ರಸ್ತೆಯಲ್ಲಿ ಸಂಚಾರ ಸುರಕ್ಷತೆಗಾಗಿ ಟ್ರಾಫಿಕ್ ನಿಯಮ ಪಾಲಿಸಬೇಕು:-ವಿಜಯಲಕ್ಷ್ಮಿ

ಕುಕನೂರು ಪಟ್ಟಣದ ದ್ಯಾಂಪೂರ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ತಾಲೂಕ ಕಾನೂನು ಸೇವಾ ಸಮಿತಿ ಯಲಬುರ್ಗಾ ಹಾಗೂ ನಿರಂತರ ಶಿಕ್ಷಣ ಮತ್ತು ಗ್ರಾಮೀಣಾಅಭಿವೃದ್ಧಿ ಟ್ರಸ್ಟ್ ಕುಕನೂರು ಇವರ ಸಂಯುಕ್ತಾಕ್ಷರದಲ್ಲಿ ಗುರುವಾರದಂದು ಮೋಟಾರ ವಾಹನ ಕಾಯ್ದೆ 1988 ಮತ್ತು ಮಕ್ಕಳ ಹಕ್ಕುಗಳು ಹಾಗೂ ಕಾನೂನುಗಳ ಅರಿವು ನೆರವು ನೆರವೇರಿಸಲಾಯಿತು.
ಕಾನೂನಿನ ಅರಿವು ನೆರವು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವನ್ನು ವಿಜಯಲಕ್ಷ್ಮಿ ವಿ. ನವಲಗುಂದ ಪ್ಯಾನಲ್ ವಕೀಲರು ಮಾತನಾಡಿ 1988 ರಲ್ಲಿ ಭಾರತ ಸರ್ಕಾರ ಜಾರಿಗೆ ತಂದಿರುವ ಮೊಟಾರು ವಾಹನ ಕಾಯ್ದೆಯ ಬಗ್ಗೆ ಮಾತನಾಡುತ್ತಾ 18 ವರ್ಷ ಪೂರೈಸದ ಮಕ್ಕಳು ವಾಹನ ಚಲಾಯಿಸಬಾರದು ಚಲಾಯಿಸಿದರೆ ಆ ಮಕ್ಕಳ ಪೊಷಕರಿಗೆ ದಂಡವಿಧಿಸಲಾಗುವುದು ಎಂದು ತಿಳಿಸಿದರು. ಕಾಯ್ದೆಯ ಅಡಿಯಲ್ಲಿ ತಿಳಿಸಿರುವ ರಸ್ತೆ ಸಂಚಾರ ಸುರಕ್ಷತೆಗಾಗಿ ಟ್ರಾಫಿಕ್ ನಿಯಮಗಳನ್ನು ಪಾಲಿಸಬೇಕು. ಹೆಲ್ಮೆಟ್ ಧರಿಸುವುದು, ಸೀಟ್ ಬೆಲ್ಟ ಹಾಕುವುದು,ವಾಹನ ಚಾಲನೆ ವೇಳೆಯಲ್ಲಿ ಮೊಬೈಲ್ ಬಳಸದಿರುವುದು, ಮದಪಾನ ಮಾಡಿ ವಾಹನ ಚಲಾಯಿಸದಿರುವುದು,ವೇಗವನ್ನು ಮಿತಿಯಲ್ಲಿರಿಕೊಳ್ಳುವುದು, ಸಿಗ್ನಲ್ ಜಂಪ್ ಮಾಡದಿರುವುದು ನಿಯಮಗಳಾಗಿದ್ದು ಇವುಗಳ ಉಲ್ಲಂಘಿಸಿದರೆ ಮತ್ತು ಅದರಿಂದ ಅಪಘಾತಗಳು ಸಂಭವಿಸಿದರೆ ಭಾರಿ ದಂಡ ಕಟ್ಟುವುದರ ಜೊತೆಗೆ ಶಿಕ್ಷೆಗೂ ಒಳಗಾಗಬಹುದು ಎಂದು ಎಚ್ಚರಿಸಿದರು.ಚಾಲನಾ ಪರವಾನಗಿ (DL), ನೊಂದಣಿ ಪ್ರಮಾಣ ಪತ್ರ (RC), ವಿಮೆ (Insurance) ಮತ್ತು ಇತರೆ ದಾಖಲೆಗಳನ್ನು ಯಾವಾಹಲು ಇಟ್ಟುಕೊಳ್ಳಬೇಕು ಎಂದು ತಿಳಿಸಿದರು. ಅಪಘಾತ ಸಂಭವಿಸಿದರೆ ಪರಿಹಾರವನ್ನು ಪಡೆದುಕೊಳ್ಳುವ ವಿಧಾನಗಳ ಬಗ್ಗೆಯೂ ತಿಳಿಸಲಾಯಿತು. ನಂತರ ಮಕ್ಕಳ ಹಕ್ಕುಗಳು ಮತ್ತು ಕಾನೂನುಗಳ ಬಗ್ಗೆಯೂ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಮಹಮದ್ ಖಧೀರ್ ಅಧ್ಯಕ್ಷೀಯ ಭಾಷಣ ಮಾಡುತ್ತ ಮಕ್ಕಳು ಹಕ್ಕುಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಶಿಕ್ಷಣ ಮತ್ತು ಅಂಕಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಟ್ರಸ್ಟ್ ವತಿಯಿಂದ ಅಧ್ಯಕ್ಷರು ಮತ್ತು ಅತಿಥಿಗಳಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರಮೇಶ್ ಎಸ್. ಗಜಕೋಶ-ಕಾನೂನು ಸಲಹೆಗಾರರು, ಪಟ್ಟಣ ಪಂಚಾಯತ್ ಕುಕುನೂರು, ಹಾಗೂ ಶಾಲೆಯ ಶಿಕ್ಷಕಿಯರು ವಿದ್ಯಾರ್ಥಿಗಳು ಇತರರು ಇದ್ದರು.
ನಿರಂತರ ಸುದ್ದಿ ಜಾಹೀರಾತು ಪ್ರಕಟಣೆಗಾಗಿ, ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713