ಐತಿಹಾಸಿಕ ಹಿನ್ನೆಲೆ ಉಳ್ಳ ಬೈರನಾಯಕನಹಳ್ಳಿ, ಶ್ರೀ ಮಾರುತೇಶ್ವರನ ಜಾತ್ರೆ:- ಶಿವನಗೌಡ ಪೊಲೀಸ್ ಪಾಟೀಲ್,

ನಿರ್ಭಯ ದೃಷ್ಟಿ ನ್ಯೂಸ್******””

ಕುಕನೂರು:- ರ್ಜಾರೆ ಉತ್ಸವಗಳು ನೆರವೇರಬೇಕಾದರೆ ಗ್ರಾಮದ ಎಲ್ಲರ ಸಹಾಯ ಸಹಕಾರ ಇದ್ದಾಗ ಮಾತ್ರ ಸಾಧ್ಯ ಅಂತರಲ್ಲಿ ಒಳ್ಳೆಯ ಸಾಧಕರನ್ನು ಹುಡುಕಾಡಿ ಪ್ರತಿ ವರ್ಷ ಜಾತ್ರೆಗೆ ಅಂತಹ ವಿಶೇಷ ಸಾಧಕರನ್ನು ಕರೆಸಿ ಸನ್ಮಾನ ಮಾಡುತ್ತಿರುವುದು ಬೈರನಾಯಕನಹಳ್ಳಿಯ ಒಂದು ಐತಿಹಾಸಿಕ ಹಿನ್ನೆಲೆ ಮಾರುತೇಶ್ವರನ ಜಾತ್ರೆ ಎಂದು ವಿಶೇಷ ಸಾಧಕರಾದ ಶಿವನಗೌಡ ಪೊಲೀಸ್ ಪಾಟೀಲ್ ನವಲಹಳ್ಳಿ ಸನ್ಮಾನ ಸ್ವೀಕರಿಸಿದರು.

 

ಅವರು ಕುಕನೂರು ತಾಲೂಕಿನ ಬೈರನಾಯಕನಹಳ್ಳಿಯ ಶ್ರೀ ಮಾರುತೇಶ್ವರ ಐದನೇ ವರ್ಷದ ರಥೋತ್ಸವದ ಕಾರ್ಯಕ್ರಮದಲ್ಲಿ ಹೇಳಿದರು. 

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪರುಶುರಾಮ ನಾಯಕ ಮಾತನಾಡಿ ಗತ ವೈಭವ ಸಾರುವ ಶ್ರೀ ಮಾರುತೇಶ್ವರನ ರಥೋತ್ಸವ ನೋಡಲು ಎರಡು ಕಣ್ಣು ಸಾಲದು ಪುಣ್ಯವಂತರು ಮಾತ್ರ ಇಂತಹ ಒಂದು ಜಾತ್ರೆಯನ್ನು ನೋಡಿ ಶ್ರೀ ಮಾರುತೇಶ್ವರನ ಕೃಪಾಶೀರ್ವಾದ ಪಡೆದು ಪ್ರಸಾದ ಸವಿಯಲು ಸಾಧ್ಯ ಗ್ರಾಮದ ಎಲ್ಲರ ಸಹಕಾರ ಮತ್ತು ಹೊಂದಾಣಿಕೆ ಮನೋಭಾವದಿಂದ ಜಾತ್ರಾ ಕಾರ್ಯಕ್ರಮಗಳು ಯಾವುದೇ ಅಡೆತಡೆಗಳು ತೊಂದರೆಗಳಿಲ್ಲದೆ ಸುಗಮವಾಗಿ ಸಾಗಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮದ ಎಲ್ಲರ ಸಹಕಾರದಿಂದ ಈ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನಡೆದಿದೆ ಎಂದು ಹೇಳಿದರು.

ಬೇವೂರು ಆರಕ್ಷಕ ಜಾತ್ರೆ ಠಾಣೆಯ ಎಸ್ ಪಿ ನಾಯಕ್ ಪಿಎಸ್ಐ ಮತ್ತು ಸಿಬ್ಬಂದಿ ವರ್ಗದವರು ಅತ್ಯಂತ ಸುಗಮವಾಗಿ ,ಸುರಕ್ಷಿತವಾಗಿ, ಶಿಸ್ತು ಬದ್ಧವಾಗಿ , ಅಚ್ಚುಕಟ್ಟಾಗಿ ನೆರವೇರಲು ಬಿಗಿ ಬಂದೋಬಸ್ತ್ ನೆರವೇರಿಸಿದ್ದರು.

