ಸರಕಾರಿ ಕನ್ನಡ ಶಾಲೆಗಳು ಉಳಿಯಬೇಕು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಬೇಕು:-ಎ.ಎಸ್.ನಾಗರಳ್ಳಿ

Breaking news:-ನಿರ್ಭಯ ದೃಷ್ಟಿ ನ್ಯೂಸ್****

ಕುಕನೂರು

ಸರಕಾರಿ ಕನ್ನಡ ಶಾಲೆಗಳು ಉಳಿಸಿ, ಬೆಳೆಸುವ ಕಾರ್ಯ ಎಲ್ಲರೂ ಮಾಡುವುದು ಅಗತ್ಯವಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂದು ನಿವೃತ್ತ ಡಿಡಿಪಿಐ ಎ.ಎಸ್.ನಾಗರಳ್ಳಿ ಹೇಳಿದರು.

ತಾಲೂಕಿನ ಇಟಗಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ೭೫ನೇ ವರ್ಷದ ವಜ್ರಮಹೋತ್ಸವ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಶಾಲೆಗಳ ವಜ್ರಮಹೋತ್ಸವದಿಂದ ಸಂತಸ ಮೂಡಿದೆ. ಗುಣಮಟ್ಟದ ಶಿಕ್ಷಣ ಮಕ್ಕಳ ಬಾಳಿಗೆ ಬೆಳಕಾಗುತ್ತದೆ. ಪಾಲಕರು ಮಕ್ಕಳನ್ನು ಸರಿಯಾಗಿ ಬೆಳೆಸುತ್ತಿಲ್ಲ. ಕೇವಲ ಅಂಕಗಳ ಒತ್ತಡವನ್ನು ಹಾಕುತ್ತಿದ್ದಾರೆ. ಇದರಿಂದ ಮಕ್ಕಳಿಗೆ ಸಾಕಷ್ಟು ಒತ್ತಡವಾಗುತ್ತಿದ್ದು, ಇತ್ತೀಚೆಗೆ ಮಕ್ಕಳಿಗೂ ಹೃದಯ ಸಂಬಂಧಿ ಕಾಯಿಲೆ ಸಂಭವಿಸುತ್ತಿವೆ. ಅಲ್ಲದೇ ಮಕ್ಕಳಿಗೆ ಶ್ರಮದ ಆಟೋಟಗಳು ಕೂಡ ಇಲ್ಲದಂತಾಗಿದೆ. ಮಕ್ಕಳ ಬಾಲ್ಯ ಕೇವಲ ಅಂಕಗಳ ಒತ್ತಡಕ್ಕೆ ಸಮೀತಗೊಳಿಸಿದ್ದಾರೆ. ಅಲ್ಲದೇ ಇಂದಿನ ಪ್ರತಿಷ್ಠಿತ ಆಂಗ್ಲ ಭಾಷೆಯ ಶಾಲೆಯಲ್ಲಿ ಮಕ್ಕಳಿಗೆ ನಮ್ಮ ಗ್ರಾಮೀಣ ಕ್ರೀಡೆಗಳ ಪ್ರದರ್ಶನ ನಡೆಸುತ್ತಿಲ್ಲ. ಇದರಿಂದ ಮಕ್ಕಳು ನಮ್ಮ ಗ್ರಾಮೀಣ ಕ್ರೀಡೆಗಳನ್ನು ಮರೆತ್ತಿದ್ದಾರೆ. ಇನ್ನೂ ಮಕ್ಕಳು ಕಲಿತ ಮಹಾನಗರಗಳತ್ತ ಉದ್ಯೋಗಕ್ಕೆ ಹೋಗುತ್ತಿದ್ದು, ವೃಧ್ದಾಶ್ರಮಗಳು ಹೆಚ್ಚಾಗುತ್ತಿವೆ. ಶಿಕ್ಷಕರು ಮಕ್ಕಳಿಗೆ ಪುನರ್ಜನ್ಮ ನೀಡುತ್ತಾರೆ. ಶಿಕ್ಷಕರು, ಮಕ್ಕಳ ನಡುವೆ ಸಂಬಂಧ ಉಳಿಯುತ್ತಿಲ್ಲ. ಕನ್ನಡ ಶಾಲೆಯಲ್ಲಿ ಪ್ರತಿಭಾವಂತ ಶಿಕ್ಷಕರಿದ್ದರೂ ಅದರ ಉಪಯೋಗವಾಗುತ್ತಿಲ್ಲ. ಮಕ್ಕಳು ಕಲಿಸಿದರೆ ಕಲಿಯುತ್ತಾರೆ ಎಂಬುದು ನನ್ನ ಧ್ಯೇಯ. ಸರ್ಕಾರಿ ಶಾಲೆಯಲ್ಲಿ ರಾತ್ರಿ ಊಟ ಬಿಟ್ಟು ಎಲ್ಲಾ ಸೌಲಭ್ಯಗಳು ದೊರೆಯುತ್ತದೆ. ಇನ್ನೂ ಇಟಗಿ ಸರ್ಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಿಬ್ಬರು ಶಾಸಕರಾಗಿದ್ದಾರೆ. ಇಟಗಿ ಗ್ರಾಮದ ಹಿರಿಯರು, ಯುವಕರು ಹಾಗೂ ಗ್ರಾಮಸ್ಥರು ಸರ್ಕಾರಿ ಶಾಲೆಯ ವಜ್ರಮಹೋತ್ಸವ ಆಚರಿಸುತ್ತಿದ್ದು, ಸಾಕಷ್ಟು ಸಂತೋಷವಾಗಿದೆ ಎಂದರು.

