*ಹಿಂದೂ ಜಾಗೃತಾ ಸಮಾವೇಶದಲ್ಲಿ ಸರ್ವರು ಪಾಲೋಳ್ಳುವಂತೆ -ದ್ಯಾಮಣ್ಣ ಜಮಖಂಡಿ ಮನವಿ,,*

ಕುಕನೂರು:-
ಜಾತಿ, ಮತ, ಪಂಥ, ಪಕ್ಷ ಪಂಗಡ ಎನ್ನದೆ ದೇಶ ಪ್ರೇಮವನ್ನು ಜಾಗೃತಿಗೊಳಿಸುವುದು ಮತ್ತು ಭಾರತೀಯ ಮೂಲ ಮೌಲ್ಯಗಳನ್ನು ಪ್ರತಿಯೊಬ್ಬರಿಗೆ ತಲುಪಿಸುವ ಉದ್ದೇಶ ಹಿಂದು ಸಮ್ಮೇಳನ ಸಮಾಜೋತ್ಸವದ ಪ್ರಮುಖ ಗುರಿ ಎಂದು ದ್ಯಾಮಣ್ಣ ಜಮಖಂಡಿ ಮನವಿ
ಹಿಂದೂ ಸಮ್ಮೇಳನವು ಯಾವುದೇ ಜಾತಿ ಮತ ಪಂಥ ರಾಜಕೀಯ ಪಕ್ಷಕ್ಕೆ ಸೀಮಿತವಾಗಿಲ್ಲ ಇದು ಸಮಸ್ತ ಹಿಂದೂ ಬಾಂಧವರ ಏಕತೆಯ ಪ್ರತೀಕ ಎಂದು ಹಿಂದೂ ಸಮ್ಮೇಳನ ಸಮಿತಿಯ ಕುಕನೂರು ಹೋಬಳಿ ಅಧ್ಯಕ್ಷರಾದ ದ್ಯಾಮಣ್ಣ ಜಮಖಂಡಿ ಹೇಳಿದರು.
ಹಿಂದೂ ಸಮ್ಮೇಳನ, ಸಮಾಜೋತ್ಸವ ಸಮಿತಿಯ ಉಪಾಧ್ಯಕ್ಷರಾದ ಬಸವನಗೌಡ ತೋಂಡಿಹಾಳ ಇವರ ನಿವಾಸದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕುಕನೂರು ಪಟ್ಟಣದಲ್ಲಿ ಇದೇ ಫೆ. 8 ರಂದು
ಹಿಂದೂ ಸಮ್ಮೇಳನ ಸಮಿತಿ ಹೋಬಳಿ ಘಟಕದಿಂದ ಸಮಾವೇಶದ ಅಂಗವಾಗಿ ಮನೆ, ಮನೆಗೆ ತೆರಳಿ ಕಾರ್ಯಕ್ರಮದ ಕುರಿತು ತಿಳಿಸುವ ಮೂಲಕ ಹಿಂದೂ ಜಾಗೃತಾ ಕಾರ್ಯಕ್ರಮವು ಯಾವುದೇ ಪಕ್ಷ ಭೇದವಿಲ್ಲದೇ ನಾವೆಲ್ಲಾ ಹಿಂದೂ, ನಾವೆಲ್ಲ ಒಂದು ಎನ್ನುವ ವೇದದೊಂದಿಗೆ ಕಾರ್ಯಕ್ರಮ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಪಟ್ಟಣದ ಪ್ರತಿಯೊಬ್ಬ ಹಿಂದುಗಳು ಪಾಲ್ಗೋಳ್ಳಬೇಕು ಎಂದು ಮನವಿ ಮಾಡಿದರು.
ಈ ಕಾರ್ಯಕ್ರಮದ ಅಂಗವಾಗಿ ಫೆಬ್ರುವರಿ 08ರ ರವಿವಾರ ಮಧ್ಯಾಹ್ನ 3ಗಂಟೆಗೆ ಪಟ್ಟಣದ ಮಹಾಮಾಯಾ ದೇವಸ್ಥಾನದಿಂದ ಮಹಿಳೆಯರ ಕುಂಭ, ಕಳಸದೊಂದಿಗೆ ಶೋಭಾಯಾತ್ರೆ ಮೆರವಣಿಗೆಯ ಮೂಲಕ 16ನೇ ವಾರ್ಡ ಹಳೇ ಸರಕಾರಿ ಆಸ್ಪತ್ರೆಯ ಪಕ್ಕದ ನೃಪತುಂಗಾ ನಗರದ ಆವರಣದಲ್ಲಿ ವೇದಿಕೆಯ ಕಾರ್ಯಕ್ರಮ ಜರುಗಲಿದೆ.
ಈ ಕಾರ್ಯಕ್ರಮದಲ್ಲಿ ಸುಮಾರು ಐದರಿಂದ ಆರು ಸಾವಿರ ಜನರು ಸೇರುವ ನೀರಿಕ್ಷೆ ಇದ್ದು, ಪಟ್ಟಣದ ಸಮಸ್ತ ಹಿಂದುಗಳು ಪಾಲ್ಗೋಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ , ಬಸನಗೌಡ ತೋಂಡಿಹಾಳ ಉಪಾಧ್ಯಕ್ಷರು,
ಮಂಜುನಾಥ್ ನಾಡಗೌಡ್ರ ಸಂಯೋಜಕರು,
ಬಸವರಾಜ ಹಾಳಕೇರಿ, ಮಹಾಂತೇಶ ಹೂಗಾರ, ಕಳಕೇಶ ಹತ್ತಿ ಕಟಗಿ, ಮಂಗಳೇಶ ಮಂಗಳೂರು, ಬಸವರಾಜ ಉಮಚಗಿ, ಸೇರಿದಂತೆ ಇತರರು ಇದ್ದರು.
ನಿರಂತರ ಸುದ್ದಿ ಜಾಹಿರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713