ಪ್ರತಿ ವರ್ಷ ಈ ವರ್ಷವೂ ಕೂಡ ಶ್ರೀ ಮಾರುತೇಶ್ವರನ ಜಾತ್ರಾ ಮಹೋತ್ಸವದ ಅಂಗವಾಗಿ ಜನವರಿ 26 ದಂದು ಸಾಯಂಕಾಲ 4:00 ಗಂಟೆಗೆ ಶ್ರೀ ಮಾರುತೇಶ್ವರನಿಗೆ ಬ್ರಾಹ್ಮಣೋತ್ತಮರಿಂದ ಅಭಿಷೇಕ ಪೂಜೆ ನೆರವೇರಿಸಲಾಯಿತು. ಸಂಜೆ 6 ಗಂಟೆಗೆ ಅರ್ಚಕರವರ ಮನೆಯಿಂದ ಶ್ರೀ ಮಾರುತೇಶ್ವರನ ಆಭರಣಗಳ ಪೆಟ್ಟಿಗೆ ಹಾಗೂ ಬೆಳ್ಳಿ ಮೂರ್ತಿಯು ಶ್ರೀ ಮಾರುತೇಶ್ವರನ ದೇವಸ್ಥಾನಕ್ಕೆ ಮೆರವಣಿಗೆಯ ಮೂಲಕ ತರಲಾಯಿತು. ರಾತ್ರಿ 8 ಗಂಟೆಗೆ ಗ್ರಾಮದ ಮಾಲಿಗೌಡರ ಮನೆಯಿಂದ ಗ್ರಾಮದ ಭಕ್ತಾದಿಗಳಿಂದ ಮೆರವಣಿಗೆ ಮೂಲಕ ಕಳಸವನ್ನು ಗೋಪುರಕ್ಕೆ ಏರಿಸಲಾಯಿತು. ರಾತ್ರಿ 10:00 ಗಂಟೆಗೆ ಅಗ್ನಿಕುಂಡದಲ್ಲಿ ಅಗ್ನಿ ಸ್ಪರ್ಶ ಮದ್ದು ಸುಡುವುದು . ನಂತರ ಜಾತ್ರೆಗೆ ಬಂದ ಸರ್ವಭಕ್ತರಿಗೂ ಅನ್ನ ಸಂತರ್ಪಣೆ . ನಂತರ ಭಕ್ತಾದಿಗಳಿಂದ ಹರಕೆ ಸೇವೆ ಕಾರ್ಯಕ್ರಮಗಳು ನೆರವೇರಿದವು.

ಜನವರಿ 27 ಮಂಗಳವಾರ ಬ್ರಾಹ್ಮಿ ಮುಹೂರ್ತದಲ್ಲಿ ಬೆಳಗ್ಗೆ 4:00 ಗಂಟೆಗೆ ಶ್ರೀ ಮಾರುತೇಶ್ವರನ ಕಳಸಾರೋಹಣ 4: 30 ಗಂಟೆಗೆ ಶ್ರೀ ಮಾರುತೇಶ್ವರನ ದೇವಸ್ಥಾನದಿಂದ ಡೊಳ್ಳು, ಭಜನೆ, ಕಳಸ, ಕನ್ನಡಿ, ಬಾಜಾ ಭಜಂತ್ರಿ ಸಕಲ ವಾದ್ಯಗಳೊಂದಿಗೆ ದೈವದವರ ಸಂಗಡ ಮೆರವಣಿಗೆಯಿಂದ ದೇವರಕೋಣೆಗೆ ತಲುಪುವುದು. ನಂತರ 5:00 ಗಂಟೆಗೆ ಗಂಗಾ ಪೂಜೆ 5:30 ಕ್ಕೆ ಪಾಯಸ ಪವಾಡ ನಂತರ ಅರ್ಚಕರ ಮನೆಯಿಂದ ಬರಿಬಾನ ತರುವುದು. ನಂತರ ಶ್ರೀ ಅಜ್ಜನವರ ಭಕ್ತರನ್ನು ಕರೆದೊಯ್ದು ಅಗ್ನಿಕುಂಡದಲ್ಲಿ ಹಾಯುವರು. ನಂತರ 9 ಗಂಟೆಗೆ ಶ್ರೀ ಮಾರುತೇಶ್ವರನ ಉತ್ಸವಕ್ಕೆ ಹಿರೇಹಳ್ಳಿಯವರ ಮನೆಯಿಂದ ಎದೆ (ನೈವೇದ್ಯ) ತರುವುದು. 10 ಗಂಟೆಗೆ ಮಾರುತೇಶ್ವರನ ಉತ್ಸವ ಸಾಗುವುದು. 12 ಗಂಟೆಗೆ ಸಂಜೆ ಜಾತ್ರೆಗೆ ಆಗಮಿಸಿದ ಎಲ್ಲಾ ಸಕಲ ಸದ್ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಮತ್ತು ಮಧ್ಯಾಹ್ನ 1:00 ಗಂಟೆಯಿಂದ ಸಾಯಂಕಾಲ 4:00 ವರೆಗೆ ಮುಂಗೈ ಆಟಗಳು ನಡೆಯುವವು. ಹಾಗೂ ಮಂಗಳೂರು ಗ್ರಾಮದ ಭಕ್ತಾದಿಗಳು ಶ್ರೀ ಮಾರೇಶ್ವರನ ರಥೋತ್ಸವಕ್ಕೆ ಹಗ್ಗವನ್ನು ಭಕ್ತಿಯಿಂದ ಕೊಡುತ್ತಾರೆ ಹಾಗೂ ನೆಲಜೇರಿ ಗ್ರಾಮದ ಭಕ್ತಾದಿಗಳಿಂದ ರುದ್ರಾಕ್ಷಿ ಸರ, ಮೆರವಣಿಗೆಯ ಮೂಲಕ ತರುವುದು. ಸಾಯಂಕಾಲ 5:30ಕ್ಕೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ಸಂಪನ್ನಗೊಂಡಿತು.

