ವೈಯಕ್ತಿಕ ಭಿನ್ನಾಭಿಪ್ರಾಯಗಳು ಮರೆತು ಸಮಾಜ ಸಂಘಟನೆಮಾಡಿ:ರಾಮಣ್ಣ ಕಲ್ಲಣ್ಣವರ. 

Breaking news:-ನಿರ್ಭಯ ದೃಷ್ಟಿ ನ್ಯೂಸ್*******

ಯಲಬುರ್ಗಾ.ಜ.11:  ವಾಲ್ಮೀಕಿ ನಾಯಕ ಸಮಾಜದ ಹಿತಕ್ಕಾಗಿ ಸಂಘಟನೆ ಅತ್ಯಗತ್ಯ.ಏಕೆಂದರೆ ಅದು ಸಮ ಸಮಾಜ ನಿರ್ಮಾಣ. ಆರ್ಥಿಕ.ಸಬಲೀಕರಣಅಭಿವೃದ್ಧಿ ಮತ್ತು ಸಮಸ್ಯೆಗಳ ಪರಿಹಾರಕ್ಕೆ ಸಹಕಾರಿಯಾಗುತ್ತದೆ.ಸಂಘಟನೆಯಿಂದ ಸಮುದಾಯ ತಮ್ಮ ಹಕ್ಕುಗಳನ್ನು ಪಡೆಯಲು ಶಕ್ತಿಯನ್ನು ನೀಡುತ್ತದೆ ಎಂದು ವಾಲ್ಮೀಕಿ ಗುರುಪೀಠದ ಕೊಪ್ಪಳ ಜಿಲ್ಲಾ ಪ್ರತಿನಿಧಿಗಳಾದ ರಾಮಣ್ಣ ಕಲ್ಲಣ್ಣವರ ಕರೆ ನೀಡಿದರು. ಯಲಬುರ್ಗಾ ತಾಲ್ಲೂಕಿನ ವಾಲ್ಮೀಕಿ ನಾಯಕ (ಬೇಡ) ಸಮಾಜದವರು ಯಲಬುರ್ಗಾ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ವಾಲ್ಮೀಕಿ ನಾಯಕ ಸಮಾಜ ಹಮ್ಮಿಕೊಂಡಿದ್ದ ವಾಲ್ಮೀಕಿ ಜಾತ್ರೆ ಪೂರ್ವ ಬಾವಿ ಸಭೆ ಮತ್ತು ಯಲಬುರ್ಗಾ ತಾಲೂಕಿನ ಸಮಾಜದ ಪದಾಧಿಕಾರಿಗಳನ್ನು ಆಯ್ಕೆ ಮಾಡವ ಉದ್ದೇಶಕ್ಕಾಗಿ ಕರೆದ ಸಭೆಯಲ್ಲಿ  ಭಾರತದ ಸಂಸ್ಕೃತಿಗೆ ವಾಲ್ಮೀಕಿ ಸಮಾಜದ ಕೊಡುಗೆ ಅಪಾರವಾಗಿದೆ. ವಾಲ್ಮೀಕಿ ಸಮಾಜದ ಐತಿಹಾಸಿಕ ಹಿನ್ನಲೆ ಈ ಸಮಾಜದ ಯುವಪೀಳಿಗೆ ಅರ್ಥ ಮಾಡಿಕೊಳ್ಳಬೇಕೆಂದರು.ವಿವಿಧ ರಾಜಕೀಯ ಪಕ್ಷದಲ್ಲಿರುವ ಸಮಾಜದವರು ಚುನಾವಣೆ ನಂತರ ಸಮಾಜಕ್ಕಾಗಿ ಒಂದಾಗಿ ಸಂಘಟನೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕೆಂದರು.ವೈಯಕ್ತಿಕ ಭಿನ್ನಾಭಿಪ್ರಾಯಗಳು ಮರೆತು ವಾಲ್ಮೀಕಿ ಎಂಬ ದೋಣಿಯಲ್ಲಿ ಒಂದಾಗಿ ಪಯಣಿಸಬೇಕು ಎಂದು ನುಡಿದರು.  ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾ ಅಧ್ಯಕ್ಷರಾದ ಡಾ.ಕೆ.ಎನ್.ರಾಜಣ್ಣ.