ತನು,ಮನ, ಧನವನ್ನು ನೀಡುವ ಕಾಣದ ಕೈಗಳು ಇರುವದರಿಂದ ಪುಟ್ಟರಾಜ ದೇವಸ್ಥಾನ ನಿರ್ಮಾಣ ಸಾಧ

ಕುಕನೂರು:-ಮಂಗಳೂರಿನಲ್ಲಿ ಪಂಡಿತ ಪುಟ್ಟರಾಜ ಗವಾಯಿಗಳ ದೇವಸ್ಥಾನ ಅಡಿಗಲ್ಲು ಕಾರ್ಯಕ್ರಮ ಮತ್ತು ದೇವಸ್ಥಾನ ಜೀರ್ಣೋದ್ಧಾರವಾಗಬೇಕಾದರೆ
ಕಾಣದ ಕೈಗಳು ಇರುವದರಿಂದ ದೇವಸ್ಥಾನ ನಿರ್ಮಾಣ ಸಾಧ್ಯವಾಗಿದೆ ಎಂದು ಡಾ. ಕಲ್ಲಯ್ಯಜ್ಜನವರು ಅಭಿಪ್ರಾಯ ಹೊಂದಿದ್ದಾರೆ.
ಅವರು ಕುಕನೂರು ತಾಲೂಕಿನ ಮಂಗಳೂರು ಗ್ರಾಮದಲ್ಲಿ ಪಂಡಿತ ಪುಟ್ಟರಾಜ ಗವಾಯಿಗಳ ದೇವಸ್ಥಾನ ಅಡಿಗಲ್ಲು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದರು ಜ್ಯೋತಿ ಉದ್ಘಾಟನೆ ನೆರವೇರಿಸಿ ವೀರೇಶ್ವರ ಪುಣ್ಯಶ್ರಮದ ಪೀಠಾಧಿಪತಿ ಡಾ. ಕಲ್ಲಯ್ಯಜ್ಜನವರು ಸುಮಾರು 65 ವರ್ಷದ ಲಿಂಗೈಕ್ಯ ಪಂಚಾಕ್ಷರಿ ಗವಾಯಿಗಳು ಈ ಗ್ರಾಮದಲ್ಲಿ ವೀರೇಶ್ವರ ಪುಣ್ಯಾಶ್ರಮ ಮಠ ಕಟ್ಟಲು ಮಾತನಾಡಿದರು ಸಂಕಲ್ಪ ಮಾಡಿದ್ದರು ಆದರೆ ಸಂಕಲ್ಪ ಕಾಣಿಸಿಕೊಂಡಿರಲಿಲ್ಲ ಈಗ ಲಿಂಗೈಕ್ಯ ಪಂಡಿತ ಪುಟ್ಟರಾಜ ಗವಾಯಿಗಳವರ ಪರಮಶಿಷ್ಯ ದಿವಂಗತ ವಿರೂಪಾಕ್ಷಪ್ಪ ಮಾಸ್ತರ ದೇವಬಸಪ್ಪನವರ ಬ್ಯಾಳಿ ಇವರ ಮಕ್ಕಳಾದ ಶರಣಪ್ಪ ದೇವಬಸಪ್ಪನವರ ಬ್ಯಾಳಿ, ಶಂಭು ದೇವಬಸಪ್ಪನವರ ಬ್ಯಾಳಿ ದಾನವಾಗಿ ಭೂಮಿಯನ್ನು ನೀಡಿರುವುದು ನಮಗೆ ಸಂತೋಷ ತಂದಿದೆ ಎಂದು ಹೇಳಿದರು ಮುಂದಿನ ವರ್ಷವೇ ಪರಮಪೂಜ್ಯರ ನೂತನ ದೇವಸ್ಥಾನ ಲೋಕಾರ್ಪಣೆಗೊಳ್ಳಲಿ ಈ ದೇವಸ್ಥಾನದ ನಿರ್ಮಾಣಕ್ಕಾಗಿ ಮಂಗಳೂರು ಗ್ರಾಮದ ಎಲ್ಲರೂ ಒಗ್ಗಟ್ಟಾಗಿ ತನು,ಮನ, ಧನವನ್ನು ನೀಡುವ ಕಾಣದ ಕೈಗಳು ಇರುವದರಿಂದ ದೇವಸ್ಥಾನ ನಿರ್ಮಾಣ ಸಾಧ್ಯವಾಗಿದೆ ಎಂದು ಹೇಳಿದರು.
ದಿವ್ಯ ಸಾನಿಧ್ಯ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಅರಳಲೇ ಹಿರೇಮಠ ಮಂಗಳೂರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಶರಣೆ ನಂದೀಶ್ವರ ಅಮ್ಮನವರು ನೆರವೇರಿಸಿ ಆಶೀರ್ವಚನ ನೀಡಿದರು.
