“ವಿಬಿ-ಜಿ ರಾಮ್ ಜಿ’ ಯೋಜನೆ ಜಾರಿಗೆ ವಿರೋಧಿಸುತ್ತಿರುವ ಕಾಂಗ್ರೆಸ್ ಪಕ್ಷ ಕನಿಷ್ಠ ನೈತಿಕತೆ ಉಳಿಸಿಕೊಂಡಿಲ್ಲ:-ಹಾಲಪ್ಪ ಆಚಾರ್

ಕುಕನೂರುನಿರ್ಭಯ ದೃಷ್ಟಿ ನ್ಯೂಸ್****
“ವಿಬಿ-ಜಿ ರಾಮ್ ಜಿ’ ಯೋಜನೆ ಜಾರಿಗೆ ವಿರೋಧಿಸುತ್ತಿರುವ ಕಾಂಗ್ರೆಸ್ ಪಕ್ಷ ಕನಿಷ್ಠ ನೈತಿಕತೆ ಉಳಿಸಿಕೊಂಡಿಲ್ಲ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಮಾತನಾಡಿದರು.
ಅವರು, ಕುಕನೂರು ಪಟ್ಟಣದ ಮಸಬ ಹಂಚನಾಳ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ ಭ್ರಷ್ಟಾಚಾರಕ್ಕೆ ನರೇಗಾ ಯೋಜನೆಗಳಿಗೆ ಬಿಗಿ ಕ್ರಮ ಅಳವಡಿಸಿರುವುದು ಕಾಂಗ್ರೆಸ್‌ಗೆ ಇಷ್ಟವಾಗಿಲ್ಲ. ಹೀಗಾಗಿ ಸದಾ ಯೋಜನೆ ವಿರೋಧಿಸುತ್ತಿದೆ.
ಅಲ್ಲದೆ, ನರೇಗಾ ಯೋಜನೆಗೆ ಹೆಸರು ಬದಲಾವಣೆ ಮಾಡಿರುವುದು ಇದೇ ಮೊದಲಲ್ಲ. ಯೋಜನೆ ಜಾರಿಯಾದ ಬಳಿಕ ಹಲವಾರು ಬಾರಿ ಹೆಸರು ಬದಲಾವಣೆಯಾಗಿದೆ. ಯುಪಿಎ ಸರಕಾರವಿದ್ದಾಗ ಜವಾಹಾರಲಾಲ್ ನೆಹರು ಹೆಸರಿನ ಮೇಲೆಯಿದ್ದ ಜವಾಹಾರ ರೋಜಗಾರ ಯೋಜನೆಯನ್ನು ನಂತರ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಎಂದು ಬದಲಿಸಲಾಯಿತು.ಹೆಸರು ಬದಲಾವಣೆ ಮಾಡಿದ್ದು ಏಕೆ..? ಎಂದು ಪ್ರಶ್ನೆ ಮಾಡುವ ಕಾಂಗ್ರೆಸ್ಸಿಗರು ಮೊದಲು, ಜವಾಹಾರಲಾಲ್ ನೆಹರು ಹೆಸರಿನಲ್ಲಿದ್ದ ಯೋಜನೆಯನ್ನು ಗಾಂಧಿ ಅವರ ಹೆಸರಿಗೆ ಬದಲಾವಣೆ ಮಾಡಿದ್ದು ಏಕೆ ಎಂದು ಮೊದಲು ಸ್ಪಷ್ಟಪಡಿಸಬೇಕು ಎಂದು ಹೇಳಿದ್ದಾರೆ.
ಮಹಾತ್ಮ ಗಾಂಧಿ ಅವರ ಹೆಸರಿನಲ್ಲಿ ಈಗಿನ ಕಾಂಗ್ರೆಸ್ ಗಾಂಧಿಗಳು ರಾಜಕೀಯ ಲಾಭಕ್ಕಾಗಿ ಯೋಜನೆಯ ಹೆಸರನ್ನು ಬದಲಾಯಿಸಿದ್ದು ಗುಟ್ಟಾಗಿ ಉಳಿದಿಲ್ಲ. ಅಚ್ಚರಿ ಎಂದರೇ ಈವರೆಗೂ ಮಹಾತ್ಮ ಗಾಂಧಿ ಅವರ ಆದರ್ಶಗಳನ್ನು ಕಾಂಗ್ರೆಸ್ ಸರ್ಕಾರ, ಒಂದು ದಿನ ಪಾಲನೆ ಮಾಡಿಲ್ಲ. ಈವರೆಗೆ ಭ್ರಷ್ಟಾಚಾರ ಮಾಡುವ ಸಲುವಾಗಿ ಗಾಂಧಿ ಹೆಸರನ್ನು ಬಳಸಲಾಗಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು, ಮಹಾತ್ಮ ಗಾಂಧಿ ಅವರ ರಾಮರಾಜ್ಯ, ಆದರ್ಶ, ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡುವ ದಾಪುಗಾಲು ಹಾಕುತ್ತಿದ್ದಾರೆ. ಜೊತೆಗೆ, ಕಾಲ-ಕಾಲಕ್ಕೆ ತಂತ್ರಜ್ಞಾನ ಪಾರದರ್ಶಕತೆ ಕಾಯುವುದಕ್ಕಾಗಿ ‘ವಿಬಿ-ಜಿ ರಾಮ್ ಜಿ’ ಯೋಜನೆಯಲ್ಲಿ ಹಲವು ಮಾರ್ಪಾಡು ಮಾಡಲಾಗಿದೆ. ಇದೆಲ್ಲಕ್ಕಿಂತ ಮಿಗಿಲಾಗಿ 100 ದಿನ ಮಾನವ ದಿನಗಳನ್ನು 125ದಿನಕ್ಕೆ ಹೆಚ್ಚಿಸಲಾಗಿದೆ ಎಂಬ ಅಂಶದತ್ತ ಗಮನ ಸೆಳೆದಿದೆ.
