oplus_1026

ಸಂಪನ್ನಗೊಂಡ ಶ್ರೀ ಭೋಗೇಶ್ವರ ರಥ 

ಕುಕುನೂರು ಪಟ್ಟಣದ ಶ್ರೀ ಭೋಗೇಶ್ವರನ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಪ್ರಾಥಕಾಲದಲ್ಲಿ ಶ್ರೀ ಭೋಗೇಶ್ವರ ಸ್ವಾಮಿಗೆ ರುದ್ರಾಭಿಷೇಕ ಪೂಜಾ ವಿಧಾನಗಳು ನೆರವೇರಿಸಲಾಯಿತು. 

ಸಾಯಂಕಾಲ 6 ಗಂಟೆಗೆ ನಂದಿಕೋಲು, ಪಲ್ಲಕ್ಕಿಯೊಂದಿಗೆ ಶ್ರೀ ಭೋಗೇಶ್ವರನ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಕಲ ವಾದ್ಯಗಳೊಂದಿಗೆ ವಿಜೃಂಭಣೆಯಿಂದ ನೆರವೇರಿಸಲಾಯಿತು. 

ಬೆಳಗ್ಗೆಯಿಂದಲೇ ಶ್ರೀ ಬೊಗೇಶ್ವರನ ದೇವಸ್ಥಾನಕ್ಕೆ ಸಹಸ್ರಾರು ಭಕ್ತರು ಆಗಮಿಸಿ ಕಾಯಿ ಕರ್ಪೂರ ಪುಷ್ಪ ಊದಿನ ಕಡ್ಡಿ, ಹಣ್ಣು ನೈವೇದ್ಯವನ್ನ ಸಮರ್ಪಿಸಿ ದರ್ಶನ ಪಡೆದು ಶ್ರೀ ಭೋಗೇಶ್ವರನ ಕೃಪೆಗೆ ಪಾತ್ರರಾದರು.

ಈ ಸಂದರ್ಭದಲ್ಲಿ ಭೋಗೇಶ್ವರ ದೇವಸ್ಥಾನ ಸೇವಾ ಕಾರ್ಯಕರ್ತರು ಮತ್ತು ಭಜನಾ ಮಂಡಳಿ ವಾದ್ಯ ಮೇಳದವರು ಭಕ್ತ ಮಂಡಳಿಯವರು ಇತರರು ಇದ್ದರು.

 

ನಿರಂತರ ಸುದ್ದಿ ಜಾಹೀರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞9164386713

Leave a Reply

Your email address will not be published. Required fields are marked *