oplus_1026

ಸಂಪನ್ನಗೊಂಡ ಮುಷ್ಟಿ ಕಲ್ಲೇಶ್ವರನ ರಥೋತ್ಸವ

 

ಕುಕುನೂರು ಪಟ್ಟಣದ ರೈಲ್ವೆ ನಿಲ್ದಾಣದ ಹತ್ತಿರ ಇರುವ ಶ್ರೀ ಮುಷ್ಟಿ ಕಲ್ಲೇಶ್ವರನ ದೇವಸ್ಥಾನದಲ್ಲಿ ಸೋಮವಾರ ಅಮಾವಾಸ್ಯೆಯ ದಿನದಂದು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬೆಳಗ್ಗೆ ಶ್ರೀ ಮುಷ್ಟಿ ಕಲ್ಲಿನಾಥೇಶ್ವರನಿಗೆ ವಿಶೇಷ ಅಭಿಷೇಕ ಪೂಜಾ ಕಾರ್ಯಕ್ರಮಗಳು ನೆರವೇರಿಸಲಾಯಿತು. 

ಮಧ್ಯಾಹ್ನ 1:00ಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ನೆರವೇರಿಸಲಾಯಿತು.

ಸಾಯಂಕಾಲ 5:00 ಗಂಟೆಗೆ ಭಕ್ತರ ಸಮ್ಮುಖದಲ್ಲಿ ಶ್ರೀ ಮುಷ್ಟಿ ಕಲ್ಲೇಶ್ವರನ ಲಘು ರಾಥೋತ್ಸವ (ಹುಚ್ಚಯ್ಯ) ನೆರವೇರಿಸಲಾಯಿತು.

ಪಟ್ಟಣದ ಐತಿಹಾಸಿಕ ಹಿನ್ನೆಲೆಯುಳ್ಳ ದೇವಸ್ಥಾನ ವಾಗಿದ್ದು ಈ ದೇವಸ್ಥಾನವು ರಾಜ ಮಹಾರಾಜರ ಆಳ್ವಿಕೆಯಲ್ಲಿ ನಿರ್ಮಿಸಲ್ಪಟ್ಟು ಶಿಲ್ಪ ಕಲೆಗಳಿಂದ ನಿರ್ಮಿಸಲ್ಪಟ್ಟ ಹಳೆಯ ನೆನಪುಗಳನ್ನು ಮರುಕಳಿಸುವಂತಹ ದೇವಸ್ಥಾನವಾಗಿದ್ದು ಈ ದೇವಸ್ಥಾನವು ಸಂರಕ್ಷಣೆ ಇಲ್ಲದೆ ನಶಿಸುವ ಹಂತ ತಲುಪುತ್ತಿದೆ.

ಸಂಬಂಧ ಪಟ್ಟ ಇಲಾಖೆಯವರು ಈ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಮಾಡಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ. 

ಈ ಸಂದರ್ಭದಲ್ಲಿ 

ಶ್ರೀ ಮುಷ್ಟಿ ಕಲ್ಲೇಶ್ವರನ ಸೇವಾ ಕಾರ್ಯಕರ್ತರು ಮತ್ತು ಪಂಪಾ ಸನ್ನಿಧಾನ, ಅಯ್ಯಪ್ಪ ಸ್ವಾಮಿ ಫೌಂಡೇಶನ್, ಸೇವಾ ಕಾರ್ಯಕರ್ತರು, ಹಾಗೂ ಗ್ರಾಮದ ಸುತ್ತಮುತ್ತಲಿನ ಭಕ್ತಾದಿಗಳು ಇತರರು ಇದ್ದರು.

 

ನಿರಂತರ ಸುದ್ದಿ ಜಾಹಿರಾತು ವರದಿಗಾಗಿ, ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713

Leave a Reply

Your email address will not be published. Required fields are marked *