ಮನುಕುಲಕ್ಕೆ ಶಾಂತಿ, ನೆಮ್ಮದಿ ಬೇಕಾಗಿದೆ:-ಸುನಂದ ಅಕ್ಕ

ಕುಕನೂರು ಪಟ್ಟಣದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದ ವತಿಯಿಂದ 90ನೇ ವರ್ಷದ ತ್ರಿಮೂರ್ತಿ ಶಿವಜಯಂತಿ ಮಹೋತ್ಸವ ಹಾಗೂ ಶಿವರಾತ್ರಿ ಹಬ್ಬದ ಅಂಗವಾಗಿ ವಿದ್ಯಾಲಯದ ವತಿಯಿಂದ ಪ್ರತಿವರ್ಷದಂತೆ ಈ ಬಾರಿಯೂವಿದ್ಯಾಲಯದ ಆವರಣದಲ್ಲಿ ಶಿವ ಧ್ವಜಾರೋಹಣ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಇರುವ ಚಳೇಶ್ವರ ದೇವಸ್ಥಾನದ ಅವಣದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳ ಪ್ರದರ್ಶನ, ಶಿವಜ್ಞಾನಾಮೃತ ಪ್ರವಚನ, ರಾಜಯೋಗ ಅಭ್ಯಾಸದ ಜತೆಗೆ ತ್ರಿಮೂರ್ತಿ ಶಿವಜಯಂತಿ ಮಹೋತ್ಸವಕ್ಕೆ, ರಾಜಯೋಗಿನಿ ಬ್ರಹ್ಮಕುಮಾರಿ ಸುನಂದ ಅಕ್ಕನವರು ಚಾಲನೆ ನೀಡಿ ಮಾತನಾಡಿ,90ನೇ ವರ್ಷ ಶಿವರಾತ್ರಿ ಆಚರಣೆ ವಿದ್ಯಾಲಯದಿಂದ ನಡೆಯುತ್ತಿದ್ದು, ಮೌಲ್ಯಾಧಾರಿತ ಸಮಾಜ ಸ್ಥಾಪನೆ, ದ್ವೇಷರಹಿತ , ಚಿಂತೆ,ಒತ್ತಡ, ಭಯ ರಹಿತ ಸುಂದರ ಸಮಾಜ ನಿರ್ಮಾಣವೇ ಶಿವರಾತ್ರಿ ಕಾರ್ಯಕ್ರಮಗಳ ಉದ್ದೇಶವಾಗಿದೆ ಎಂದರು.

ಮನುಕುಲಕ್ಕೆ ಶಾಂತಿ, ನೆಮ್ಮದಿ ಬೇಕಾಗಿದೆ. ಇದಕ್ಕಾಗಿ ದೇವರನ್ನು ಬೇಡಿಕೊಳ್ಳುತ್ತಾರೆ ಆದರೆ ದೊರೆಯುತ್ತಿಲ್ಲ. ಹೇಗೆ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದ ಅವರು, ರಾಜ ಯೋಗ, ಆಧ್ಯಾತ್ಮಿಕತೆ ಜಾಗೃತಿ, ಭಗವಂತನನ್ನು ಬೇಡಿಕೊಳ್ಳುವುದು ಹೇಗೆ ಮನುಷ್ಯನನ್ನು ಜಾಗೃತಿಗೊಳಿಸಲು ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಸಧೃಡ ಭಾರತ ಸ್ಥಾಪನೆಗೆ ಅಧರ್ಮಗಳು ಹೋಗಲಾಡಿಸಲು ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ಹೇಳಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಿವಲಿಂಗ ಮೆರವಣಿಗೆ ನೆರವೇರಿಸಿ ನಂತರ ಪ್ರಸಾದ ವಿತರಣೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ
ರೇಣುಕಾ ಅಕ್ಕ, ಅನಸೂಯ ಅಕ್ಕ, ಪದ್ಮಕ್ಕ, ಶೈಲಕ್ಕ, ಶಕುಂತಲಾ ಅಕ್ಕ, ಶಿವಲೀಲಾ ಅಕ್ಕ, ಶಶಿಕಲಾ ಅಕ್ಕ, ಕವಿತಾ ಅಕ್ಕ, ಲೀಲಾವತಿ ಅಕ್ಕ, ಗಿರಿಜಾ ಅಕ್ಕ, ಶರಣಪ್ಪ ಅಣ್ಣ, ಚಂದ್ರಶೇಖರಣ್ಣ, ಗಂಗಾಧರ ಅಣ್ಣ, ವೀರಯ್ಯ ಅಣ್ಣ, ಹನುಮಂತ ಅಣ್ಣ ಸುರೇಶ ಅಣ್ಣ, ಶಾಂತ ಅಕ್ಕ, ಬಸವರಾಜಣ್ಣ, ಕಾಳಮ್ಮ ಅಕ್ಕ, ಹಾಗೂ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸೇವ ಕಾರ್ಯಕರ್ತರು ಇತರರು ಇದ್ದರು.
ನಿರಂತರ ಸುದ್ದಿ ಜಾಹೀರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞9164386713