ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೊಪ್ಪಳ ವಿಭಾಗ ಕುಕನೂರು ಘಟಕ ದಲ್ಲಿ ಅಗ್ನಿಗೆ ಆಹುತಿಯಾದ ಬಸು

ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ ಕೊಪ್ಪಳ ವಿಭಾಗ ಕುಕುನೂರು ಘಟಕದಲ್ಲಿ ಮಂಗಳವಾರ ರಾತ್ರಿ 12:45ರ ಸುಮಾರಿಗೆ ಶಾರ್ಟ್ ಸರ್ಕ್ಯೂಟ್ ನಿಂದ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡು ಬೆಂಕಿ ಹತ್ತಿಕೊಂಡು ಬಸ್ಸು ಕರಕಲಾಗಿದೆ.
ಮಂಗಳವಾರ ದಿನದಂದು ಕುಕುನೂರು ಪಟ್ಟಣದ ಘಟಕದಿಂದ ಬಸ್ಸು ಎಸ್ಎಫ್ಎಸ್ ಶಾಲಾ ವಿದ್ಯಾರ್ಥಿಗಳು ಟ್ರಿಪ್ ಗಾಗಿ ಬೆಳಗ್ಗೆ ಹುಬ್ಬಳ್ಳಿ ಕರೆದುಕೊಂಡು ಹೋಗಿ ಬಂದು ರಾತ್ರಿ 12:45 ಸುಮಾರಿಗೆ ಘಟಕದಲ್ಲಿರುವ ಬಸ್ಸಿನಲ್ಲಿ ಶಾರ್ಟ್ ಸರ್ಕ್ಯೂಟ್ ಬೆಂಕಿ ಹತ್ತಿಕೊಂಡು ಬಸ್ಸು ಸುಟ್ಟು ಕರ್ಕಲಾಗಿದೆ ಎಂದು ಕುಕುನೂರು ರಸ್ತೆ ಸಾರಿಗೆ ಘಟಕದ ಘಟಕ ಅಧಿಕಾರಿಯದ ವೆಂಕಟಾಚಲಪತಿ ಮಾಹಿತಿ ನೀಡಿದರು.

ಸುಮಾರು ಅಂದಾಜು ಐದರಿಂದ ಹತ್ತು ಲಕ್ಷ ಬೆಲೆಬಾಳುವ ಬಸ್ಸು ಸುಟ್ಟು ಕರಕಲಾಗಲು ಅಧಿಕಾರಿಗಳ ಹಾಗೂ ಅಲ್ಲಿರುವ ಮೆಕಾನಿಕ್ ಗಳ ನಿರ್ಲಕ್ಷವೇ ಕಾರಣವಾಗಿರಬಹುದು ಎಂದು ಕೇಳಿ ಬರುತ್ತಿದೆ.
ಕುಕನೂರು ಘಟಕದಲ್ಲಿರುವ ಬಸ್ಗಳ ನಿರ್ವಹಣೆ ಕೊರತೆ ಎದ್ದು ಕಾಣುತ್ತಿದ್ದು ಇಂತಹ ಅವಗಡಗಳು ಸಂಭವಿಸುವ ಮುನ್ನ ಸಂಬಂಧ ಪಟ್ಟ ಘಟಕ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಂಡು ಮುಂದೆ ನಡೆಯಲು ಅವಘಡಗಳನ್ನು ಎಚ್ಚೆತ್ತುಕೊಳ್ಳಬೇಕು ಎಂದು ಸಾರ್ವಜನಿಕ ಅಭಿಪ್ರಾಯವಾಗಿದೆ.
ಘಟಕದ ಘಟಕ ವ್ಯವಸ್ಥಾಪಕರು ಪ್ರತಿಯೊಂದು ಬಸ್ಸನ್ನ ಘಟಕದಿಂದ ಹೊರಗೆ ಕಳಿಸುವಾಗ ವ್ಯವಸ್ಥಿತವಾಗಿ ನಿರ್ವಹಣೆ ಇದೆಯೋ ಅಥವಾ ಇಲ್ಲವೋ ಎಂಬುದನ್ನು ಅರಿತು ಬಸ್ಸನ್ನ ಹೊರಗಡೆ ಚಲಾಯಿಸಲು ಬಿಡಬೇಕು.
ಇಲ್ಲವಾದಲ್ಲಿ ಸಾರ್ವಜನಿಕ ಜೀವ ಹಾನಿ ಯಾಗುವ ಸಂಭವ ಒದಗಿ ಬರುವುದು ಇನ್ನು ಮುಂದಾದರು ಘಟಕ ವ್ಯವಸ್ಥಾಪಕರು ಸರಿಯಾಗಿ ನಿರ್ವಹಣೆಯನ್ನು ಮಾಡಿಕೊಂಡು ಹೋಗಬೇಕು ಎಂದು ಸಾರ್ವಜನಿಕರು ಅಭಿಪ್ರಾಯವಾಗಿದೆ.
ಸಾರಿಗೆ ಇಲಾಖೆ ನಿರ್ಲಕ್ಷದಿಂದ ಬಸ್ಸು ಸುಟ್ಟು ಸಾರಿಗೆ ಇಲಾಖೆ ಘಟಕಕ್ಕೆ ನಷ್ಟವನ್ನು ಹೊಂದುವಂತಾಯಿತು, ಇನ್ನು ಮುಂದಾದರು ಎಚ್ಚೆತ್ತುಕೊಳ್ಳುವರು ಇಲ್ಲವೋ ಅಧಿಕಾರಿಗಳು ?
ನಿರಂತರ ಸುದ್ದಿ ಜಾಹಿರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713
