ಕುಕನೂರು:-

ಸದ್ಗುರು ಶ್ರೀ ಸೇವಾಲಾಲ ಮಹಾರಾಜರ ತತ್ವ ,ಆಚಾರ,ವಿಚಾರ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನದಲ್ಲಿ ಪ್ರಗತಿ ಹೊಂದಬೇಕು ಎಂದು ಗೋರ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ಹೇಳಿದರು.

 


ಅವರು ಕುಕನೂರ ಪಟ್ಟಣದ ತಹಸೀಲ್ದಾರರ ಕಛೇರಿ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಕುಕನೂರ ಘಟಕದಲ್ಲಿ ನಡೆದ ಸೇವಾಲಾಲ ಮಹಾರಾಜರ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಅಖಂಡ ಭಾರತ ದೇಶದ ಪ್ರತಿಯೊಬ್ಬ ಸಂತ ಮಹಾಂತರು ತಮ್ಮ ಜೀವನವನ್ನು ಸಮಾಜಕ್ಕಾಗಿ ಮೀಸಲಿಟ್ಟು ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆದು ಅವರು ಕಂಡ ಸಮಾನತೆಯ ಸಮಾಜದ ಪರಿಕಲ್ಪನೆಯನ್ನು ಸಾಕಾರಗೊಳಿಸಬೇಕು ಅಂದಾಗ ಮಾತ್ರ ನಾವು ಇಂಥ ಜಯಂತಿ ಆಚರಣೆ ಮಾಡುವದು ಸಾರ್ಥಕವಾಗುತ್ತದೆ. ಪ್ರತಿಯೊಬ್ಬರೂ ನಮ್ಮ ಸಮಾಜ ಶೈಕ್ಷಣಿಕ,ಸಾಮಾಜಿಕ, ಆರ್ಥಿಕ, ರಾಜಕೀಯ, ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಮುಂದುವರಿಯಬೇಕು ಎಂದು ಮಾತನಾಡಿದರು. ಗ್ರೇಡ್ 2 ತಹಸೀಲ್ದಾರ್ ಶ್ರೀ ಮುರಳೀಧರ ಕುಲಕರ್ಣಿ ಮಾತನಾಡಿ ಸೇವಲಾಲರು ಪ್ರತಿಪಾದಿಸಿದ ಸತ್ಯ,ಅಹಿಂಸೆ,ದುಶ್ಚಟ ನಿರ್ಮೂಲನೆ,ಮೂಢನಂಬಿಕೆಯನ್ನು ಬಿಟ್ಟು ಪ್ರತಿಯೊಬ್ಬರು ಜೀವನದಲ್ಲಿ ಶ್ರೇಯಸ್ಸನ್ನು ಸಾಧಿಸಬೇಕು,ಮಕ್ಕಳಿಗೆ ಒಳ್ಳೆಯ ಸಂಸ್ಕಾರ,ಸಂಸ್ಕೃತಿ ನೀಡಿ ಸಮಾಜದ ಆಸ್ತಿಯನ್ನಾಗಿ ಮಾಡಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಹಂಪಣ್ಣ ಕಟ್ಟಿಮನಿ,ಮೇಘರಾಜ ಬಳಿಗೇರಿ,ಬಸವಂತಪ್ಪ ನಾಯಕ,ವಿಶ್ವನಾಥ ಬಳಿಗೇರಿ,ಯಮನೂರಪ್ಪ ಕಟ್ಟಿಮನಿ, ಶರಣಪ್ಪ ಚವ್ಹಾಣ,ಯಮನೂರಪ್ಪ ಭಾನಾಪುರ, ರಾಘವೇಂದ್ರ ಬಳಿಗೇರಿ,ನಾಗರಾಜ ಭಾನಾಪುರ, ಮಹೇಶ ಕಾರಭಾರಿ, ಕುಮಾರ ಬಳಿಗೇರಿ, ಗೋಲಪ್ಪ ಹೊನ್ನುಂಚಿ, ಕಂದಾಯ ಇಲಾಖೆ ಅಧಿಕಾರಿಗಳಾದ. ಮಹಮ್ಮದ ಮುಸ್ತಫಾ, ಗಿರೀಶ್, ಮಹಾದೇವ,ದೇವಪ್ಪ ಹಾಗೂ ಸಾರಿಗೆ ಇಲಾಖೆಯ ಸಂಗಪ್ಪ ಲಮಾಣಿ,ಮಂಜುನಾಥ್ ಮುಧೋಳ,ಸುಜಾತಸೋಮಪ್ಪ ಕಾರಭಾರಿ, ಶಶಿಕುಮಾರ ಕಾರಭಾರಿ, ಕಿರಣ ರಾಠೋಡ, ವಿಜಯ ಚವ್ಹಾಣ,ತಿರುಪತಿ ತಲ್ಲೂರು ಮತ್ತು ಸಮಾಜದ ಗುರು ಹಿರಿಯರು, ಯುವಮಿತ್ರರು ಭಾಗವಹಿಸಿದ್ದರು.

ನಿರಂತರ ಸುದ್ದಿ ಜಾಹಿರಾತು ಪ್ರಕಟಣೆಗಾಗಿ, ಚನ್ನಯ್ಯ ಹಿರೇಮಠ ಕುಕನೂರ

Leave a Reply

Your email address will not be published. Required fields are marked *