ರಾಜೂರ ಗ್ರಾಮದ ಶ್ರೀ ಶರಣಬಸವೇಶ್ವರ ಸುಕ್ಷೇತ್ರ ಬೃಹನ್ಮಠದಲ್ಲಿ ಪುರಾಣ, ಅಯ್ಯಾಚಾರ, ಸಾಮೂಹಿಕ ವಿವಾಹ ಹಾಗೂ ಜಾತ್ರಾ ಮಹೋತ್ಸವ

 

ಬ್ರೇಕಿಂಗ್ ನ್ಯೂಸ್:-ನಿರ್ಭಯ ದೃಷ್ಟಿ ನ್ಯೂಸ್******

ಕುಕನೂರು ತಾಲೂಕಿನ ರಾಜೂರ ಗ್ರಾಮದ ಶ್ರೀ ಶರಣಬಸವೇಶ್ವರ ಸುಕ್ಷೇತ್ರ ಬೃಹನ್ಮಠದ ಕಲಬುರ್ಗಿ ಶ್ರೀ ಶರಣಬಸವೇಶ್ವರರ 39ನೇ ವರ್ಷದ ರಥಸಪ್ತಮಿಯ ಜಾತ್ರೆ ಮಹೋತ್ಸವದ ಅಂಗವಾಗಿ 82ನೇ ವರ್ಷದ ಪುರಾಣ ಪ್ರವಚನ ಪ್ರಾರಂಭೋತ್ಸವವು ಲಿಂಗೈಕ್ಯ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಇವರ ದಿವ್ಯ ಪ್ರಕಾಶದೊಂದಿಗೆ ಜ. 3-1- 2026ನೇ ಶನಿವಾರ ಪುಷ್ಯ ಬಹುಳ ಬನದ ಹುಣ್ಣಿಮೆಯಿಂದ 25 -1- 2026 ನೇ ರವಿವಾರ ಮಾಘ ಶುದ್ಧ ರಥಸಪ್ತಮಿ ವರೆಗೆ ಪುರಾಣ ಪ್ರವಚನ, ಅಯ್ಯಾಚಾರ, ಸಾಮೂಹಿಕ ವಿವಾಹ ನೆರವೇರುವ, ಕಾರ್ಯಕ್ರಮದ ದಿವ್ಯ ಸಾನಿಧ್ಯ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಧರ ಮುರಡಿ ಹಿರೇಮಠ ಯಲಬುರ್ಗಾ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಬ್ರಹನ್ಮಠ ರಾಜೂರ-ಆಡ್ನೂರ-ಗದಗ ವಹಿಸಿಕೊಳ್ಳುತ್ತಾರೆ.

23-01-2026 ಶುಕ್ರವಾರ ಶಿವ ದೀಕ್ಷ (ಅಯ್ಯಾಚಾರ,) ಷಟಸ್ಥಲ ಧ್ವಜಾರೋಹಣ ಸಾಯಂಕಾಲ 7:30ಕ್ಕೆ 39ನೇ ವರ್ಷದ ರಥಸಪ್ತಮಿ ಜಾತ್ರಾ ಮಹೋತ್ಸವದ ಉದ್ಘಾಟನಾ ಸಮಾರಂಭ 24-01- 2026 ರಂದು ಶನಿವಾರ ಬೆಳಗ್ಗೆ 9 ಗಂಟೆಗೆ ಗ್ರಾಮದ ಸುಮಂಗಲಿಯರಿಂದ ಕುಂಬೋತ್ಸವ ಲಿಂಗೈಕ್ಯ ಡಾ. ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ ಹಾಗೂ ಲಿಂಗೈಕ್ಯ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳವರ ಭಾವಚಿತ್ರ ಮೆರವಣಿಗೆ, ಸಾಯಂಕಾಲ 7.30 ಕ್ಕೆ “ಪಂಚಾಕ್ಷರ ಶ್ರೀ” ಪ್ರಶಸ್ತಿ ಪ್ರಧಾನ ಸಮಾರಂಭ ದಿ. 25.1.2026 ರವಿವಾರ ರಥಸಪ್ತಮಿಯ ದಿನದಂದು ಬೆಳಗ್ಗೆ ಶ್ರೀ ಶರಣಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ ಮಧ್ಯಾಹ್ನ 12-36 ಗಂಟೆಗೆ ಸಾಮೂಹಿಕ ವಿವಾಹ ನಂತರ ಮಹಾಪ್ರಸಾದ ವಿತರಣೆ ಹಾಗೂ ಸಾಯಂಕಾಲ 4 ಗಂಟೆಗೆ ರಥೋತ್ಸವ ಮತ್ತು 7:30ಕ್ಕೆ ಡಾ”.ಜ,ಚ,ನಿ”ಪ್ರಶಸ್ತಿ ಹಾಗೂ ಪುರಾಣ ಮಹಾಮಂಗಳೋತ್ಸವ ಸಮಾರಂಭ ನಡೆಯುತ್ತಿದೆ. 

ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ವಧು ವರರು 19/01/2026 ಸೋಮವಾರದೊಳಗೆ ಶ್ರೀ ಕ್ಷೇತ್ರದಲ್ಲಿ ಹೆಸರು ನೋಂದಾಯಿಸಿ ರಸೀದಿ ಪಡೆಯಬೇಕು ಶ್ರೀ ಶರಣಬಸವೇಶ್ವರ ಸುಕ್ಷೇತ್ರ ಕಾರ್ಯಕಾರಿ ಮಂಡಳಿ ಹಾಗೂ ಸಕಲ ಸದ್ಭಕ್ತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ.

ಹೆಚ್ಚಿನ ಮಾಹಿತಿಗಾಗಿ, 9980711024,9972500309,9740721254, ಸಂಪರ್ಕಿಸಬಹುದು. 

 

ನಿರಂತರ ಸುದ್ದಿ ಜಾಹಿರಾತಿಗಾಗಿ, ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713

Leave a Reply

Your email address will not be published. Required fields are marked *