ಜಾತ್ರೆಗಳು ಜಾತಿಯಿಂದ ಮುಕ್ತವಾಗಲಿ-ಮುದಿಯಪ್ಪಜಾತ್ರೆಗಳು ಜಾತಿಯಿಂದ ಮುಕ್ತವಾಗಲಿ-ಮುದಿಯಪ್ಪ

ಕುಕನೂರ ಜಾತ್ರೆಗಳು ಜಾತಿಯಿಂದ ಮುಕ್ತವಾಗಿ ಸರ್ವರನ್ನು ಪ್ರೀತಿಸುವ ಜಾತ್ರೆ ನಾವು ಮಾಡಬೇಕು ಎಂದು ತಳಕಳ ಗ್ರಾಮದ ಮುಖಂಡ ಮುದಿಯಪ್ಪ ಯೋಗೆಮ್ಮನವರ ಹೇಳಿದರು.

ಅವರು ಕುಕನೂರ ತಾಲ್ಲೂಕಿನ ತಳಕಲ್ ಗ್ರಾಮದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ ನಡೆದ ಶ್ರೀ ಮಠದ ಜಾತ್ರಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ನಮ್ಮ ಗ್ರಾಮದ ಸದ್ಭಕ್ತರು ವಿಶೇಷವಾಗಿ ಸರ್ವರನ್ನು ಪ್ರೀತಿಸುವ ಗುಣವಳ್ಳವರು ಇಲ್ಲಿ ಯಾವುದೇ ಜಾತಿ, ಮತ ಪಂಥವೆನ್ನದೆ ಎಲ್ಲರೂ ಮಾತನಾಡುತ್ತಾರೆ ಒಗ್ಗೂಡಿ ಜಾತ್ರೆಗೆ ತನು ಮನ ಧನದಿಂದ ಸೇವೆ ಮಾಡಬೇಕು ಅಂದಾಗ ಮಾತ್ರ ಜಾತ್ರೆಗಳು ಯಶಸ್ವಿಯಾಗಲು ಸಾಧ್ಯ ಕೇವಲ ಒಂದು ಜಾತಿಯವರು ಮಾತ್ರ ದುಡಿದರೆ ಜಾತ್ರೆಗಳು ಯಶಸ್ವಿಯಾಗುವುದಿಲ್ಲ ಎಂದು ಹೇಳಿದರು.
ಮುಖಂಡ ಮಲ್ಲಪ್ಪ ಬಂಗಾರಿ ಮಾತನಾಡಿ ಅನ್ನದಾನೀಶ್ವರ ಮಹಾಸ್ವಾಮಿ ಈ ಕ್ಷೇತ್ರವನ್ನು ಪಾವನ ಮಾಡಿ ನಾಡಿನದ್ದಕ್ಕೂ ಅಪಾರ ಭಕ್ತರನ್ನು ಹೊಂದಿರುವಂತಹ ಒಬ್ಬ ಮಹಾತಪಸ್ವಿ ಅಂತವರ ಜಾತ್ರೆಯ ನಮ್ಮ ಗ್ರಾಮದಲ್ಲಿ ಆಚರಣೆ ಮಾಡಿಕೊಂಡು ಬರುತ್ತಿರುವುದನ್ನು ನಮ್ಮೆಲ್ಲರಿಗೂ ಹೆಮ್ಮೆಯಿದೆ ಎಂದು ಹೇಳಿದ್ದಾರೆ.
ನಂತರ ಸೋಮಪ್ಪ ಖರ್ಜಗಿ ಮಾತನಾಡಿ ಇದೇ ನವೆಂಬರ್ ೦೧ ರಿಂದ ಶ್ರೀ ಶರಣಬಸವೇಶ್ವರರ ಪುರಾಣ ಪ್ರಾರಂಭವಾಗಿ ನವೆಂಬರ್ ೨೧ ರಂದು ಮಂಗಳಗೊಳ್ಳುವುದು ಅಂದು ಸಂಜೆ ಅನ್ನದಾನೀಶ್ವರ ಲಘು ರಥೋತ್ಸವ ನಡೆಯಲಿದೆ, ಜಾತ್ರ ನಿಮಿತ್ಯ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಇಂತಹ ಕಾರ್ಯಕ್ಕೆ ಯುವಕರ ಸಹಕಾರ ಅವಶ್ಯ ಹೇಳಿದರು.
ಈ ಸಂದರ್ಭದಲ್ಲಿ ಪೂಜ್ಯ ಮಹಾದೇವ ಸ್ವಾಮೀಜಿ, ಮಲ್ಲಪ್ಪ ಗೋರಿ, ಪಕ್ಕಪ್ಪ ಮುರಿಗಿ, ಶಿವಪ್ಪ ಬ್ಯಾಳಿ, ಅಬ್ಬಸಲಿ, ಕಲ್ಲಯ್ಯ ತಿರುಗುಣೇಶ, ಶರಣಪ್ಪ, ಬಸಯ್ಯ ಚಂಡೂರು, ರಾಮಣ್ಣ ನಿಟ್ಟಲಿ, ಸುರೇಶ ನಿಟ್ಟಲಿ, ಗೋಣೆಪ್ಪ ವಾಲ್ಮೀಕಿ, ಮುಡಿಯಪ್ಪ, ವೀರಪ್ಪ ಕರ್ಜಗಿ, ಬಾಳಪ್ಪ ಮುಸ್ಲಿ, ಪರಸಪ್ಪ ಅಳವಂಡಿ ಇತರರು ಇದ್ದರು.

ರದಿ ಚನ್ನಯ್ಯ ಹಿರೇಮಠ

Leave a Reply

Your email address will not be published. Required fields are marked *