ಬಿಜೆಪಿ ನಿಕಠಪೂರ್ವ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ ವಜ್ರಮಹೋತ್ಸವದ ವಿಶೇಷ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಈ ಶಾಲೆಯ ನಾಲ್ಕನೇ ತಲೆಮಾರಿನ ಶಿಕ್ಷಕರು ಈ ವೇದಿಕೆ ಮೇಲೆ ಇದ್ದಾರೆ. ಇಂದಿನ ಕಾರ್ಯಕ್ರಮವು ಇತಿಹಾಸ ಪುಟ ಸೇರುತ್ತದೆ. ನಮ್ಮ ತಂದೆ ಕಲಿತ ಶಾಲೆಯಾಗಿದ್ದು, ಶಾಲೆಯ ಅಭಿವೃದ್ಧಿಗೆ ಎಲ್ಲರ ಸಹಕಾರ ಪಡೆದು, ಇನ್ನೂ ಅಭಿವೃದ್ಧಿ ಪಡಿಸಲಾಗುವುದು .ಇಂತಹ ಒಂದು ಅದ್ಭುತವಾದ ದಿನಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ ಎಂದು ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ .

 ಎಂಟು ತಿಂಗಳ ಗಳಿಂದ ಕಾರ್ಯಕ್ರಮವನ್ನು ಆಯೋಜನೆ ಮಾಡಬೇಕೆಂದು ಊರಿನ ಗುರಿ ಹಿರಿಯರು ಗ್ರಾಮಸ್ಥರು ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಶಿಕ್ಷಕರು ಎಲ್ಲರೂ ಸೇರಿಕೊಂಡು ಅದ್ಭುತವಾದ ಕಾರ್ಯಕ್ರಮವನ್ನು ಮಾಡಿದ್ದೇವೆ.

 1997- 98ನೇ ಸಾಲಿನ ವಿದ್ಯಾರ್ಥಿಗಳು ವೆಂಕಟರಾವ್ ಕುಲಕರ್ಣಿ ಅವರ ಕಂಚಿನ ಪುತ್ತಳಿಯನ್ನು ಶಾಲೆಗೆ ಉಡುಗೊರೆಯಾಗಿ ನೀಡಿದ್ದಾರೆ. ಸರಕಾರಿ ಶಾಲೆಯಲ್ಲಿ ಒಂದು ಅದ್ಭುತವಾದ ಕಾರ್ಯಕ್ರಮವನ್ನು ಮಾಡುವುದರ ಮೂಲಕ ಇಡೀ ನಾಡಿಗೆ ಮಾದರಿಯಾಗಿದೆ,

 ಈ ಶಾಲೆಯಲ್ಲಿ ಕಲಿತು ಹೋದಂತ ಎಷ್ಟೋ ಜನ ವಿದ್ಯಾರ್ಥಿಗಳು ದೊಡ್ಡ ಹುದ್ದೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ್ದಾರೆ ಎಂದು ಹೇಳಿದರು.

ಅನ್ನದಾನೀಶ್ವರ ಶಾಖಾಮಠದ ಡಾ.ಮಹಾದೇವ ಸ್ವಾಮೀಜಿ ಮಾತನಾಡಿ, ಶಾಲೆ ದೊಡ್ಡವರು ಬಂದರೆ ಬಾಗುವುದು ಕಲಿಸಿದೆ. ಶಿಕ್ಷಣ ಮತ್ತು ಆರೋಗ್ಯ ಎಂದೂ ಖಾಸಗೀಕರಣವಾಗಬಾರದು. ಸರ್ಕಾರಿ ಶಾಲೆ ಶಿಕ್ಷಕರಿಗೆ ತಾಯಿ ಗುಣ ಇದೆ. ಖಾಸಗೀಕರಣ ವ್ಯವಸ್ಥೆಗೆ ಇತಿಶ್ರೀ ಹಾಡಬೇಕು. ಎಲ್ಲಾ ಎಂಎಲ್‌ಎ, ಎಂಪಿ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದಬೇಕು ಎಂದರು.

