ಜೋಳ ಮತ್ತು ಕಡಲೆ ಬೆಳೆಯಲ್ಲಿ ಕ್ಷೆತ್ರೋತ್ಸವ

ಕುಕನೂರು ಹೊಬಳಿಯ ದ್ಯಾಂಪೂರ್ ಮತ್ತು ರಾಜುರು ಗ್ರಾಮಗಳಲ್ಲಿ ಜೋಳ ಮತ್ತು ಕಡಲೆ ಬೆಳೆಯಲ್ಲಿ ಕ್ಷೆತ್ರೋತ್ಸವವನ್ನು ಆಯೋಜಿಸಲಾಗಿತ್ತು. ಸುಧಾರಿತ ಬೇಸಾಯ ಕ್ರಮಗಳ ಕುರಿತು ಡಾ. ಎಂ.ವಿ. ರವಿ ವಿಸ್ತರಣಾ ಮುಂದಾಳು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ರವರು ಕಾರ್ಯಕ್ರಮ ಕುರಿತು ರೈತರಿಗೆ ಮಾಹಿತಿ ನೀಡಿ ಮಾತನಾಡಿದರು.
ಬಸವರಾಜ ತೇರಿನ, ಕೃಷಿ ಅಧಿಕಾರಿಗಳು, ರೈತ ಸಂಪರ್ಕ ಕೇಂದ್ರ, ಕುಕನೂರು ಇವರು ರೈತರು ಮಣ್ಣಿನ ಆರೋಗ್ಯ ಕುರಿತು ಗಮನ ಹರಿಸಬೇಕು, ಬೆಳೆ ಪರಿವರ್ತನೆ ಮಾಡಬೇಕು ಮತ್ತು ಕಡ್ಡಾಯವಾಗಿ ಬಿಜೋಪಚಾರ ಮಾಡಬೇಕು ಎಂದು ವಿವರಿಸಿದರು.
ವಾಮನ ಮೂರ್ತಿ, ಸಹಾಯಕ ಪ್ರಾಧ್ಯಾಪಕರು ಜೋಳ ಮತ್ತು ಕಡಲೆ ಬೆಳೆಯಲ್ಲಿನ ಪೋಷಕಾಂಶಗಳು, ಕೀಟ, ರೋಗಗಳ ಕುರಿತು ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಜಿಡಿ ಕೊಲಜಿ ATM, ರೈತ ಸಂಪರ್ಕ ಕೇಂದ್ರ, ಕುಕನೂರು ಹಾಗೂ ಗ್ರಾಮದ ಪ್ರಗತಿಪರ ರೈತರಾದ ವೀರಯೃ ಶಿರೂರಮಠ, ಹೊನ್ನಪ್ಪ ಮರಡಿ, ಹಣಮಂತ ತಳವಾರ, ಗುರುಪಾದಪ್ಪ ಹಾಗೂ ಇತರ ಪ್ರಗತಿಪರ ರೈತರು ಇದ್ದರು.