*ತಲೆ ತಗ್ಗಿಸಿ ಮೊಬೈಲ್ ನೋಡುವ ಬದಲು ತಲೆ ಎತ್ತಿ ಆಕಾಶ ನೋಡಿ ವಿಶೇಷ ಅಧ್ಯಯನ ಶೀಲರಾಗಿ : ಡಿಡಿಪಿಐ ಸೋಮಶೇಖರ್ ಗೌಡ್ರ,,* 

*ವಿದ್ಯಾಶ್ರೀ ಶಿಕ್ಷಣ ಸಂಸ್ಥೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಡಿಡಿಪಿಐ ಹೇಳಿಕೆ,,* 

 

ಕುಕನೂರು : ವಿದ್ಯಾರ್ಥಿಗಳು ಕೇವಲ ಮೊಬೈಲ್ ಕಡೆ ಮುಖ ಮಾಡಿ ತಲೆ ತಗ್ಗಿಸಿ ಕೂಡುವ ಬದಲು ಆಕಾಶವನ್ನು ಒಂದು ಬಾರಿ ತಲೆ ಎತ್ತಿ ನೋಡಿ ಆಕಾಶದಲ್ಲಿನ ಬದಲಾವಣೆ ವಿಷಯಗಳನ್ನು ಕಂಡುಕೊಂಡರೇ ವಿಶೇಷ ಅಧ್ಯಯನ ಹಾಗೂ ವಿಶೇಷತೆಯ , ಕುತೂಹಲಕಾರಿ ಸಂಗತಿ ಬೆಳಕಿಗೆ ಬರುತ್ತದೆ ಎಂದು ಕೊಪ್ಪಳ ಜಿಲ್ಲಾ ಉಪ ಪ್ರಾಥಮಿಕ ಶಿಕ್ಷಣಾಧಿಕಾರಿ ಸೋಮಶೇಖರ್ ಗೌಡ್ರ ಹೇಳಿದರು.

ಅವರು ಶುಕ್ರವಾರದಂದು ಪಟ್ಟಣದ ವಿದ್ಯಾಶ್ರೀ ಶಿಕ್ಷಣ ಸಂಸ್ಥೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಕೊಪ್ಪಳ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ಮುನಿರಾಬಾದ್ ಇವರ ಸಹಯೋಗದಲ್ಲಿ 2025 -26 ನೇ ಸಾಲಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಕೊಪ್ಪಳ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆ ಕಾರ್ಯಕ್ರಮದಲ್ಲಿ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಹಗಲು ಕಾಣುವ ನಕ್ಷತ್ರವನ್ನು ಯಾರಾದರೂ ಗಮನಿಸಿದ್ದಿರಾ ಎಂದು ವಿದ್ಯಾರ್ಥಿಗಳನ್ನು ಕೇಳಿದಾಗ ವಿದ್ಯಾರ್ಥಿಗಳ ಆಶ್ಚರ್ಯಚಕಿತರಾದರು, ಆಗ ವಿದ್ಯಾರ್ಥಿಗಳನ್ನ ಉದ್ದೇಶಿಸಿ ಮಾತನಾಡಿ ಹಗಲು ನಕ್ಷತ್ರವೆಂದರೇ ಸೂರ್ಯ, ಸೂರ್ಯನಿಗೂ ಕೂಡಾ ನಕ್ಷತ್ರವೆನ್ನುತ್ತಾರೆ ಎಂದು ತಿಳಿಸಿದರು.

ವೈಜ್ಞಾನಿಕವಾಗಿ ಹಲವಾರು ವಿಷಯಗಳ ಬಗ್ಗೆ ಹಾಗೂ ಗಣಿತ ವಿಷಯಗಳ ಕುರಿತು ವಿದ್ಯಾರ್ಥಿಗಳು ಹೆಚ್ಚು ಅಧ್ಯಯನ ಕ್ರೀಯಾ ಶೀಲರಾಗಬೇಕು ಎಂದು ಕರೆ ನೀಡಿದರು.

