ವಿದ್ಯಾರ್ಥಿಗಳ ಶಿಕ್ಷಣದ ಪ್ರಗತಿಗೆ ಶಿಕ್ಷಕರಷ್ಟೇ ಅಲ್ಲದೆ ಜವಾಬ್ದಾರಿಯನ್ನ ತೆಗೆದುಕೊಳ್ಳಬೇಕು :-ಶಿವಪ್ಪ ಈಬೇರಿ

 

ಕುಕನೂರು:-
ವಿದ್ಯಾರ್ಥಿಗಳ ಪ್ರಗತಿಗೆ ಪೋಷಕರ ಸಹ ತಮ್ಮ ಮಕ್ಕಳಿಗೆ ಕಲಿಯುವ ಜೊತೆಗೆ ಅವರ ದಿನನಿತ್ಯ ಹೋಂವರ್ಕ್ ಮತ್ತು ಪಾಠ ಕಲಿಕೆ ಬಗ್ಗೆ ನಿಗಾ ವಹಿಸಬೇಕು ಎಂದು ಶಿವಪ್ಪ ಇಬೇರಿ, ಬಿ ಆರ್ ಪಿ ಹೇಳಿದರು.

ಅವರು ಶುಕ್ರವಾರ ದಂಡು ಕುಕನೂರು ಪಟ್ಟಣದ ಮೌಲಾನ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆ, 2025 – 26 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಬಿಲ್ಕೊಡುಗೆ ಸಮಾರಂಭ ಮತ್ತು ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಉದ್ಘಾಟನೆ ನೆರವೇರಿ ಮಾತನಾಡಿ ಪೋಷಕರ ಸಹ ತಮ್ಮ ಮಕ್ಕಳಿಗೆ ಕಳುಹಿಸುವ ಜೊತೆಗೆ ಅವರು ದಿನನಿತ್ಯ ಹೋವರ್ಕ್ ಮತ್ತು ಪಾಠ ಪ್ರವಚನಗಳ ಬಗ್ಗೆ ನಿಗಾ ವಹಿಸಬೇಕು. ಮಕ್ಕಳ ಶಾಲೆಯಲ್ಲಿ ಕಲಿತರಷ್ಟೇ ಸಾಲದು ಮನೆಯಲ್ಲಿಯೂ ಸಹ ಅವರ ಓದಿನ ಜವಾಬ್ದಾರಿಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಮಕ್ಕಳಿಗೆ ಮೊಬೈಲ್ ಕೊಟ್ಟು ಅವರನ್ನು ಸೋಮಾರಿಗಳನ್ನಾಗಿ ಮಾಡಿ. ಇದೊಂದು ವ್ಯಸನ ಇದ್ದಂತೆ, ಮೊಬೈಲ್‌ನಿಂದ ದೂರವಿರುವಂತೆ ನೋಡಿಕೊಳ್ಳಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಪರಮೇಶ್ ಪತ್ತಾರ ಮಾತನಾಡಿ ಶಾಲೆಯು ನಡೆದು ಬಂದ ಹಾದಿಯನ್ನು ಸ್ಮರಿಸಿಕೊಂಡರು. ಕುಕುನೂರು ಪಟ್ಟಣದಲ್ಲಿ ಇರುವ ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆ ಖಾಸಗಿ ಮತ್ತು ಇತರ ಶಾಲೆಗಳಿಗೆ ಶಿಕ್ಷಣದಲ್ಲಿ ಟಕ್ಕರ್ ಕೊಡುವ ಮೂಲಕ ಮುನ್ನಡೆಸಬೇಕೆಂಬ ನಮ್ಮ ಆಶಯಕ್ಕೆ ವಿದ್ಯಾರ್ಥಿಗಳು ಮತ್ತು ಬೆಂಬಲ ಸಹಕಾರ ಸದಾ ಇದೆ. ಉತ್ತಮ ವ್ಯಾಸಂಗದೊಂದಿಗೆ ವಿದ್ಯಾರ್ಥಿಗಳು ಮುನ್ನಡೆದರೆ ಮುಂದಿನ ದಿನಗಳಲ್ಲಿ ಕಾಲೇಜು ಮತ್ತು ಎಲ್ ಕೆ ಜಿ ಎಲ್ ಕೆ ಜಿ ಶಿಕ್ಷಣವನ್ನು ಪಡೆದಿದೆ ಆರಂಭಿಸದಿದ್ದರೆ. ಇದಕ್ಕೆ ಮಗುವಿಗೆ ಪರಿಪೂರ್ಣ ಶಿಕ್ಷಣವನ್ನು ಕೊಡಬೇಕೆಂಬ ನಮ್ಮ ಸಂಕಲ್ಪಕ್ಕೆ ತಮ್ಮೆಲ್ಲರ ಬೆಂಬಲ ಬೇಕು ಎಂದು ಮನವಿ ಮಾಡಿ ಶಾಲಾ ವರದಿ ವಾಚನ ಮಾಡಿದರು.

ನಂತರ ಉತ್ತಮ ಅಂಕ ಗಳಿಸಿದ ಸನ್ಮಾನ ಹಾಗೂ ಕಾರ್ಯಕ್ರಮದಲ್ಲಿ ಶಿಕ್ಷಕರಿಗೂ ಸನ್ಮಾನಿಸಲಾಯಿತು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಶಿಕ್ಷಕರಾದ ಮಂಜುನಾಥ ಯಡೆಯಾಪುರ ಪ್ರಾಸ್ತಾವಿಕ ನುಡಿಗಳ ನಾಡಿದರು.

ಈ ಸಂದರ್ಭದಲ್ಲಿ
ಕೃಷ್ಣಮೂರ್ತಿ ಗದಾರಿ ಮುಖ್ಯೋಪಾಧ್ಯಾಯರು, ಪೀರಸಾಬ್ ದಪೇದಾರ್ ಸಿಆರ್‌ಪಿ, ಶಿಕ್ಷಕರಾದ ತಿಪ್ಪರಾಜ್ , ವಿಜಯಕುಮಾರ, ಬಸವರಾಜ, ಹನುಮನ ಗೌಡ,
ರಾಜಸಾಬ ಬಿಡವಟ್ಟಿ ಎಸ್ ಡಿ ಎಂ ಸಿ ಅಧ್ಯಕ್ಷರು, ಮೈನುದ್ದೀನ್ ಎಸ್ ಡಿ ಎಂ ಸಿ ಸದಸ್ಯರು, ಹಾಗೂ ಶಾಲಾ ಶಿಕ್ಷಕರು ವಿದ್ಯಾರ್ಥಿಗಳ ಪಾಲಕರು ವಿದ್ಯಾರ್ಥಿಗಳು ಇತರರು ಇದ್ದರು.

ನಿರಂತರ ಸುದ್ದಿ ಜಾಹಿರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713

Leave a Reply

Your email address will not be published. Required fields are marked *