*ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿರುವ ಇಒ ಸಂತೋಷ ಬಿರಾದಾರ ಪಾಟೀಲ್,,! ಮಲ್ಲನಗೌಡ ಕೋನನಗೌಡ,,*

ಕುಕನೂರು : ಸ್ವಜನ ಪಕ್ಷಪಾತ ಮತ್ತು ಎಡ ಪಕ್ಷೀಯ ನಡೆಯಿಂದ ಕೇವಲ ಕೆಲವು ಗುತ್ತಿಗೆದಾರರಿಗೆ ಮಾತ್ರ ಕಾಮಗಾರಿಗಳನ್ನು ನೀಡುತ್ತಿರುವ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಬಿರಾದರ ಸರಕಾರಿ ಅಧಿಕಾರಿಯಾಗಿ ಶಾಸಕರ ಏಜೆಂಟರಂತೆ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಜೆಡಿಎಸ್ ವಕ್ತಾರ ಮಲ್ಲನಗೌಡ ಕೋನನಗೌಡ ಆರೋಪಿಸಿದರು.
ಅವರು ಪಟ್ಟಣದ ತಾಲೂಕ ಪಂಚಾಯತಿ ಮುಂದೆ ಯಲಬುರ್ಗಾ ಹಾಗೂ ಕುಕನೂರು ತಾಲೂಕ ಕಲ್ಯಾಣ ಕರ್ನಾಟಕ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಗುತ್ತಿಗೆದಾರರ ಸಂಘದ ವತಿಯಿಂದ ಹಮ್ಮಿಕೊಂಡ ಅನಿರ್ಧಿಷ್ಟಾವಧಿ ಪ್ರತಿಭಟನೆಯಲ್ಲಿ ಗುತ್ತಿಗೆದಾರರಿಗೆ ಬೆಂಬಲ ಸೂಚಿಸಿ ಮಾತನಾಡಿ ಗುತ್ತಿಗೆದಾರರು ಏನು ಇವರನ್ನು ಹಣ ಕೇಳುತ್ತಿಲ್ಲಾ, ಅವರ ಬದುಕು ನಿರ್ವಹಣೆ, ಹೊಟ್ಟೆಪಾಡಿಗೆ ಕೆಲಸ ಕೊಡಿ ಎಂದು ಕೇಳಿದರೇ, ಇಒ ಅವರು ಶಾಸಕರ ಕೈಗೊಂಬೆಯಂತೆ ವರ್ತಿಸುತ್ತಾ, ಕೆಲಸ ಕೇಳಲು ಹೋದ ಗುತ್ತಿಗೆದಾರರಿಗೆ ಉದ್ದಟತನದ ಮಾತುಗಳನ್ನಾಡುತ್ತಾರೆ ಎಂದು ಆರೋಪಿಸಿದರು.
ನಿಮಗೆ ವಿವೇಚನೆ ಶಕ್ತಿ ಇದೆಯೇ ನೀವೊಬ್ಬ ಸರಕಾರಿ ಅಧಿಕಾರಿಯಾಗಿ ರಜಿಸ್ಟ್ರೆಶನ್ ಇರುವ ಎಲ್ಲಾ ತುಂಡು ಗುತ್ತಿಗೆದಾರರಿಗೆ ಕೆಲಸ ಕೊಡುವುದು ಬಿಟ್ಟು ಶಾಸಕರು ಹೇಳಿದವರಿಗೆ ಅವರ ಕಾರ್ಯಕರ್ತರಿಗೆ ಕೆಲಸ ಕೊಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಶಾಸಕ ರಾಯರಡ್ಡಿಯವರು ಕ್ಷೇತ್ರದ ಅಭಿವೃದ್ದಿಗೆ ಸಾವಿರಾರು ಕೋಟಿ ತಂದಿರಬಹುದು ಆದರೆ ತಾಲೂಕ ಪಂಚಾಯತಿಗೆ ಒಂದೆರಡು ಕೋಟಿ ಬಂದಿರಬಹುದು, ಆದರೆ ಆ ತಾಲೂಕ ಪಂಚಾಯತಿಗೆ ಬಂದಿರುವ ಹಣದಲ್ಲಿ ನಿರ್ವಹಿಸುವ ಕೆಲಸಗಳನ್ನು ಗುತ್ತಿಗೆದಾರರ ಸಂಘ ಇರುತ್ತೆ ಅವರೇ ಹಂಚಿಕೊಂಡು ಕೆಲಸ ಮಾಡುತ್ತಾರೆ ಆದರೆ ನಿಮ್ಮ ಹೊಡೆದಾಳುವ ನೀತಿಯಿಂದ ನಿಮ್ಮ ಪಕ್ಷದ ಬೆಂಬಲಿಗರಿಗೆ ಕೆಲಸ ನೀಡುತ್ತಿದ್ದೀರಿ ಎಂದರು.
ಕಾರ್ಯನಿರ್ವಾಹಕ ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸಿ ತಮಗೆ ಬೇಕಾದ ಬೆರಳೆಣಿಕಯಷ್ಟು ಜನರಿಗೆ ಗುತ್ತಿಗೆಗಳನ್ನು ನೀಡುತ್ತಿದ್ದಾರೆ.
