ಆಕಸ್ಮಿಕ ಬೆಂಕಿಗೆ ಕಡಲೆ ಬೆಳೆ, ಹೊಟ್ಟು ಭಸ್ಮ


ಕುಕನೂರು:
ತಾಲ್ಲೂಕಿನ ಬಳಗೇರಿ ಗ್ರಾಮದ ರಾಮಪ್ಪ ಹೊಂಬಾಳೆ ಅವರಿಗೆ ಸೇರಿದ ಕಡಲೆ ಬೆಳೆ ಹಾಗೂ ಹೊಟ್ಟು ಆಕಸ್ಮಿಕ ಬೆಂಕಿಗೆ ಆಹುತಿಯಾಗಿದ್ದು, ರೈತನಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಸುಮಾರು 4 ಎಕರೆ ವಿಸ್ತೀರ್ಣದ ಕಡಲೆ ಬೆಳೆಯಲ್ಲಿ ಬೆಳೆದಿದ್ದ ಬೆಳೆಗೆ ಅಂದಾಜು ₹65 ಸಾವಿರ ಹಾಗೂ ಕಡಲೆ ಹೊಟ್ಟಿಗೆ ₹30 ಸಾವಿರ ಮೌಲ್ಯದ ನಷ್ಟ ಉಂಟಾಗಿದೆ. ಬೆಂಕಿ ವ್ಯಾಪಕವಾಗಿ ಹರಡುತ್ತಿದ್ದಂತೆ ಗ್ರಾಮಸ್ಥರು ಆತಂಕಗೊಂಡರು.
ಮಾಹಿತಿ ಪಡೆದ ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ಆರಿಸಿದ ಪರಿಣಾಮ ಹೆಚ್ಚಿನ ಅನಾಹುತ ತಪ್ಪಿತು.
ಅಗ್ನಿ ಅವಘಡದಲ್ಲಿ ಗಂಗಮ್ಮ ಹೊಂಬಾಳೆ ಅವರಿಗೆ ಬಲಗೈ ಹಾಗೂ ಬಲಮುಖದಲ್ಲಿ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ನಿರಂತರ ಸುದ್ದಿ ಜಾಹಿರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞9164386713

Leave a Reply

Your email address will not be published. Required fields are marked *