ಬಸವರಾಜ ರಾಜೂರು ಗೌರಾ ಡಿಸಿಸಿ ಬ್ಯಾಂಕ್ ನಿರ್ದೇಶಕರು ಮಾತನಾಡಿ ಪಂಡಿತ ಡಾ. ಪುಟ್ಟರಾಜ ಗವಾಯಿಗಳು ಸಂಗೀತ ಲೋಕಕ್ಕೆ ಅಪಾರ ಕೊಡುಗೆ ನೀಡಿ, ಭಕ್ತರ ಪಾಲಿಗೆ ನಡೆದಾಡುವ ದೇವರು ಎಂದೆನಿಸಿದ್ದವರು.
ಪಂಡಿತ ಪುಟ್ಟರಾಜ ಗವಾಯಿಗಳವರ ದೇವಸ್ಥಾನದ ನಿರ್ಮಾಣಕ್ಕಾಗಿ ಮುಂದಿನ ದಿನಗಳಲ್ಲಿ ನಮ್ಮ ಕೈಲಾದ ದೇಣಿಗೆ ನೀಡುತ್ತೇನೆ ಎಂದು ಹೇಳಿದರು.
ಈರಪ್ಪ ಕುಡಗುಂಟಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ಮಾತನಾಡಿ ಪುಟ್ಟರಾಜ ಗವಾಯಿಗಳು ಐದು ದಶಕಗಳಿಗೂ ಹೆಚ್ಚು ಕಾಲ ಸಾವಿರಾರು ಅಂಧರಿಗೆ ಶಿಕ್ಷಣ ನೀಡುವ ಮೂಲಕ ಅಂಧರ ಪಾಲಿನ ದೇವರೇ ಆಗಿದ್ದರು. ತಾವು ಕಲಿತ ವಿದ್ಯೆಯನ್ನು ಶಿಷ್ಯರಿಗೆ ಕಲಿಸಲು ಗುರುಗಳಿಂದ ಸ್ಥಾಪಿತವಾದ ಶ್ರೀ ಕುಮಾರೇಶ್ವರ ಕೃಪಾಪೋಷಿತ ಧರ್ಮಾರ್ಥ ಸಂಚಾರಕ ಸಂಗೀತ ಮಹಾವಿದ್ಯಾಲಯದ ಜವಾಬ್ದಾರಿ ಹೊತ್ತು ನೂರಾರು ಅಂಧರು, ಅನಾಥರು, ವಿಕಲಚೇತನರಿಗೆ ಸಂಗೀತ ಶಿಕ್ಷಣ ದೊರಕುವಂತೆ ಮಾಡಿದರು.
ಗದುಗಿನ ವೀರೇಶ್ವರ ಪುಣ್ಯಾಶ್ರಮದ ಮಠದ ಹಾಗೆ ಮಂಗಳೂರು ಗ್ರಾಮದಲ್ಲಿಯೂ ಸಹಿತ ಪಂಡಿತ ಪುಟ್ಟರಾಜ ಗವಾಯಿಗಳ ದೇವಸ್ಥಾನ ನಿರ್ಮಾಣವಾಗಲಿ ಎಂದು ಹೇಳಿದರು ಮುಂದಿನ ದಿನಗಳಲ್ಲಿ ಈ ದೇವಸ್ಥಾನದ ನಿರ್ಮಾಣಕ್ಕಾಗಿ ನಾನು ಸಹಿತ ದೇಣಿಗೆ ನೀಡುತ್ತೇನೆ ಮುಂದಿನ ವರ್ಷವೇ ಈ ನೂತನ ದೇವಸ್ಥಾನ ಲೋಕಾರ್ಪಣೆ ಯಾಗಲಿ ಎಂದು ಈ ಸಂದರ್ಭದಲ್ಲಿ ಹೇಳಿದರು.
ವಿಶ್ವನಾಥ ಮರಿಬಸಪ್ಪನವರ ಮಾಜಿ ತಾಲೂಕ ಪಂಚಾಯತಿ ಉಪಾಧ್ಯಕ್ಷರು ಯಲಬುರ್ಗಾ ಮಾತನಾಡಿ ನಮ್ಮ ಗ್ರಾಮದಲ್ಲಿ ಪಂಡಿತ ಪುಟ್ಟರಾಜ ಗವಾಯಿಗಳ ನೂತನ ದೇವಸ್ಥಾನದ ಅಡಿಗಲ್ಲು ಕಾರ್ಯಕ್ರಮ ಜರುಗುತ್ತಿರುವುದು ನಮ್ಮ ಗ್ರಾಮದವರಿಗೆ ಸಂತಸ ತಂದಿದೆ ಮುಂದಿನ ದಿನಗಳಲ್ಲಿ ನಮ್ಮ ಗ್ರಾಮದ ಎಲ್ಲಾ ಸದ್ಭಕ್ತರು ಸೇರಿ ಈ ನೂತನ ದೇವಸ್ಥಾನದ ನಿರ್ಮಾಣಕ್ಕಾಗಿ ಪ್ರತಿಯೊಬ್ಬರಿಗೂ ದೇಣಿಗೆ ನೀಡಬೇಕು ಎಂದು ಹೇಳಿದರು ಮುಂದಿನ ದಿನಗಳಲ್ಲಿ ಪಂಡಿತ ಪುಟ್ಟರಾಜ ಗವಾಯಿಗಳ ನೂತನ ತೇರು ನಿರ್ಮಾಣ ಮಾಡಲು ನಾವೆಲ್ಲರೂ ಸನ್ನದ್ಧರಾಗೋಣ ಎಂದು ಹೇಳಿದರು. ಗದುಗಿನ ವೀರೇಶ್ವರ ಪುಣ್ಯಶ್ರಮದಲ್ಲಿ ಸುಮಾರು ಹತ್ತು ಸಾವಿರಕ್ಕಿಂತಲೂ ಹೆಚ್ಚು ಅಂದ ಅನಾಥ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ನಮ್ಮ ಗ್ರಾಮದಲ್ಲಿ ಈ ನೂತನ ದೇವಸ್ಥಾನದಲ್ಲಿ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಸಂಗೀತ ಪಾಠಶಾಲೆ ಪ್ರಾರಂಭ ಮಾಡಿ ಮಕ್ಕಳಿಗೆ ಉಚಿತ ಸಂಗೀತ ಶಿಕ್ಷಣ ನೀಡಲು ನಾವೆಲ್ಲರೂ ಕಂಕಣ ಬದ್ಧರಾಗಿ ನಿಲ್ಲೋಣ ಎಂದು ಹೇಳಿದರು.