ಸಂಘದಲ್ಲಿರುವ ಇನ್ನೂ ಅನೇಕ ಗುತ್ತಿಗೆದಾರರಿಗೆ ಕಾಮಗಾರಿಗಳು ಇಲ್ಲದೆ ಜೀವನ ನಿರ್ವಹಣೆ ಹಾಗೂ ಲೈಸನ್ಸ್ ನಿರ್ವಹಣೆ ಕಷ್ಟಕರವಾಗಿದ್ದು. ಇದರಿಂದ ಗುತ್ತಿಗೆದಾರರ ಬದುಕು ದುಸ್ತರವಾಗಿದೆ ಎಂದರು.
ನಂತರ ಭಾಜಪ ಮುಖಂಡ ಮಂಜುನಾಥ ನಾಡಗೌಡ ಮಾತನಾಡಿ ಗುತ್ತಿಗೆದಾರರಿಗೆ ತೊಂದರೆಯಾಗಬಾರದು ಎಂದು ಸರ್ಕಾರ ಪ್ರತಿ ಹೆಡ್‌ನಲ್ಲಿ ತೆಗೆದುಕೊಳ್ಳುವ ಪ್ರತಿಶತ 25% ಕಾಮಗಾರಿಗಳನ್ನು ಎಸ್.ಸಿ ಮತ್ತು ಎಸ್‌ಟಿ ಗುತ್ತಿಗೆದಾರರಿಗೆ ಕಡ್ಡಾಯವಾಗಿ ನೀಡಬೇಕೆಂದು ಆದೇಶವಿದ್ದರು ತಾಲೂಕ ಪಂಚಾಯತಿ ಇಒ ಅವರು ಆದೇಶ ದಿಕ್ಕರಿಸಿ ಗುತ್ತಿಗೆದಾರರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದರು.
ಸ್ವಜನ ಪಕ್ಷಪಾತ ಮಾಡದೇ ನಡೆದುಕೊಳ್ಳಬೇಕಾದ ಅಧಿಕಾರಿಗಳು ಪಕ್ಷಪಾತ ಮಾಡುತ್ತಾ, ಕಾಂಗ್ರೆಸ್ ಗುತ್ತಿಗೆದಾರರಿಗೆ ಕೆಲಸ ನೀಡುತ್ತಿರುವುದು ಖಂಡನೀಯವಾಗಿದೆ. ಈ ಹಿಂದೆ ಹಾಲಪ್ಪ ಆಚಾರ ಶಾಸಕರಾಗಿದ್ದಾಗ ಅರ್ಹತೆ, ಸಾಮರ್ಥ್ಯ ಇರುವ ಗುತ್ತಿಗೆದಾರರಿಗೆ ಅರ್ಹತೆ ಮಾನ ದಂಡವಾಗಿ, ಪಕ್ಷಾತೀತವಾಗಿ ಕೆಲಸ ನೀಡುತ್ತಿದ್ದರು. 2023ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದ ಶಾಸಕರು ಇಬ್ಬಗೆಯ ನೀತಿ ಅನುಸರಿಸಿ, ತಮ್ಮ ಕಾರ್ಯಕರ್ತರಿಗೆ ಕೆಲಸ ನೀಡುತ್ತಿದ್ದಾರೆ. ಆ ವ್ಯವಸ್ಥೆಗೆ ನಮ್ಮ ದಿಕ್ಕಾರವಿದೆ ಎಂದರು.
ತಾಲೂಕ ಆಡಳಿತ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಶಾಸಕರು ಎಲ್ಲಾ ಗುತ್ತಿಗೆದಾರರಿಗೆ
ಸಮಾನ ಅವಕಾಶ ನೀಡಬೇಕು ಎಂದು ಆಗ್ರಹಿಸುವ ಮೂಲಕ ಮನವಿ ಮಾಡಿದರು.