8 ವಿಷಯಗಳ ಆಧಾರದ ಮಾದರಿಯಿಂದ ವಿಜ್ಞಾನ ವಸ್ತು ಪ್ರದರ್ಶನ ಮಾಡಲಾಗಿದ್ದು ವಿದ್ಯಾರ್ಥಿಗಳು ಕ್ರೀಯಾಶೀಲತೆ ಬೆಳಸಿಕೊಳ್ಳಬೇಕು ಎಂದರು.

ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ತಮ್ಮ ನಾವಿನ್ಯತೆಯನ್ನು ಪ್ರದರ್ಶಿಸಿ ರಾಜ್ಯ ಮಟ್ಟದಲ್ಲಿ ನಮ್ಮ ಜಿಲ್ಲೆಯನ್ನು ಗುರುತಿಸುವಂತೆ ಮಾಡಬೇಕು ಎಂದು ಹೇಳಿದರು.

ನಂತರ ಮುನಿರಾಬಾದ್ ಡಯಟ್ ಪ್ರಾಂಶುಪಾಲರಾದ ಎಲ್. ಡಿ ಜೋಷಿ ಮಾತನಾಡಿ ಕುಕನೂರ ಪಟ್ಟಣದ ವಿದ್ಯಾಶ್ರೀ ಶಿಕ್ಷಣ ಸಂಸ್ಥೆಯಲ್ಲಿ ಇಂದು ವಿಜ್ಞಾನ ವಸ್ತು ಪ್ರದರ್ಶನ ಆಯೋಜಿಸಿದ್ದು ಇಲ್ಲಿ ಭಾಗವಹಿಸಿದ ಎಲ್ಲಾ ಶಾಲೆಯ ವಿದ್ಯಾರ್ಥಿಗಳ ಸೃಜನಶೀಲತೆ ಹಾಗೂ ಅವರಲ್ಲಿರುವ ನಾವಿನ್ಯತೆ ರಾಜ್ಯ ಮಟ್ಟದಲ್ಲಿ ಪ್ರದರ್ಶಿಸಿ ಗುರುತಿಸುವಂತಾಗಬೇಕು ಎಂದು ತಿಳಿಸಿದರು.

ನಮ್ಮ ಜಿಲ್ಲೆಯಿಂದ ಉತ್ತಮವಾಗಿರುವಂತಹ ವಿಷಯ ರಾಜ್ಯವನ್ನು ಪ್ರತಿನಿಧಿಸಬೇಕು ಜೊತೆಗೆ ಬಹುಮಾನ ತಂದುಕೊಡಬೇಕು. ಎಂಟು ವಿಷಯಗಳ ಮೇಲೆ ಗುಂಪು, ವಯಕ್ತಿಕ ವಿಜ್ಞಾನ ವಸ್ತು ಪ್ರದರ್ಶನ ನಡೆಯಲಿದೆ.

ಆ ನಿಟ್ಟಿನಲ್ಲಿ ಇಂದು ಮೌಲ್ಯ ಮಾಪನವನ್ನು ನಿರ್ಣಾಯಕರು ಮಾಡಲಿದ್ದಾರೆ.

