ಮದ್ಯ ವ್ಯಸನಕ್ಕೆ ಬಲಿಯಾಗದೆ ಸುಂದರ ಜೀವನ ರೂಪಿಸಿಕೊಳ್ಳಿ : ಮಹಾದೇವ ಮಹಾಸ್ವಾಮಿಗಳು,,

ಕುಕನೂರು : ಯಲಬುರ್ಗಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ವತಿಯಿಂದ ಮದ್ಯವರ್ಜನ ಶಿಬಿರ ಕಾರ್ಯಕ್ರಮ ಕುಕನೂರು ವ್ಯವಸ್ಥಾಪನ ಸಮಿತಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಕೊಪ್ಪಳ ಜಿಲ್ಲಾ
ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಹಾಗೂ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಪಟ್ಟಣ ಪಂಚಾಯತಿ, ಪ್ರಗತಿ ಬಂದು ಸ್ವ ಸಹಾಯ ಸಂಘಗಳು ಒಕ್ಕೂಟ, ನವಜೀವನ ಸಮಿತಿ ಯಲಬುರ್ಗಾ ಮತ್ತು ಕುಕನೂರು ತಾಲೂಕ
ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಅನ್ನದಾನೇಶ್ವರ ಶಾಖಾಮಠದಲ್ಲಿ ಡಾ. ವೀರೇಂದ್ರ ಹೆಗ್ಗಡೆಯವರು, ಶ್ರೀಮತಿ ಡಾ. ಹೇಮಾವತಿ ವೀರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದದಿಂದ
2009ನೇ ಮದ್ಯವರ್ಜನ ಶಿಬಿರ ಕಾರ್ಯಕ್ರಮವನ್ನು ನ.12 ರಿಂದ ನ.19ರವರೆಗೆ 8 ದಿನಗಳ ಕಾಲ ಆಯೋಜಿಸಲಾಗಿದೆ.ಬುಧವಾರದಂದು ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಡಾ.ಮಹಾದೇವ ಮಹಾಸ್ವಾಮಿಗಳು ಮಾತನಾಡಿ ‘8 ದಿನಗಳಲ್ಲಿ ಮದ್ಯ ವ್ಯಸನಿಗಳ ವಿವಿಧ ಕಾರ್ಯಕ್ರಮಗಳ ಮೂಲಕ ಮನಪರಿವರ್ತನೆ ಮಾಡುವುದರೊಂದಿಗೆ ಮದ್ಯದ ಚಟದಿಂದ ಮುಕ್ತ ಅಲಂಕಾರಸಲಾಯಿತು. ಮದ್ಯವ್ಯಸನಕ್ಕೆ ಅಂಟಿಕೊಂಡಿರುವ ಯುವ ಜನತೆ ಅದರ ದಾಸರಾಗಿ ಸಮಾಜ ಹಾಗೂ ಕುಟುಂಬ ನೆಮ್ಮದಿಯ ಬದುಕನ್ನು ನಾಶ ಮಾಡುತ್ತಿದ್ದಾರೆ. ಮದ್ಯವರ್ಜನ ಶಿಬಿರದ ಯತ್ನದಿಂದ ಉತ್ತಮ ಮನುಷ್ಯರನ್ನು ಸೃಷ್ಟಿಸಿ, ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲಾಗುತ್ತಿದೆ. ಶಿಬಿರದ ಸದುಪಯೋಗ ಪಡಿಸಿಕೊಂಡು ಮದ್ಯ ವ್ಯಸನಕ್ಕೆ ಬಲಿಯಾಗದೆ ಸಂಸಾರದಲ್ಲಿ ಸುಖದಿಂದ ಬಾಳುವ ಜೊತೆಗೆ ಸಮಾಜದಲ್ಲಿ ಕೀರ್ತಿವಂತರಾಗಿ ಬಾಳಲು ಉತ್ತಮ ಪಣ ತೊಡಬೇಕು ಎಂದು ತಮ್ಮ ಆಶಿರ್ವಚನದಲ್ಲಿ ಮದ್ಯ ವ್ಯಸನದಿಂದ ಮುಕ್ತಿ ಪಡೆದ ಶಿಬಿರಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.
