ಯಶಸ್ವಿಯಾಗಿ ಅವಧಿ ಪೂರೈಸಿದ ಗ್ರಾಮ ಪಂಚಾಯತ ಸದಸ್ಯರು : ಸಿದ್ದನಗೌಡ ರಬ್ಬನ ಗೌಡ್ರು

ಕುಕುನೂರ: ಕುಕನೂರು ತಾಲೂಕ ವ್ಯಾಪ್ತಿಯಲ್ಲಿ ಬರುವ ರಾಜೂರ ಗ್ರಾಮ ಪಂಚಾಯಿತಿಯಲ್ಲಿ ಐದು ವರ್ಷ ಅವಧಿ ಪೂರ್ಣಗೊಳಿಸಿದ ಗ್ರಾಮ ಪಂಚಾಯಿತಿ ಎಲ್ಲಾ ಸದಸ್ಯರಿಗೆ ಸನ್ಮಾನಿಸಿ ಬಿಳ್ಕೊಟ್ಟ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಮತ್ತು  ಅಭಿವೃದ್ಧಿ ಅಧಿಕಾರಿಗಳು ನಂತರ ನನ್ನ ಸೇವಾ ಅವಧಿಯಲ್ಲಿ ಇಂತಹ ಸಹಾನುಭೂತಿ ಹಾಗೂ ಸಹಕಾರ ಮನಭಾವವುಳ್ಳಂತಹ ಸದಸ್ಯರನ್ನ ನೋಡಿದ್ದು ಇದೆ ಅವಧಿಯಲ್ಲಿ ಎಂದು ಹೇಳಲು ಬಹಳ ಹೆಮ್ಮೆ ಇದೆ ಎಂದರು ಇಂತಹ ಸದಸ್ಯರು ಆಯ್ಕೆಯಾಗಿದ್ದರಿಂದಲೇ ಸಾಕ್ಷಿ ಎಂಬಂತೆ ನಮ್ಮ  ಗ್ರಾಮ ಪಂಚಾಯಿತಿಗೆ 2024-25 ಸಾಲಿನಲ್ಲಿ ನಮ್ಮ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ಬಂದಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದು ತಮ್ಮ ಮನದಾಳದ ಮಾತನ್ನು ನುಡಿದರು ತದನಂತರ ಮಾತನಾಡಿದ ಸದಸ್ಯ ಬಸವರಾಜ್ ರೆಡ್ಡಿ ಚಿಕ್ಕ ವಯಸ್ಸಿನವರು ನಾವು ಸದಸ್ಯರಾಗಿ ಬಂದ ಮೇಲೆ ಏನೇನೋ ಅಭಿವೃದ್ಧಿ ಕನಸುಗಳನ್ನು ಕಂಡು  ಬಂದಿರುತ್ತೇವೆ ಆದರೆ ವಾಸ್ತವ ಸ್ಥಿತಿಯೇ ಬೇರೆ,ಅದಾಗಿಯೂ ಶಾಸಕರು ಹಾಗೂ ಅಧಿಕಾರಿ ವರ್ಗಗಳ ದುಂಬಾಲು ಬಿದ್ದು  ಅಷ್ಟಿಷ್ಟೋ  ಗ್ರಾಮದ ಅಭಿವೃದ್ಧಿ ಕೆಲಸವನ್ನ ಮಾಡಿದ್ದೇವೆ ಎನ್ನುವ ಆತ್ಮತೃಪ್ತಿ ಇದೆ ಎಂದು ಹೇಳಿದರು ನಂತರ ಹಿರಿಯರಾದ ಭೀಮರೆಡ್ಡಿ ಮಾದನೂರು ಅವರು ಮಾತನಾಡಿ ಒಳ್ಳೆಯ ಸದಸ್ಯರ ಬಳಗದೊಂದಿಗೆ ಮುನ್ನಡೆಸಿದ ಹೆಮ್ಮೆ ಇದೆ ಎಂದರು  ಮತ್ತು  ನಮ್ಮ ಸದಸ್ಯರೆಲ್ಲರೂ ಸಹಕಾರ ಮನೋಭಾವದವರು ಇದ್ದಿದ್ದರಿಂದಲೇ ಎಲ್ಲಾ ಕಾರ್ಯಗಳು ಸರಾಗವಾಗಿ ನಡೆದವು ಎಂದರು ಈ ಸಂದರ್ಭದಲ್ಲಿ  ಅಧ್ಯಕ್ಷರಾದಂತಹ ಮಂಜುಳಾ ಮಾಲಗಿತ್ತಿ ಉಪಾಧ್ಯಕ್ಷರಾದಂತ ಕೋಟೆಪ್ಪ ಗೊಂದಿ ಸದಸ್ಯರುಗಳಾದಂತಹ ವೀರಪ್ಪ ಬಿಡ್ನಾಳ ವಿಜಯಕುಮಾರ್ ಮಾದಿನೂರ ಶಿವನಪ್ಪ ಹೂಗಾರ ಹುಲ್ಲಮ್ಮ  ರತ್ನಮ್ಮ ಬುಡ್ಡಮ್ಮ ಭೀಬಿ ಜಾನ್  ದೇವಮ್ಮ ಶರಣಮ್ಮ ಶಾಂತ ಮೂಲಿಮನಿ  ಶೈನಜಾ ಬೇಗo ಹಾಗೂ ಸಿಬ್ಬಂದಿಗಳಾದಂತಹ  ಬಸವರಾಜ ಹುಬಳ್ಳಿ  ರಾಜ ಸಾಬ ದಾವಲ್ ಸಾಬ ನಿಂಗಪ್ಪ ಗೊಂದಿ ಮಂಗಳೇಶ್ ಮತ್ತು ಸಾರ್ವಜನಿಕರು  ಭಾಗವಹಿಸಿದ್ದರು.

 

ನಿರಂತರ ಸುದ್ದಿ ಜಾಹಿರಾತು ಪ್ರಕಟಣೆಗಾಗಿ, ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713

Leave a Reply

Your email address will not be published. Required fields are marked *