ನಾನು ಹಿಂದೂ’ ಎಂದು ಹೇಳಲು ಸಲಹೆ ನೀಡುತ್ತಿರುವುದು ವಿಷಾದ:-ಡಬ್ಲ್ಯೂ. ನಾಗರಾಜ

ಕುಕನೂರು:- ಪಟ್ಟಣದಲ್ಲಿ ಹಿಂದೂ ಸಮಾಜೋತ್ಸವದ ಪ್ರಯುಕ್ತ ನಡೆದ ಭವ್ಯ ಮೆರವಣಿಗೆ ಅದ್ಧೂರಿಯಾಗಿ ಜನರ ಗಮನ ಸೆಳೆಯಿತು.

ಹಿಂದೂ ಧರ್ಮವು ರಾಮ,ಕೃಷ್ಣ ಕಾಲ ಪುರಾತನವಾದುದು. ರಾಜ-ಮಹಾರಾಜರು ಇಲ್ಲದ ಸಂದರ್ಭದಲ್ಲಿ ಈ ದೇಶವನ್ನು ಧರ್ಮವೇ ಸುಭದ್ರವಾಗಿ ಕಾಪಾಡಿಕೊಂಡು ಬಂದಿದೆ. ಕರ್ನಾಟಕದಾದ್ಯಂತ 5 ಸಾವಿರಕ್ಕೂ ಅಧಿಕ ಸಮಾಜೋತ್ಸವಗಳು ನಡೆಯುತ್ತಿದೆ. ಇದು ಹಿಂದೂ ಸಮಾಜದ ಸ್ವಾಭಿಮಾನದ ಸಂಕೇತವಾಗಿದೆ ಎಂದು ಉತ್ತರ ಕರ್ನಾಟಕದ ಕುಟುಂಬ ಪ್ರಮೋದ ಸಂಯೋಜಕ ಡಬ್ಲ್ಯೂ ನಾಗರಾಜ್ ಪ್ರದರ್ಶನಗೊಂಡಿದೆ
1893ರಲ್ಲಿ ವಿವೇಕಾನಂದರು ನಾನೊಬ್ಬ ಹಿಂದೂ ಎಂದು ಎದೆಯುಬ್ಬಿಸಿ ಜಗತ್ತಿಗೆ ಸಾರಿದ್ದರು. ಆದರೆ,ದೇಶಕ್ಕೆ ಸ್ವಾತಂಆತ್ರ್ಯವಿದ್ದರೂ ಇಂದಿನ ಪರಿಸ್ಥಿತಿಯಲ್ಲಿ ‘ಹಿಂದೂ ಹಿಂದೂ’ ಎಂದು ನಾನು ವಿಷಾದನೀಯವಾಗಿದ್ದೇನೆ ಎಂದ.
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ ಅನ್ನದಾನೇಶ್ವರ ಶಾಖಾಮಠದ ಮಹದೇವ ಸ್ವಾಮಿಗಳು ಮತ್ತು ರಾಘವಾನಂದ ಅವಧೂತ ಆಶ್ರಮದ ಆತ್ಮಾನಂದ ಭಾರತಿ ಸ್ವಾಮೀಜಿ ಆಶೀರ್ವಚನ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಕನೂರು ಹೋಬಳಿ ಹಿಂದೂ ಸಮ್ಮೇಳನ ಸಮಿತಿಯ ಅಧ್ಯಕ್ಷ ದ್ಯಾಮಣ್ಣ ಜಮಖಂಡಿ ವಹಿಸಿದ್ದರು.
ಸಂಜೆ 3 ಗಂಟೆಗೆ ಮಹಾ ಹಿಂದೂ ಸಮಾಜೋತ್ಸವ ಶುಭಯಾತ್ರೆ ಶ್ರೀಮಾಯ ದೇವಸ್ಥಾನದಿಂದ ಗೋವಿಗೆ ಪೂಜೆಯನ್ನು ಸಮರ್ಪಿಸಿ ಪಟ್ಟಣ ಪ್ರಮುಖ ಬೀದಿಯ ಮುಖಾಂತರ ನೃಪತುಂಗ ನಗರ ಹಳೆ ಸರಕಾರಿ ಆಸ್ಪತ್ರೆ ಪಕ್ಕದಲ್ಲಿ ಹಾಕಿದ ವೇದಿಕೆಯಲ್ಲಿ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮದ ನಿರೂಪಣೆಯನ್ನು ಸುಮಾ ಓಜನಹಳ್ಳಿ, ಪಾರ್ವತಿ ಹನಸಿ ನೆರವೇರಿಸಿದರು.