ಯೋಜನೆಯಲ್ಲಿ ಪಾರದರ್ಶಕತೆ ತರಲು ಮುಖ್ಯ ಕಾರಣವಾಗಿದ್ದು, ನರೇಗಾದಲ್ಲಿ ವ್ಯಾಪಕ ಭ್ರಷ್ಟಾಚಾರ ಆಗಿದ್ದು ಎಂದು ಆರೋಫಿಸಿರುವ ಅವರು, ಯಾದಗಿರಿ ಜಿಲ್ಲೆಯ ಗ್ರಾಮ ಪಂಚಾಯಿತಿಯೊಂದರಲ್ಲಿ ಪುರುಷರು ಸೀರೆಯುಟ್ಟು ಫೋಟೋ ತೆಗೆಸಿಕೊಂಡು ನರೇಗಾ ಹಾಜರಾತಿ ಹಾಕಿಕೊಂಡು ಹಣ ಲಪಾಟಿಯಿಸಿದ ಘಟನೆ ಉದಾಹರಣೆ ಇವೆ.
ಇವು ಉದಾಹರಣೆಯಷ್ಟೆ, ಇಂತಹ ಬ್ರಹ್ಮಾಂಡ ಭ್ರಷ್ಟಾಚಾರಗಳು ನರೇಗಾ ಯೋಜನೆಯಲ್ಲಿ ಎಗ್ಗಿಲ್ಲದೇ ಕಾಂಗ್ರೆಸ್‌ನ ಸರಕಾರದ ಪೋಷಣೆಯಿಂದ ನಡೆಯುತ್ತಿದ್ದವು ಗಾಂಧಿ ಅವರ ಹೆಸರಿನಲ್ಲಿ ಕಾಂಗ್ರೆಸ್ಸಿಗರು ಈ ಎಲ್ಲ ಭ್ರಷ್ಟಾಚಾರ ನಡೆಸಲು ದಾರಿ ಮಾಡಿಕೊಟ್ಟಿದ್ದರು. ಸತ್ಯ ಮತ್ತು ಅಹಿಂಸೆ ಎನ್ನುವ ಗಾಂಧಿ ತತ್ವಗಳನ್ನು ಮರೆತ ಕಾಂಗ್ರೆಸ್ ಸರಕಾರ, ಸುಳ್ಳು ಮತ್ತು ಹಿಂಸಾಚಾರದ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ನಿರಂತರವಾಗಿ ಮಾಡಿಕೊಂಡು ಹೊರಟಿದೆ ಎಂದು ಕಿಡಿಕಾರಿದರು.
ಇನ್ನೂ ಕೇಂದ್ರ ಸರಕಾರದಿಂದ ಅನುದಾನ ಬರುತ್ತಿಲ್ಲ ಎನ್ನುವ ಹಸಿ ಸುಳ್ಳು ಆರೋಪ ಮಾಡುವ ಕಾಂಗ್ರೆಸ್ಸಿಗರು, ಒಮ್ಮೆ ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ಅನುದಾನದ ದಾಖಲೆಗಳನ್ನು ನೋಡಬೇಕು. 2006-13ರವರೆಗೆ ಕರ್ನಾಟಕಕ್ಕೆ ಯುಪಿಎ ಸರಕಾರ ಕೇವಲ 8739 ಕೋಟಿ ರೂ. ಮಾತ್ರ ಅನುದಾನ ಕೊಟ್ಟಿದೆ. ಆದರೆ, 2014 ರಲ್ಲಿ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಈವರೆಗೆ 48305ಕೋಟಿ ರೂ. ಅನುದಾನ ಕೊಟ್ಟಿದೆ. ನರೇಗಾದಲ್ಲಿ ಯುಪಿಎ ಸರಕಾರವಿದ್ದಾಗ 58.46 ಕೋಟಿ ರೂ. ಕೊಟ್ಟಿದ್ದಾರೆ. ಮೋದಿ ಅವರ ಸರಕಾರ ಬಂದ ಮೇಲೆ ಕಳೆದ ಹತ್ತು ವರ್ಷದಲ್ಲಿ 126.08 ಕೋಟಿ ರೂ. ಹಣ ಕೊಟ್ಟಿದೆ. ಇದನ್ನು ಕಾಂಗ್ರೆಸ್ಸಿಗರು ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.

ಹಗಲು ದರೋಡೆಗೆ ನಿಂತ ಕಾಂಗ್ರೆಸ್ಸಿಗರು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ್ ಸಚಿವರರಿಂದ ಹಗಲು ದರೋಡೆ ನಡೆಯುತ್ತಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಆರೋಪ ಅಬಕಾರಿ ಇಲಾಖೆಯಲ್ಲಿ ಪರವಾನಗಿ ನೀಡಲು ಲಂಚ ಪಡೆಯುತ್ತಿದ್ದಾರೆ 2500 ಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಪಟ್ಟಂತೆ ಸಚಿವರು ಮತ್ತು ಅವರ ಮಗನ ಹೆಸರು ಕೇಳಿ ಬಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ
ಯಲಬುರ್ಗಾ ಮಂಡಲ ಅಧ್ಯಕ್ಷ ಮಾರುತಿ ಗೌರಾಳ್, ವಿಶ್ವನಾಥ್ ಮರಿಬಸಪ್ಪ, ಅಮರೇಶ್, ಶಿವಪ್ಪ ವಾದಿ ಇದ್ದರು.
ನಿರಂತರ ಸುದ್ದಿ ಜಾಹೀರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713