ನಂತರ ಮುಖಂಡ ಮಾರುತಿ ಗಾವರಾಳ ಮಾತನಾಡಿ ಸ್ವಜನ ಪಕ್ಷಪಾತ ಮತ್ತು ಎಡ ಪಕ್ಷೀಯ ನಡೆಯಿಂದ ಕಾಂಗ್ರೆಸ್ ಪಕ್ಷದ ಕೈಗೊಂಬೆಯಂತೆ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಬಿರಾದಾರ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಾಸಕ ರಾಯರಡ್ಡಿಯವರು ಪಕ್ಷಾತೀತವಾಗಿ ತಾಲೂಕಿನ ಎಸ್.ಸಿ ಹಾಗೂ ಎಸ್. ಟಿ ಗುತ್ತಿಗೆದಾರರಿಗೆ ಕೆಲಸ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಬೇಕು ಇಲ್ಲದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟದ ಮೂಲಕ ತಮ್ಮ ವಿರುದ್ದ ಬೀದಿಗಿಳಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಸಿದ್ದು ಮಣ್ಣಿನವರ್, ಮಾರುತಿ ಹೊಸಮನಿ, ಮಹೇಶ ಹಿರೇಮನಿ, ಜಗದೀಶ ಸೂಡಿ, ಮಲ್ಲನಗೌಡ ಕೋನನಗೌಡ, ಶ್ರೀನಿವಾಸ ಗದ್ದಿ, ಸಂಗಪ್ಪ ಜೋಗಣ್ಣವರ್, ಮಲ್ಲಿಕಾರ್ಜುನ ಗೊರ್ಲೆಕೊಪ್ಪ, ನೀಲಪ್ಪ ಬೆಣಕಲ್, ಲಕ್ಷ್ಮಣ ಕಾಳಿ, ದೇವಪ್ಪ ಹರಿಜನ, ಕಳಕಪ್ಪ ಚಲವಾದಿ, ಬಸವರಾಜ ಹಾಳಕೇರಿ, ಪ್ರಕಾಶ ಬೋರಣ್ಣವರ್, ವಿನಾಯಕ ಯಾಳಗಿ, ಶಿವಾನಂದ ರಾರಾಳ, ಮುತ್ತು ಅಂಬಳಿ, ಉಮೇಶ ಯಡಿಯಾಪೂರ, ಪ್ರೇಮರಾಜ ಮಾಲಗಿತ್ತಿ, ಮಂಜುನಾಥ ಮಾಲಗಿತ್ತಿ ಸೇರಿದಂತೆ ಕಲಾವಿದರು, ದೇವಪ್ಪ ಹೊಸಳ್ಳಿ, ಉಮೇಶ ಯಡಿಯಾಪೂರ, ವೆಂಕಟೇಶ ಹನಮಸಾಗರ, ಸುಖಮುನಿ ಗುಮಗೇರಿ ಇನ್ನೀತರರು ಇದ್ದರು.
ತಾಲೂಕಿನ ಎಲ್ಲಾ ಗುತ್ತಿಗೆಗಳನ್ನು ಒಬ್ಬರಿಗೆ ನೀಡುತ್ತಾ ಶಾಸಕರು ವಿರೋಧ ನೀತಿ ಅನುಸರಿಸುತ್ತಿದ್ದಾರೆ, ಎಂದು ಪರೋಕ್ಷವಾಗಿ ಹೇಳಿ ಶಾಸಕರು ನಮ್ಮ ಭಾಗದಲ್ಲಿ ಒಂದು ಹುನಗುಂದದ ಜರ್ಸಿ ಆಕಳು ತಂದಿದ್ದಾರೆ. ಅದು ಇಲ್ಲಿ ಮೇಯುತ್ತೆ, ಹುನಗುಂದದಲ್ಲಿ ಸಗಣಿ ಹಾಕುತ್ತೆ ಎಂದು ಲೇವಡಿ ಮಾಡಿದ ಅವರು ಆ ಜರ್ಸಿ ಆಕಳವನ್ನು ಇಲ್ಲಿಂದ ಓಡಿಸಿದಾಗ ಇಲ್ಲಿನ ಗುತ್ತಿಗೆದಾರರಿಗೆ ಬೆಲೆ ಬರುತ್ತದೆ.
ಇದು ಪ್ರಜಾ ಪ್ರಭುತ್ವದ ವ್ಯವಸ್ಥೆ, ಇಲ್ಲಿ ರಾಜ ಪ್ರಭುತ್ವ ಇಲ್ಲಾ, ಶಾಸಕರೇ ನಿಮ್ಮದೆನಾದರು ಗತ್ತು ಇದ್ದರೇ ಅದು ಪ್ರಜೆಗಳ ಪರವಾಗಿ ಇರಬೇಕು, ಜನತೆ ನಿಮಗೆ ಮತ ಹಾಕಿರುವದು ನಿಮ್ಮ ಆಸ್ತಿ ಹೆಚ್ಚಿಸಿಕೊಳ್ಳಲು ಅಲ್ಲಾ, ಜನಪರ ಕೆಲಸ ಮಾಡಲು, ಶಾಸಕರೇ ಮೊದಲು ಬಡತನದಲ್ಲಿರುವ ಗುತ್ತಿಗೆದಾರರ ಕೈ ಹಿಡಿಯಿರಿ ಅವರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪೂರಕವಾಗಿ ಕೆಲಸ ಮಾಡಿ ಎಂದು ಆಗ್ರಹಿಸಿದರು. ಗುತ್ತಿಗೆದಾರರಿಗೆ ನ್ಯಾಯ ಸಿಗುವವರೆಗೆ ಬೆಂಬಲಕ್ಕೆನಿಲ್ಲುತ್ತೇನೆ.
*ಕೊಪ್ಪಳ ಜಿಲ್ಲಾ ಜೆಡಿಎಸ್ ವಕ್ತಾರ ಮಲ್ಲನಗೌಡ ಕೋನನಗೌಡ.*
ನಿರಂತರ ಸುದ್ದಿ ಜಾಹೀರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞9164386713