ಶ್ರೀ ಮಹಾಮಾಯ ದೇವಸ್ಥಾನದಿಂದ ಕುಂಭ ಹೊತ್ತು ಮಹಿಳೆಯರು ಸಾಗಿದರು. ವಾಹನದಲ್ಲಿ ನಾಡದೇವಿ, ಗಣ್ಯರ ಭಾವಚಿತ್ರ ಮೆರವಣಿಗೆ ಮತ್ತು ವಾದ್ಯ ಮೇಳ ಮೊಳಗಿದವು. ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯ ವತಿಯಿಂದ ಈಶ್ವರ ಮೆರವಣಿಗೆ ಮತ್ತು ಬಂಜಾರ ಸಮಾಜದ ತೊಟ್ಟ ಮಕ್ಕಳು ಅತ್ಯಂತ ಸುಂದರವಾಗಿ ಭಾಗವಹಿಸಿದವರೊಂದಿಗೆ ಹೆಚ್ಚಿನ ಜನರು ಭಾಗವಹಿಸಿದ್ದರು. ಎತ್ತಿ ಬಂಡಿಯಲ್ಲಿ ರಾಷ್ಟ್ರಮಾತೆಯ ಭಾವಚಿತ್ರ ಮೆರವಣಿಗೆ ಸಾಗಿತು. ಮಾಜಿ ಸಚಿವ ಹಾಲಪ್ಪ ಆಚಾರ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಕ್ಯಾವಟರ, ಬಿಜೆಪಿ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ನವೀನ ಗುಳಗಣ್ಣವರ್, ಆರ್.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಬಸವರಾಜ ರಾಜೂರು, ಸಚಿನ ಆಚಾರ ,ಶಿವಲೀಲಾ ದಳವಾಯಿ, ಮಾರುತಿ ಗಾವರಾಳ, ಬಸವನಗೌಡ ತೊಂಡಿಹಾಳ, ಬಸಲಿಂಗಪ್ಪ ಭೂತೆ, ರಶೀದಸಾಬ್ ಹಣಜಗೇರಿ, ವೀರಣ್ಣ ಹುಬ್ಬಳ್ಳಿ, ಶಿವಕುಮಾರ ನಾಗಲಾಪೂರಮಠ, ಕರಬಸಯ್ಯ ಬಿನ್ನಾಳ, ಸಿದ್ದಿಂಗಯ್ಯ ಉಳ್ಳಾಗಡ್ಡಿ, ಅನಿಲ ಆಚಾರ್, ಮಂಜುನಾಥ ನಾಡಗೌಡ್ರು, ಬಸವರಾಜ ಹಾಳಕೇರಿ, ವಿನಾಯಕ ಯಾಳಗಿ, ಬಸವರಾಜ ಉಮಚಗಿ, ಇತರರು ಇದ್ದರು.
—– ಮುಸ್ಲಿಂ ಸಮುದಾಯದ ನಾಯಕರು ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಹಣ್ಣು ಮತ್ತು ನೀರು ವಿತರಿಸುವ ಮೂಲಕ ಭಾವೈಕ್ಯತೆ ಮೆರೆದರು .
ಹಿಂದೂ ಸಮಾಜೋತ್ಸವ ಕಾರ್ಯಕ್ರಮವು ಧಾರ್ಮಿಕ ಸಾಮರಸ್ಯ ಮತ್ತು ರಾಷ್ಟ್ರೀಯ ಏಕತೆಯ ಸಂದೇಶವನ್ನು ನೀಡಿದ ಮಹತ್ವದ ಕಾರ್ಯಕ್ರಮವಾಗಿ ಗಮನ ಸೆಳೆಯಿತು ಸೆಳೆದಿದೆ. ಕಾರ್ಯಕ್ರಮದಲ್ಲಿ ವಿವಿಧ ಸಮುದಾಯಗಳ ಪ್ರಮುಖರು, ಧಾರ್ಮಿಕ ಗುರುಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಒಗ್ಗಟ್ಟು ಮತ್ತು ಸಹೋದರತ್ವದ ಅಗತ್ಯತೆಯನ್ನು ಒತ್ತಿಹೇಳಿದರು. “ಮಾನವೀಯತೆ ಧರ್ಮಕ್ಕಿಂತ ದೊಡ್ಡದು” ಎಂಬ ಸಂದೇಶವನ್ನು ಮುಸ್ಲಿಂ ಸಮುದಾಯದ ನಾಯಕರು ನೀಡಿದ್ದು, ಸಮಾಜದಲ್ಲಿ ಶಾಂತಿ ಮತ್ತು ಪರಸ್ಪರ ಗೌರವ ಉಳಿಸಲು ಹೇಳಿದರು.
ಭಾರತ ಮಾತೆ ದೇಶಭಕ್ತಿಯ ಸಂಕೇತವಾಗಿದ್ದು, ಅನೇಕ ಸಮಾಜೋತ್ಸವ ಮತ್ತು ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಗೌರವ ಸೂಚಿಸುವ ಕಾರ್ಯಗಳು ನಡೆಯುತ್ತವೆ. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಮುಸ್ಲಿಂ ನಾಯಕರು ಭಾರತ ಮಾತೆಯ ಫೋಟೋಗೆ ಹೂಹಾರ ಅರ್ಪಿಸಿದರು. ..

ನಿರಂತರ ಸುದ್ದಿ ಜಾಹೀರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713