನ.* 

ಕುಕನೂರು : ಬನ್ನಿಕೊಪ್ಪದ ರೈತರ ಕಡಲೆಯನ್ನು ತುಂಬಿಸಿಕೊಂಡು ತೂಕದಲ್ಲಿ ಮೋಸ ಮಾಡಿದ್ದಲ್ಲದೇ, ಕಡಲೆ ಖರೀದಿಯ ದುಡ್ಡನ್ನು ಸಹ ಕೊಡದೇ ಓಡಿ ಹೋಗಿದ್ದ ಕಡಲೆ ವ್ಯಾಪಾರಿಯನ್ನು ಪತ್ತೆ ಹಚ್ಚಿ ಆತನಿಂದ ಮೊಸಕ್ಕೊಳಗಾದ ರೈತರಿಗೆ ಕಡಲೆ ತೂಕದ ಹಣವನ್ನು ಕೊಡಿಸುವಲ್ಲಿ ಟಿ. ಗುರುರಾಜ್ ಅವರ ಕಾರ್ಯ ಶ್ಲಾಘನೀಯ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕುಕನೂರು ತಾಲೂಕ ಅಧ್ಯಕ್ಷ ದೇವಪ್ಪ ಸೋಬಾನದ್ ಹೇಳಿದರು.

ಅವರು ಪಟ್ಟಣದ ಆರಕ್ಷಕ ಠಾಣೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಿ.ಆರ್. ನಾರಾಯಣ ರೆಡ್ಡಿ) ಬಣದ ವತಿಯಿಂದ ಠಾಣೆಯ ಪಿಎಸ್ಐ ಟಿ. ಗುರುರಾಜ್ ಅವರಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು.ನಂತರ ರಾಜ್ಯ ಉಪಾಧ್ಯಕ್ಷ ಅಂದಪ್ಪ ಹುರುಳಿ ಮಾತನಾಡಿ ಸಾಲಬಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ಮಂಡಲಗಿರಿ ಗ್ರಾಮದ ಮೂರು ಜನ ರೈತರ ಹಾಗೂ ಬೆದವಟ್ಟಿಯ ಒಬ್ಬ ರೈತನ ಮತ್ತು ಅರಕೇರಿ ಒಬ್ಬ ರೈತನ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲು ಅಗತ್ಯ ಸಹಕಾರ ನೀಡಿ, ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ ಐದು ಲಕ್ಷ ಹಣವನ್ನು ರೈತರ ಖಾತೆಗೆ ಜಮೆ ಮಾಡಲು ಸಹರಿಸಿದ್ದಾರೆ. ಇಂತಹ ರೈತ ಪರ ಕಾಳಜಿ ಇರುವ ಅಧಿಕಾರಿಗಳು ನಮ್ಮ ತಾಲೂಕಿನಲ್ಲಿ ಇರುವುದು ನಮ್ಮ ಸೌಭಾಗ್ಯ, ಇವರ ಕಾರ್ಯ ಇದೆ ರೀತಿ ನಿರ್ವಹಿಸುವ ಮೂಲಕ ಮುಂದಿನ ದಿನಗಳಲ್ಲಿ ಇವರು ಇನ್ನೂ ಉನ್ನತ ಹುದ್ದೆ ಹೊಂದಲಿ ಎಂದರು.

ಈ ಸಂಧರ್ಭದಲ್ಲಿ ರೈತ ಮುಖಂಡರಾದ ಶಿವು ಬಂಗಿ, ಮಲ್ಲಪ್ಪ ಚಳ್ಳಮರದ, ಶರಣಪ್ಪ ಚಂಡೂರ, ಬಸಪ್ಪ ಸಬರದ, ಬಸಪ್ಪ ಮಂಡಲಗಿರಿ, ಉಮೇಶ ಬೆದವಟ್ಟಿ, ಬಸಪ್ಪ ಲಾಳಗೊಂಡರ, ಬಸವರಾಜ ಕುರಿ, ಬಸವರಾಜ ದಿವಟರ್, ಈರಪ್ಪ ಕೂಡ್ಲೂರ, ಶಿವು ಯತ್ನಟ್ಟಿ, ಯಲ್ಲಪ್ಪ ಕಲಾಲ, ಈರಪ್ಪ ದ್ಯಾಂಪೂರ ಸೇರಿದಂತೆ ಇನ್ನೀತರರು ಇದ್ದರು.

 

ನಿರಂತರ ಸುದ್ದಿ ಜಾಹೀರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713

Leave a Reply

Your email address will not be published. Required fields are marked *