ನಂತರ ದಿವ್ಯ ಸಾನಿಧ್ಯ ವಹಿಸಿದ ಯಲಬುರ್ಗಾ ಶ್ರೀಧರ ಮುರಡಿಮಠದ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಸಮಾಜದಲ್ಲಿರುವ ಪ್ರತಿಯೊಬ್ಬರಿಗೂ ಸಂಸ್ಕಾರ ಕೊಡುವ ಕಾರ್ಯ ನಡೆಯಬೇಕು. ಒಬ್ಬ ವ್ಯಕ್ತಿಯ ಕೆಟ್ಟ ಮನ ಪರಿವರ್ತನೆ ಮಾಡಿ ಸಂಸ್ಕಾರ ಕೊಡುವ ಕಾರ್ಯ ಶ್ರೇಷ್ಠ ಮತ್ತು ಪುಣ್ಯ ಕಾರ್ಯವಾಗಿದೆ. ಪ್ರಸ್ತುತ ದಿನಗಳಲ್ಲಿ ಡ್ರಗ್ಸ್, ಗಾಂಜಾ, ಸಿಗರೇಟ್, ಮದ್ಯಗಳಂತಹ ದುಶ್ಚಟಗಳು ಹಾವಳಿಯಿಂದ ಸಮಾಜದ ಸ್ವಾಸ್ಥ್ಯ ಕೆಡುತ್ತಿದೆ. ಇದರಿಂದ ಯುವ ಪೀಳಿಗೆ ಹಾಳಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಇಂತಹ ಶಿಬಿರಗಳು ಸಮಾಜಕ್ಕೆ ದಾರಿ ದೀಪವಾಗಲಿದ್ದು, ಪ್ರತಿಯೊಬ್ಬರಿಗೂ ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಇದೆ ಇದರಿಂದ ಉತ್ತಮ ಸಮಾಜಕ್ಕೆ ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಧರ್ಮಸ್ಥಳ ಸಂಸ್ಥೆಯು ರಾಜ್ಯಾದ್ಯಂತ ಮದ್ಯವರ್ಜನ ಶಿಬಿರ ನಡೆಸುವ ಮೂಲಕ ಲಕ್ಷಕ್ಕಿಂತ ಅಧಿಕ ಜನರು ಮದ್ಯ ವ್ಯಸನದಿಂದ ಮುಕ್ತರಾಗಿ, ಸುಂದರ ಹಾಗೂ ಗೌರವಯುತ ಬದುಕು ಕಟ್ಟಿದೆ’ಮದ್ಯಪಾನ ವ್ಯಸನ ಮುಕ್ತ ಮಾಡುವ ಗುರಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಹೊಂದಿದೆ.
ಈ ಶಿಬಿರಗಳಿಂದ ಶೇ.90 ಜನರು ಮದ್ಯಪಾನ ಬಿಟ್ಟು ಸಮಾಜದಲ್ಲಿ ಗೌರವಯುತವಾಗಿ ಜೀವನ ನಡೆಸುತ್ತಿದ್ದಾರೆ. ಶಿಬಿರದಲ್ಲಿ ಭಾಗವಹಿಸಿದ ಹಲವಾರು ಜನರು ಈ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಪ್ರತಿ ದಿನ ನಿತ್ಯ ವ್ಯಾಯಾಮ, ಶ್ರಮದಾನ, ದಿನದ ಮಾಹಿತಿ, ನವ ಜೀವನ ಸಮಿತಿ ಸದಸ್ಯರ ಅನಿಸಿಕೆ, ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ, ಮಹಿಳೆಯರಿಗೆ ಕೌಟುಂಬಿಕ ಸಲಹೆ, ಗಣ್ಯರಿಂದ ಮಾಹಿತಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಶಾರೀರಿಕ ಚಟುವಟಿಕೆಗಳು, ಭಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ನಂತರ ಆರ್.ಪಿ ರಾಜೂರ, ಕರಬಸಯ್ಯ ಬಿನ್ನಾಳ ಜನ ಜಾಗೃತಿ ವೇದಿಕೆಯ ಸದಸ್ಯರು, ನಾಗೇಶ್ ವೈ ಎ ಪ್ರಾದೇಶಿಕ ಯೋಜನಾಧಿಕಾರಿ, ಜಂಬಣ್ಣ ಅಂಗಡಿ ವೈದ್ಯರು, ಪ್ರಕಾಶ್ ರಾವ್ ಜಿಲ್ಲಾ ನಿರ್ದೇಶಕರು ಹಾಗೂ ಇತರರು ಕಾರ್ಯಕ್ರಮ ಉದ್ದೇಶಿಸಿ.
ಈ ಸಂದರ್ಭದಲ್ಲಿ
ನಟರಾಜ್ ಬಾದಾಮಿ, ಜಿ ಚಂದ್ರಶೇಖರ್, ನೀಲಕಂಠಪ್ಪ ನಾಗಶೆಟ್ಟಿ, ದೇವೇಂದ್ರಪ್ಪ ಬಡಿಗೇರ, ಗುದ್ನೇಯ್ಯ ಬಂಡಿಮಠ, ವಿನಯ್ ಯಾಳಗಿ, ವಿನಾಯಕ್ ಸರಗಣಚಾರ, ಶಕುಂತಲಾ ಮಾಲಿಪಾಟೀಲ, ಶರಣಬಸಪ್ಪ ದಾನಕೈ, ನೀಲಕಂಠಪ್ಪ ನಾಗಶೆಟ್ಟಿ, ಕರಿಬಸಪ್ಪ ಬಗನಾಳ, ರೇಖಾ, ಶ್ರೀಶೈಲ್ ಸಿ, ಗೀತಾ ನಂದಿಹಳ್ಳಿ ಮೇಲ್ವಿಚಾರಕರು, ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
ಅಧಿಕಾರಿ ವರ್ಗದವರು ಹಾಗೂ ಶಿಬಿರಾರ್ಥಿಗಳು ಕುಟುಂಬದವರು.
ಸುದ್ದಿ ಜಾಹಿರಾತಿಗಾಗಿ,ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು. ಇವರನ್ನು ಸಂಪರ್ಕಿಸಿ.