ಇಂತಹ ಈ ಒಂದು ಕಾರ್ಯಕ್ರಮಕ್ಕೆ ಸಹಾಯ ಸಹಕಾರ ನೀಡಿರುವ ಇಲ್ಲಿನ ಆಡಳಿತ ಮಂಡಳಿಗೆ ಧನ್ಯವಾದಗಳು ಎಂದು ಹೇಳಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ವಿದ್ಯಾಶ್ರೀ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಶ್ವಂತರಾಜ್ ಜೈನ, ಮುಖ್ಯ ಶಿಕ್ಷಕ ರಾಜಶೇಖರ್ ಹೊಸ್ಮನಿ, ಹೇಮಣ್ಣ ಕವಲೂರ, ಬಸವರಾಜ ಮೇಟಿ, ಜಗದೀಶ ಬಳಿಗಾರ, ಸುರೇಶ ಮಾದಿನೂರ, ಶರಣಪ್ಪ ಅರಕೇರಿ, ಶರಣಪ್ಪ ಮುತ್ತಾಳ, ದೊಡ್ಡಪ್ಪ ಭಾವಿಕಟ್ಟಿ, ನವೀನ್ ನವಲೆ, ರವಿ ನಾಲ್ವಾಡ, ಬಿ. ಎಮ್ ಸವದತ್ತಿ, ರೇವಣಪ್ಪ ಅಬ್ಬಿಗೇರಿ, ರಾಜಣ್ಣ ಬಳ್ಳಿ, ಬಸವರಾಜ ಮೇಟಿ, ಮಲ್ಲಿಕಾರ್ಜುನ, ವೇಂಕಟೇಶಗೌಡ್ರ, ವೀರಯ್ಯ ಉಳ್ಳಾಗಡ್ಡಿ, ಅನ್ವರ್ ಪಾಷಾ, ಪ್ರಭು ಬುಕ್ಕಟಗಾರ, ಪವನ್ ಕುಲಕರ್ಣಿ ಸೇರಿದಂತೆ ತಿರ್ಪುಗಾರರು, ಡಯಟ್ ಅಧಿಕಾರಿಗಳು, ವಿವಿಧ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕಿಯರು, ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕ ಕೃಷ್ಣ ವಿದ್ಯಾಪತಿ ಪ್ರಾರ್ಥಿಸಿದರು, ಶಿಕ್ಷಕಿ ಮಂಗಳಾ ಸ್ವಾಗತಿಸಿದರು, ನಜಮಾ ನಿರೂಪಿಸಿ ವಂದಿಸಿದರು.


ಮುಗಿದು ಹೋಗುವ ಸಂಪನ್ಮೂಲಗಳು ಮತ್ತು ಮುಗಿಯದೆ ಹೋಗುವ ಸಂಪನ್ಮೂಲಗಳ ಬಗ್ಗೆ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆಯಿಂದ ಮರುಬಳಕೆಗೆ ಉಪಯೋಗವಾಗುವ ಸಂಪನ್ಮೂಲಗಳನ್ನು ಬಳಸಿಕೊಂಡು ಯಾವ ರೀತಿ ರಾಷ್ಟ್ರ ಅಭಿವೃದ್ಧಿಗೊಳಿಸಬೇಕು ಎನ್ನುವ ಕುರಿತು ಮಕ್ಕಳಲ್ಲಿ ಪರಿಕಲ್ಪನೆ ಮೂಡಿಸಬೇಕು ಅದರ ಮೂಲಕ ವಿದ್ಯಾರ್ಥಿಗಳಲ್ಲಿ ವಿಶಿಷ್ಟವಾದ ತಂತ್ರಜ್ಞಾನವನ್ನು ಬಳಸಿಕೊಂಡು ಕಸದಿಂದ ರಸ ತೆಗೆದು ಉಪಯೋಗಿಸುವ ಆಲೋಚನೆ ಮಕ್ಕಳಲ್ಲಿ ಬರಬೇಕು ಅಂತಹ ಒಂದು ವೈಜ್ಞಾನಿಕ ಪ್ರಯೋಗಗಳು ಆದಾಗ ಮಾತ್ರ ವಿದ್ಯಾರ್ಥಿಗಳು ಸಾಧನೆಯ ಹಾದಿಯನ್ನು ತಲುಪಲು ಸಾಧ್ಯ.

 

ಈ ಒಂದು ವಿಜ್ಞಾನ ವಸ್ತು ಪ್ರದರ್ಶನ ಮಕ್ಕಳಿಗೆ ಮುಂದೆ ವಿಜ್ಞಾನಿಗಳಾಗುವಂತಹ ಹೆಜ್ಜೆಯಾಗಬೇಕು ಅದಕ್ಕೆ ಶಿಕ್ಷಕರ ಸಂಸ್ಥೆಯವರ ಬೆಂಬಲ ಮುಖ್ಯವಾಗಿರಬೇಕು.

*ಯಲಬುರ್ಗಾ ಬಿಇಒ ಅಶೋಕಗೌಡ*


ಸುದ್ದಿ ಜಾಹಿರಾತಿಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713

Leave a Reply

Your email address will not be published. Required fields are marked *