oplus_1026

ವಿದ್ಯುತ್ ಸುಧಾರಣ ಕಾಯ್ದೆ 2026 ಜಾರಿಗೆ ತಂದು ವಿದ್ಯುತ್ ಕಂಪನಿಗಳ ಖಾಸಗಿಕರಣಗೊಳಿಸುವ ಉದ್ದೇಶ ಹೊಂದಿರುವುದರಿಂದ ಇದನ್ನು ವಿರೋಧಿಸಿ ಪ್ರತಿಭಟನೆ.

ಕುಕನೂರು:-ಕೇಂದ್ರ ಸರಕಾರದ ಮುಂಬರುವ ಅಧಿವೇಶನದಲ್ಲಿ ವಿದ್ಯುತ್ ಸುಧಾರಣ ಕಾಯ್ದೆ 2026 ಜಾರಿಗೆ ತಂದು ವಿದ್ಯುತ್ ಕಂಪನಿಗಳ ಖಾಸಗಿಕರಣಗೊಳಿಸುವ ಉದ್ದೇಶ ಹೊಂದಿರುವುದರಿಂದ ಇದನ್ನು ವಿರೋಧಿಸಿ ಪ್ರತಿಭಟಿಸಲು ಮಾನ್ಯ ಅಧ್ಯಕ್ಷರು ಕರ್ನಾಟಕ ವಿದ್ಯುತ್ ಪ್ರಕರಣ ನಿಗಮ ನೌಕರರ ಸಂಘ( 659 )ರಿ. ಬೆಂಗಳೂರವರ ಆದೇಶದ ಮೇರೆಗೆ ಇಂದು ಕುಕನೂರ ಉಪ ವಿಭಾಗದ ಕಚೇರಿ ಆವರಣದಲ್ಲಿ ಪ್ರಾಥಮಿಕ ಸಮಿತಿ ಅಧ್ಯಕ್ಷರು /ಕಾರ್ಯದರ್ಶಿಗಳು, ಸಮಿತಿ ಸದಸ್ಯರು, ಹಾಗೂ ಸರ್ವ ಸದಸ್ಯರು, ನಿವೃತ್ತ ನೌಕರರ ಸಂಫದ ಪದಾಧಿಕಾರಿಗಳು, ರೈತ ಸಂಘದ ಪದಾಧಿಕಾರಿಗಳು, ನೇತೃತ್ವದಲ್ಲಿ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಂಡಿದ್ದು.ಪ್ರತಿಭಟನೇ ಉದ್ದೇಶಿಸಿ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಅಂದಪ್ಪ ಹುರಳಿ ಮಾತನಾಡಿ ವಿದ್ಯುತ್ ಕ್ಷೇತ್ರ ಖಾಸಗಿಕಾರಣ ಮಾಡುವುದಕ್ಕೆ ರೈತ ಸಂಘದ ವಿರೋಧ ಇದೆ, ನಿಮ್ಮ ಬೆಂಬಲಕ್ಕೆ ನಾವು ಎಲ್ಲಾ ರೈತರು ಇರುತ್ತೇವೆ ಎಂದು ನೌಕರರಿಗೆ ಹೇಳಿದರು,

ಈ ಸಂದರ್ಭದಲ್ಲಿ ಕುಕನೂರ್ ತಾಲೂಕ ಪ್ರಧಾನ ಕಾರ್ಯದರ್ಶಿ.ಈಶಪ್ಪ. ಕೆ.ಸಬರದ.ನಗರಗೌರವ ಅಧ್ಯಕ್ಷರು.ಬಸವರಾಜ ಈರಪ್ಪ ಸಬರದ.ಬಸಪ್ಪ ಮಂಡಲಗೇರಿ ಶಿವಪ್ಪ ಸಬರದ ಮಲ್ಲಪ್ಪ ಮೂಲಿಮನಿ. ಹಾಗೂ ಜೇಸ್ಕಾಂ ಇಲಾಖೆಯ ಸಹಾಯಕ ಅಭಿಯಂತರರಾದ ಮಂಗಳೆಶ ಸರ್, ಶಾಖೆಧಿಕಾರಿಗಳಾದ ಶರಣಪ್ಪ ಗುಂಡೂರು, ಆಕಾಶ ಬೆಲ್ಲದ, ವಿಜಯ ಕುಮಾರ್ ಚಿಕೊಪ್ಪ, ನಿವೃತ್ತ ವಿದ್ಯುತ್ ಇಲಾಖೆಯ ಸಿಬ್ಬಂದಿಗಳು ಹಾಗೂ ಇಲಾಖೆಯ ಅಧಿಕಾರಿ ವರ್ಗದವರು ಇತರರು ಇದ್ದರು. 

 

ನಿರಂತರ ಸುದ್ದಿ ಜಾಹಿರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713

Leave a Reply

Your email address will not be published. Required fields are marked *