ಜಾತ್ರಾ ಮಹೋತ್ಸವದಲ್ಲಿ ದಿವ್ಯ ಸಾನಿಧ್ಯ ಮತ್ತು ಧ್ವಜಾರೋಹಣ ಸಂಗಯ್ಯ ಶರಣಯ್ಯ ಸ್ವಾಮಿಗಳು ಹಿರೇಮಠ, ಪರ್ವತಯ್ಯ ಸ್ವಾಮಿ ಹಿರೇಮಠ ನೆಲೆಜೇರಿ, ಮಂಜುನಾಥ್ ಪೂಜಾರ ಅರ್ಚಕರು ನೆರವೇರಿಸಿದರು.

ಶ್ರೀ ಮಾರುತೇಶ್ವರನ ಜಾತ್ರೆಗೆ ಆಗಮಿಸಿ ಸಕಲ ಸದ್ಭಕ್ತಾದಿಗಳು ಪ್ರಸಾದ ಸ್ವೀಕರಿಸಿ ಶ್ರೀ ಮಾರುತೇಶ್ವರನ ಕೃಪೆಗೆ ಪಾತ್ರರಾದರು.

ವೇದಿಕೆಯ ಕಾರ್ಯಕ್ರಮದ ನಿರೂಪಣೆಯನ್ನು ಗವಿಸಿದ್ದಪ್ಪ ಕಣಗಣ್ಣರ್ ನೆರವೇರಿಸಿದರು.

ಇನ್ನು ವಿವಿಧ ಸಾಧಕರಿಗೆ ಗ್ರಾಮದ ಗುರು ಹಿರಿಯರಿಗೆ ಗಣ್ಯರಿಗೆ ಮುಖಂಡರಿಗೆ ಸನ್ಮಾನಿಸಲಾಯಿತು. 

ಈ ಸಂದರ್ಭದಲ್ಲಿ ವೇದಿಕೆಯ ಮುಖ್ಯ ಅತಿಥಿಗಳಾಗಿ

ಶರಣಪ್ಪ ಉಮಚಗಿ ಉಪನ್ಯಾಸಕರು ವಿದ್ಯಾನಂದ ಗುರುಕುಲ ಕುಕನೂರು, ಸುರೇಶ್ ಗೂಳೆ ತನುಶ್ರೀ ಸೀಡ್ಸ್ ಖಾಸಗಿ ಸಂಸ್ಥೆ ಧೂಪದಳ್ಳಿ, ದೇವೇಂದ್ರ ಗೌಡ್ರು ಸಹಕಾರಿ ಸಂಘದ ಅಧ್ಯಕ್ಷರು ಧೂಪದ ಶಿವನಗೌಡ ಪೊಲೀಸ್ ಪಾಟೀಲ್ ನವಲಹಳ್ಳಿ, ಸುರೇಶ ಮಡಿವಾಳರು ತಾಲೂಕ ನೌಕರರ ಸಂಘದ ಅಧ್ಯಕ್ಷರು, ಕಲ್ಲಪ್ಪ ಶಿಕ್ಷಕರು, ರಫಿ ಶಿಕ್ಷಕರು, ಗವಿ ಸಿದ್ದಪ್ಪ ಜಿನ್ನಾಪುರ ಗ್ರಾಮ ಪಂಚಾಯತ್ ಸದಸ್ಯರು, ಸೋಮಣ್ಣ ಸಣ್ಣ ಹಳ್ಳಿ, ಹನುಮಂತಪ್ಪ ಮ್ಯಾಡನೇರಿ, ಶಿವಪುತ್ರಪ್ಪ ಶಿವಶಂಪಿ, ಹನುಮಂತ ಹಳ್ಳಿ ಶ್ರೀ ರಾಮ್ ಸೀಡ್ಸ್, ಮಹಾಂತೇಶ್ ಗ್ರಾಮ ಲೆಕ್ಕಾಧಿಕಾರಿ, ಹಾಗೂ ದೇವಸ್ಥಾನದ ಅರ್ಚಕರು ಸೇವಾ ಸಮಿತಿಯವರು ಗ್ರಾಮದ ಗುರುಹಿರಿಯರು ಯುವಕರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಬಜನಾ ಮಂಡಳಿಯ ಮತ್ತು ಪೊಲೀಸ್ ಇಲಾಖೆ ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದ ಸದಸ್ಯರು ಇತರರು ಇದ್ದರು.

 

ನಿರಂತರ ಸುದ್ದಿ ಜಾಹಿರಾತು ಪ್ರಕಟಣೆಗಾಗಿ, ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ📞 📞 ಕನ್ನಡ 9164386713

Leave a Reply

Your email address will not be published. Required fields are marked *