ನಿವೃತ್ತ ಶಿಕ್ಷಕ ಅಂದಾನಪ್ಪ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲೆಗೆ ಭೂ ದಾನ ಮಾಡಿದ ನಂತರ ಗ್ರಾಮದ ರೈತರು ಪ್ರತಿ ಸೋಮವಾರ ಬಂಡಿ ಮೂಲಕ ಕಲ್ಲು ತಂದಿದ್ದಾರೆ. ಶಾಲೆ ನಿರ್ಮಾಣಕ್ಕೆ ಅವರ ಸಹಕಾರ ನೀಡಿದ್ದಾರೆ. ನಮ್ಮ ಶಾಸಕರಾದ ದಿ.ಈಶಣ್ಣ ಗುಳಗಣ್ಣನವರು ಶಾಲೆಗೆ ಹೊಸ ಕಟ್ಟಡ ನಿರ್ಮಿಸಲು ಅನುದಾನ ನೀಡಿ, ಶಾಲೆಯನ್ನು ಅಭಿವೃದ್ಧಿ ಪಡಿಸಿದ್ದಾರೆ. ಗ್ರಾಮದ ಎಲ್ಲರ ಸಹಕಾರದೊಂದಿಗೆ ಯಾವುದೇ ಶಾಲೆಗೂ ಕಡಿಮೆ ಇಲ್ಲ ಎನ್ನುವ ರೀತಿ ಇಟಗಿ ಸರಕಾರಿ ಶಾಲೆಯು ಇನ್ನು ಎತ್ತರಕ್ಕೆ ವಿಸ್ತಾರವಾಗಿ ಬೆಳೆಯಲಿ ಎಂದರು.

ಭೈರನಹಟ್ಟಿಯ ಶ್ರೀಶಾಂತಲಿಂಗ ಸ್ವಾಮೀಜಿ,ಸಿಂದನೂರಿನ ಡಿವೈಎಸ್ಪಿ ಬಾಳಪ್ಪ ತಳವಾರ ಮಾತನಾಡಿದರು,

  ವೆ.ಮೂ.ಮುತ್ತಯ್ಯ ಕಳ್ಳಿಮಠ ಸಾನಿಧ್ಯ ವಹಿಸಿದರು.

ಸಾಹಿತಿ ಬಿ.ಎಂ. ಹಳ್ಳಿ ಅವರ ಪುಸ್ತಕ ವಜ್ರಸಿರಿ ಪುಸ್ತಕ ಬಿಡುಗಡೆಯಾಯಿತು.

ಭೂದಾನಿ ವೆಂಕಟರಾವ್ ಕುಲಕರ್ಣಿ ಅವರ ಕಂಚಿನ ಮೂರ್ತಿ ಅನಾವರಣಗೊಳಿಸಲಾಯಿತು.

ಪ್ರಾರ್ಥನೆ ಮತ್ತು ನಾಡಗೀತೆ ರೈತ ಗೀತೆಯನ್ನು ಶಿವಸ್ವಾಮಿ ಮ್ಯಾಗಳಮಠ, ಶರಣು ರಾಜೂರ ನೆರವೇರಿಸಿದರು.

ಈ ಸಂದರ್ಭದಲ್ಲಿ

ನಿವೃತ್ತ ಪ್ರಾಚಾರ್ಯ ಶ್ರೀಧರ ದೀಕ್ಷಿತ್, ಗ್ರಾಪಂ ಅಧ್ಯಕ್ಷೆ ರತ್ನಮ್ಮ ಭಜಂತ್ರಿ, ತಾಪಂ ಮಾಜಿ ಅಧ್ಯಕ್ಷ ಬಸವಪ್ರಭು ಪಾಟೀಲ್, ನಿವೃತ್ತ ಶಿಕ್ಷಕ ಹಂಚ್ಯಾಳಪ್ಪ ತಳವಾರ, ಎಸ್ಡಿಎಂಸಿ ಅಧ್ಯಕ್ಷ ಲಿಂಗರಾಜ ಹೊಸಭಾವಿ, ಪ್ರಮುಖರಾದ ವಜೀರಸಾಬ್ ತಳಕಲ್, ಮಹೇಶ ದಾಸರ, ಅಂದಪ್ಪ ಹುರುಳಿ, ಶಂಕ್ರಪ್ಪ ಗಾಂಜಿ, ರಾಮಣ್ಣ ಕೌದಿ, ಪ್ರಭು ಹಳ್ಳಿ, ಸೋಮಶೇಖರಗೌಡ, ಎಫ್.ಎಂ.ಕಳ್ಳಿ, ಮಂಜುನಾಥ ಕಡೆಮನಿ, ಶಿವಪ್ಪ ಈಬೇರಿ, ರಾಜಶೇಖರ್ ಹೊಂಬಾಳ, ಶ್ರೀಕಾಂತ್ ಕುಲಕರ್ಣಿ, ಸಂಜೀವಪ್ಪ ಸಂಗಟಿ, ಕಳಕಪ್ಪ ಬಿ ಕ್ಯಾದಗುಂಪ್ಪಿ, ಮಹೇಶ ದೊಡ್ಡಮನಿ, ಸಿದ್ದಪ್ಪ ಮಾಸ್ತರ್ ಸಜ್ಜನ, ಬಸಪ್ಪ ಹೊಂಬಾಳ, ಲಕ್ಷ್ಮಣ ಕಾಳೆ, ಅಂದಾನಪ್ಪ ಅಂಗಡಿ, ನಿಂಗಪ್ಪ ಕಂಬಳಿ, ಇತರರಿದ್ದರು.

 

ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞9164386713

Leave a Reply

Your email address will not be published. Required fields are marked *