2025-26 ನೇ ಸಾಲಿನ ಶ್ರೀ ಗುದ್ನೇಶ್ವರ (ರುದ್ರಮುನೇಶ್ವರ) ದೇವಸ್ಥಾನ ಜಾತ್ರಾ ಮಹೋತ್ಸವ, ಹುಣಸೆಹಣ್ಣು, ಕಾಯಿ ಚೀಟಿ, ಬಜಾರ, ತೊಟ್ಟಲ ಹರಾಜು ಪ್ರಕ್ರಿಯೆ.

ಕುಕನೂರು ಪಟ್ಟಣದ ಗ್ರಾಮ ಲೆಕ್ಕಾಧಿಕಾರಿ ಕಾರ್ಯಾಲಯ ಚಾವಡಿಯಲ್ಲಿ 2025-26ನೇ ಸಾಲಿನ ಶ್ರೀ ಗುದ್ನೇಶ್ವರ (ಶ್ರೀ ರುದ್ರಮುನೇಶ್ವರ) ದೇವಸ್ಥಾನ ಕಮೀಟಿ ಗುದ್ನೇಪ್ಪನ ಮಠ-ಕುಕನೂರ
ಅಧ್ಯಕ್ಷರು ಹೆಚ್. ಪ್ರಾಣೇಶ ತಹಶೀಲ್ದಾರರು ಕುಕನೂರ ಶ್ರೀ ಗುದ್ದೇಶ್ವರ ದೇವಸ್ಥಾನ ಕಮೀಟಿ ಗುದ್ನೇಪ್ಪನಮಠ ಇವರ ಉಪಸ್ಥಿತಿಯಲ್ಲಿ
18-11-2025 ಮಂಗಳವಾರ ಗ್ರಾಮ ಲೆಕ್ಕಾಧಿಕಾರಿ ಕಾರ್ಯಾಲಯ ಚಾವಡಿಯಲ್ಲಿ ದೇವಸ್ಥಾನ ಕಮೀಟಿಯ ಯಥಾ ಸ್ಥಿತಿಯಲ್ಲಿರುವ ಹುಣಿಸಿಗಿಡದ ಹಣ್ಣಿನ ಹರಾಜು ಕಾಯಿಚೀಟಿ, ಬಜಾರ, ತೊಟ್ಟಿಲು ಹರಾಜು ಪ್ರಕ್ರಿಯೆ ನೆರವೇರಿಸಲಾಯಿತು.
ಸದಾರಿ ಹರಾಜು ಪ್ರಕ್ರಿಯೆಯಲ್ಲಿ ಕುಕನೂರು ಹಾಗೂ ಸುತ್ತಮುತ್ತಲಿನ ಗ್ರಾಮದ ಆಸಕ್ತರು ಈ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು .ಈ ಮೂಲಕ ಗ್ರೇಡ್ 2 ತಹಶೀಲ್ದಾರ್ ಮುರಳಿಧರ್ ಕುಲಕರ್ಣಿ ಮಾತನಾಡಿ
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಗುದ್ದೇಶ್ವರ (ರುದ್ರಮುನೇಶ್ವರ) ದೇವಸ್ಥಾನ ಜಾತ್ರಾ ಮಹೋತ್ಸವ 2025-26 ಹುಣಿಸಿಗಿಡದ ಹಣ್ಣಿನ ಹರಾಜು ,ಕಾಯಿಚೀಟಿ,ಬಜಾರ,ತೊಟ್ಟಿಲು ಹರಾಜು ಪ್ರಕ್ರಿಯೆ ನೆರವೇರಿಸಲಾಯಿತು.
ಹುಣಸೆ ಹಣ್ಣಿನ ಹರಾಜಿನಲ್ಲಿ ಒಟ್ಟು ಆರು ಜನ ಭಾಗವಹಿಸಿದ್ದು ,ಇದರಲ್ಲಿ ರುದ್ರಯ್ಯ ಪಂಚಾಕ್ಷರಯ್ಯ ಇನಾಮದಾರ ಇವರಿಗೆ 4,50,000 ಹರಾಜು ಪ್ರಕ್ರಿಯೆ ಮುಗಿದು.
ನಂತರ ಜಾತ್ರಾ ಬಜಾರ ಹರಾಜಿನಲ್ಲಿ ಒಟ್ಟು ಆರು ಜನ ಭಾಗವಹಿಸಿದ್ದು ಇದರಲ್ಲಿ ವಿರುಪಾಕ್ಷಯ್ಯ ಕುರ್ತ್ ಕೋಟಿ ಇವರಿಗೆ 4,60,000 ಹರಾಜು ಪ್ರಕ್ರಿಯೆ ಮುಗಿಯಿತು.
ನಂತರ ಕಾಯಿ ಚೀಟಿ ಹರಾಜಿನಲ್ಲಿ ಒಟ್ಟು ಮೂರು ಜನ ಭಾಗವಹಿಸಿದ್ದು ಮಾರುತಿ ತಟ್ಟಿ ಇವರಿಗೆ 55,000 ಸಾವಿರ ರೂಪಾಯಿಗಳಿಗೆ ಹರಾಜು ಪ್ರಕ್ರಿಯೆ ಮುಗಿದು.
ನಂತರ ತೊಟ್ಟಿಲು ಹರಾಜಿನಲ್ಲಿ ಒಟ್ಟು ಏಳು ಜನ ಭಾಗವಹಿಸಿದ್ದು ಇದರಲ್ಲಿ ರುದ್ರಯ್ಯ ಇನಾಮದಾರ ಇವರಿಗೆ 3,35,000 ಸಾವಿರ ರೂಪಾಯಿಗಳಿಗೆ ಹರಾಜು ಪ್ರಕ್ರಿಯೆ ಮುಗಿದು.
ಈ ಒಂದು ಹರಾಜು ಪ್ರಕ್ರಿಯೆ ಅತ್ಯಂತ ಸುಗಮವಾಗಿ ನೆರವೇರಿಕೊಟ್ಟ ನಮಸ್ಕಾರ ಧನ್ಯವಾದಗಳು.
ಈ ಸಂದರ್ಭದಲ್ಲಿ
ರಂಗನಾಥ ಬಂಡಿ ನಿರೀಕ್ಷಕರು, ಸುರೇಶ ಕ್ಯಾದಗುಂಪಿ ಗ್ರಾಮ ಆಡಳಿತ ಅಧಿಕಾರಿ, ಮಹದೇವ ನಿರ್ವಾಹಕರು, ದೇವಸ್ಥಾನ ಸಮಿತಿ ಅಧ್ಯಕ್ಷರು ವ್ಯವಸ್ಥಾಪಕರು ಶರಣಯ್ಯ ಸಸಿಮಠ, ದೇವಸ್ಥಾನದ ಸದಸ್ಯರು ಗ್ರಾಮದ ಹಿರಿಯರಾದ ಚನ್ನಬಸಯ್ಯ ದೂಪದ, ರುದ್ರಯ್ಯ ಗಲಭಿ, ರುದ್ರಯ್ಯ ಪೂಜಾರ, ರಶೀದ್ ಅಹ್ಮದ ಹಣ ಜಗೇರಿ, ವೆಂಕಟೇಶ್ ವಡ್ಡರ್, ಬಸವರಾಜ್ ಮಂಡಲಗೇರಿ, ಮಲ್ಲಯ್ಯ ಹಲಸಿ ಮರದ, ಎಟ್.

ಸುದ್ದಿ ಜಾಹಿರಾತಿಗಾಗಿ, ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು, ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ.