ಶರಣಪ್ಪ ಉಮಚಗಿ ಹಿರಿಯ ಉಪನ್ಯಾಸಕರು ಪ್ರಾಸ್ತಾವಿಕ ಮಾತುಗಳನ್ನಾಡಿ ಸುಮಾರು 65 ವರ್ಷಗಳ ಕನಸು ನನಸಾಗುವ ದಿನ ಎಂದರು. ಮಂಗಳೂರು ಗ್ರಾಮದ ಜನ ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿದವರು ಎಂದು ಈ ಸಂದರ್ಭದಲ್ಲಿ ಹೇಳಿದರು.
ಸುಜಾತಾ ಮಹೇಶ ಬಂಡ್ರಕಲ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಪರಮಪೂಜ್ಯ ಡಾ. ಕಲ್ಲಯ್ಯಜ್ಜನವರು, ಶಿವಶರಣೆ ನಂದೀಶ್ವರ ಅಮ್ಮನವರು ಬೂದಾನ ಮಾಡಿದ ಶರಣಪ್ಪ ದೇವಬಸಪ್ಪನವರು ಬ್ಯಾಳಿ ಇವರು ತಮ್ಮ ಮನೆಯಲ್ಲಿ ಪಾದಪೂಜೆ ಉಭಯಶ್ರೀಗಳಿಗೆ ಮಾಡಿದರು. ನಂತರ ಪರಮಪೂಜ್ಯರು ಈ ಕುಟುಂಬದ ಸದಸ್ಯರಿಗೆ ಆಶೀರ್ವಾದ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಸಕ್ರಪ್ಪ ಮಂಗಳಪ್ಪ ಚಿನ್ನೂರು, ಶೇಖರಗೌಡ್ರ ಪೋಲೀಸಪಾಟೀಲ, ರೇವಣಸಿದ್ದಯ್ಯ ಅರಳಲೆಹಿರೇಮಠ, ಶೇಖರಗೌಡ್ರ ಮಾಲಿಪಾಟೀಲ,ನಿಂಗನಗೌಡ್ರ ಮಾಲಿಪಾಟೀಲ, ಶಿವಪುತ್ರಪ್ಪ ಶಿವಶಿಂಪಿ, ರಾಜು ಚಿನ್ನೂರು, ಮಾಬುಸಾಬ ನೂರಬಾಷ, ನೂರುದ್ದೀನ ವಣಗೇರಿ, ಪ್ರಕಾಶ ಬೆಲ್ಲದ, ಶರಣಯ್ಯ ಕಲ್ಮಠ, ವಿರೇಶ ಕಮ್ಮಾರ, ಶಿವಪುತ್ರಪ್ಪ ದೇವಬಸಪ್ಪನವರ ಬ್ಯಾಳಿ, ಮಹೇಶ ಬಂಡ್ರಕಲ್, ಮುದಕಯ್ಯ ವಣಗೇರಿಮಠ, ಮಂಗಳೇಶಯ್ಯ ವಣಗೇರಿಮಠ, ಇತರರು ಹಾಜರಿದ್ದರು.
ರವೀಂದ್ರನಾಥ ತೋಟದ ಸ್ವಾಗತ ನಿರೂಪಣೆ ನೆರವೇರಿಸಿದರು. ಪ್ರಸನ್ನ ಅರಳಲೇ ಹಿರೇಮಠ ವಂದನಾರ್ಪಣೆ ನೆರವೇರಿಸಿದರು.
ಪಂಡಿತ ಪುಟ್ಟರಾಜ ಗವಾಯಿಗಳ ಟ್ರಸ್ಟ್ ಕಮಿಟಿಯವರು ಅಚ್ಚುಕಟ್ಟಾದ ಪ್ರಸಾದದ ವ್ಯವಸ್ಥೆ ನೆರವೇರಿಸಲಾಯಿತು.
ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು