*ಕುಕನೂರು ಬಸ್ ನಿಲ್ದಾಣದಲ್ಲಿ ಉಚಿತ ಶುದ್ದ ಕುಡಿಯುವ ನೀರಿನ ಘಟಕ ಪ್ರಾರಂಭಿಸಲಾಗುತ್ತಿದೆ,,*

ಕುಕನೂರು : ಪಟ್ಟಣದಲ್ಲಿ ಉತ್ತಮ ಬಸ್ ನಿಲ್ದಾಣವಿದ್ದು, ಪ್ರಯಾಣಿಕರು ಕುಡಿಯುವ ನೀರಿಗೆ ಪರದಾಡುವ ಸನ್ನಿವೇಶ ಎದುರಾಗಿತ್ತು, ಈ ಕುರಿತು ಘಟಕ ವ್ಯವಸ್ಥಾಪಕರು ಶಾಸಕ ಬಸವರಾಜ ರಾಯರಡ್ಡಿವರಿಗೆ ಮನವಿ ಸಲ್ಲಿಸಿದ್ದರು.
ಮನವಿಗೆ ಸ್ಪಂದಿಸಿದ ಶಾಸಕರು ಪಟ್ಟಣ ಪಂಚಾಯತಿ ಅನುದಾನದಲ್ಲಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನೂಕೂಲಕ್ಕಾಗಿ ಉಚಿತ ಶುದ್ದ ಕುಡಿಯುವ ನೀರಿನ ಘಟಕನ್ನು ಪ್ರಾರಂಭಿಸಲು ತಿಳಿಸಿದ್ದರು. ಅದರಂತೆ ಶುದ್ದ ಕುಡಿಯುವ ನೀರಿನ ಘಟಕ ಪ್ರಾರಂಭಿಸಲಾಗುತ್ತಿದೆ.
ಈ ಶುದ್ದ ನೀರಿನ ಘಟಕದ ನಿರ್ವಹಣೆ ಹೊತ್ತಿರುವ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ನಾಗೇಶ ಅವರು ಸತತ ಒಂದು ವಾರಗಳ ಪರಿಶ್ರಮವಹಿಸಿ, ಘಟಕ ವ್ಯವಸ್ಥಾಪಕ ಸಿ. ವೇಂಕಟಾಚಲಪತಿಯವರೊಂದಿಗೆ ಚರ್ಚಿಸಿ, ಸ್ಥಳ ನಿಗದಿಪಡಿಸಿ, ಶುಕ್ರವಾರ ಬೆಳಗ್ಗೆಯಿಂದ ರಾತ್ರಿಯವರೆಗೆ ಶುದ್ದ ನೀರಿನ ಟ್ಯಾಂಕರ್ ಸೇರಿದಂತೆ ಪೈಪ್ ಲೈನ್ ವ್ಯವಸ್ಥೆಯನ್ನು ಮಾಡಿದರು.
ಶೀಘ್ರದಲ್ಲಿಯೇ ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಉಚಿತ ಶುದ್ದ ಕುಡಿಯುವ ನೀರಿನ ಘಟಕ ಪ್ರಾರಂಭವಾಗಲಿದೆ.
ನಿರಂತರ ಸುದ್ದಿ ಜಾಹೀರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞9164386713