ಮತ್ತು ಮಾಜಿ ಅಧ್ಯಕ್ಷ ಮಾನಪ್ಪ ಪೂಜಾರ.ಜಿಲ್ಲಾ ಮುಖಂಡರಾದ ಹನಮೇಶ ನಾಯಕ.ಶರಣಪ್ಪ ಹೊಸಕೇರಿ.ಸಂಜೀವ ಸಂಗಟಿ.ಭರಮಗೌಡ ವಕೀಲರು.ಕಾರಟಗಿ ಮತ್ತು ಕನಕಗಿರಿ ಮುಖಂಡರು ಸಭೆಯಲ್ಲಿ ಭಾಗವಹಿಸಿ ಸಂಘಟನೆಯ ಕುರಿತು ಮಾತನಾಡಿದರು. ಸಭೆಯಲ್ಲಿ ಸರ್ವಾನುಮತದಿಂದ ತಾಲೂಕಿನಿಂದ ಮಠದ ಧರ್ಮದರ್ಶಿಯಾಗಿ ಫಕೀರಪ್ಪ ತಳವಾರ ಅವರನ್ನು ಆಯ್ಕೆ ಮಾಡಲಾಯಿತು ನಂತರದಲ್ಲಿ ಯಲಬುರ್ಗಾ ತಾಲೂಕಿನ ಅಧ್ಯಕ್ಷರಾಗಿ ಯಲ್ಲಪ್ಪ ವೀರಪ್ಪ ಹಡಗಲಿ. ಉಪಾಧ್ಯಕ್ಷರಾಗಿ ದೇವಿಂದ್ರಗೌಡ ಮಾಲಿ ಪಾಟೀಲ.ಚನ್ನಬಸಪ್ಪ ಗುಮಗೇರಿ.ಮುದಿಯಪ್ಪ ಆಡಿನ್.ಮಾನಪ್ಪ ವಾಲ್ಮೀಕಿ ಬೇವೂರು. ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಕಾಂತಗೌಡ ಪಾಟೀಲ. ಸಹ ಕಾರ್ಯದರ್ಶಿಯಾಗಿ ಶಶಿ ನಾಯಕ.ಗೌರವ ಅಧ್ಯಕ್ಷರಾಗಿ ಹಂಚಾಳಪ್ಪ ಪೂಜಾರ.ಸಂಘಟನಾ ಕಾರ್ಯದರ್ಶಿಗಳಾಗಿ.ದೇವಪ್ಪ ಪೂಜಾರ(ತಳವಾರ).ಕನಕರಾಯ ಯಾಪಲದಿನ್ನಿ. ಶರಣಪ್ಪ ಗಚ್ಚಿನಮನಿ.ವೆಂಕನಗೌಡ ಪೋಲಿಸ್ ಪಾಟೀಲ. ಬಸವರಾಜ ಜಮಂಬಳ್ಳಿ.ಮತ್ತು ಇನ್ನಿತರರನ್ನು ಆಯ್ಕೆ ಮಾಡಲಾಯಿತು ಮತ್ತು ಜಾತ್ರಾ ಸಮಿತಿ ಅಧ್ಯಕ್ಷರಾಗಿ ಯಮನೂರಪ್ಪ ತಳವಾರ.ಸದಸ್ಯರಾಗಿ ದ್ಯಾಮಣ್ಣ ಗೌಡ್ರ.ಶಂಕ್ರಗೌಡ ಪಾಟೀಲ ಸಾಲಭಾವಿ.ಶರಣಗೌಡ ಹೊಸಗೌಡ್ರ.ಬಸವರಾಜ ಪೂಜಾರ.ದುರಗನಗೌಡ ಪೋಲಿಸ್ ಪಾಟೀಲ.ಪರಮೇಶ್ ಚಾಕ್ರಿ.ಹನಮಗೌಡ ಕೋರಿ.ಇನ್ನಿತರರನ್ನು ಆಯ್ಕೆಮಾಡಲಾಯಿತು.ಯಲಬುರ್ಗಾ ತಾಲೂಕಿನ ಮುಖಂಡರು ಸಮಾಜದ ಬಂಧುಗಳು ಇದ್ದರು.

 

ಸುದ್ದಿ ಜಾಹಿರಾತು ಪ್ರಕಟಣೆಗಾಗಿ  ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713

Leave a Reply

Your email address will not be published. Required fields are marked *