*ಹಿಂದೂ ಜಾಗೃತಾ ಸಮಾವೇಶದಲ್ಲಿ ಸರ್ವರು ಪಾಲೋಳ್ಳುವಂತೆ ನವೀನ ಗುಳಗಣ್ಣವರ ಮನವಿ ,,*

 

ಕುಕನೂರು ತಾಲೂಕಿನ ಇಟಗಿ ಗ್ರಾಮದ ಮಹೇಶ್ವರ ದೇವಸ್ಥಾನದಲ್ಲಿ ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಹಿಂದು ಸಮ್ಮೇಳನ ಸಮಿತಿ ಇಟಗಿ ಮಂಡಲ ವತಿಯಿಂದ ಹಮ್ಮಿಕೊಳ್ಳಲಾಯಿತು. ಮಾರ್ಚ್ 8 ರವಿವಾರ ದಂದು ಹಿಂದೂ ಜಾಗೃತಾ ಸಮಾವೇಶ ನಡೆಯಲಿದೆ ಎಂದು ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ನವೀನ ಗುಳಗಣ್ಣನವರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಅವರು ಸಮಾವೇಶದ ಅಂಗವಾಗಿ ಶ್ರೀ ಮಹೇಶ್ವರ ಶಾಲೆ, ಆದರ್ಶ ಶಾಲೆ, ವಿವಿಧ ಶಾಲೆ ಹಾಗೂ ಮನೆ ಮನೆಗಳಿಗೆ ತೆರಳಿ ಕಾರ್ಯಕ್ರಮದ ಕುರಿತು ತಿಳಿಸುವ ಮೂಲಕ ಮಾತನಾಡಿ ಹಿಂದೂ ಜಾಗೃತಾ ಕಾರ್ಯಕ್ರಮವು ಯಾವುದೇ ಪಕ್ಷ ಭೇದವಿಲ್ಲದೇ ನಾವೆಲ್ಲಾ ಹಿಂದೂ, ನಾವೆಲ್ಲ ಒಂದು ಎನ್ನುವ ವೇದದೊಂದಿಗೆ ಕಾರ್ಯಕ್ರಮ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಕುಕನೂರು ಮತ್ತು ಯಲಬುರ್ಗಾ ತಾಲೂಕಿನ ಪ್ರತಿಯೊಬ್ಬ ಹಿಂದುಗಳು ಪಾಲ್ಗೋಳ್ಳಬೇಕು ಎಂದು ಮನವಿ ಮಾಡಿದರು.

 

 ಶ್ರೀಕಾಂತ ಪೂಜಾರ ಅರ್ಚಕರು ಮಾತನಾಡಿ ಹಿಂದೂ ಸಮ್ಮೇಳನ ಸಮಿತಿ ಇಟಗಿ ಮಂಡಲ ವತಿಯಿಂದ ಕಾರ್ಯಕ್ರಮದ ಅಂಗವಾಗಿ ಮಾರ್ಚ್ 08 ರವಿವಾರ ಮಧ್ಯಾಹ್ನ 3ಗಂಟೆಗೆ ಇಟಗಿ ಗ್ರಾಮದ ಮಹೇಶ್ವರ ದೇವಸ್ಥಾನದಿಂದ ಶೋಭ ಯಾತ್ರೆ ಪ್ರಾರಂಭ ಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಹಿಳೆಯರ ಕುಂಭ, ಕಳಸದೊಂದಿಗೆ ಶೋಭಾಯಾತ್ರೆ ಮೆರವಣಿಗೆಯ ಮೂಲಕ ಶ್ರೀ ಮಹದೇವ ದಂಡನಾಯಕ ವೇದಿಕೆಯಲ್ಲಿ ವೇದಿಕೆಯ ಕಾರ್ಯಕ್ರಮ ಸಂಜೆ 5:30 ಗಂಟೆಗೆ ಜರುಗಲಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯ ಅನ್ನದಾನೇಶ್ವರ ಶಾಖಾಮಠದ ಮಹದೇವ ಮಹಾಸ್ವಾಮಿಗಳು ವಹಿಸಿಕೊಳ್ಳುವರು, ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಮಾರಿ ಹುಲಿಗೆಮ್ಮ ತಂದೆ ಬಾಳಪ್ಪ ಹುರಕಣ್ಣವರ ಸಮಾಜ ಸೇವಕಿ ಇಟಗಿ ವಹಿಸಿಕೊಳ್ಳುವರು. ದಿಕ್ಸೂಚಿ ಭಾಷಣಕಾರರಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಮತ್ತು ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖರಾದ ಅರುಣಕುಮಾರ ಜಿ ನೆರವೇರಿಸುವರು.

 

ಈ ಕಾರ್ಯಕ್ರಮದಲ್ಲಿ ಸುಮಾರು ಎರಡರಿಂದ ಮೂರು ಸಾವಿರ ಜನರು ಸೇರುವ ನೀರಿಕ್ಷೆ ಇದ್ದು, ಪಟ್ಟಣದ ಸಮಸ್ತ ಹಿಂದುಗಳು ಪಾಲ್ಗೋಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

 

ಬಿ. ಎಂ. ಹಳ್ಳಿ ರವರು ಮಾತನಾಡಿ ಹಿಂದೂ ಸಮ್ಮೇಳನ ಸಮಿತಿ ವತಿಯಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದು ಎಲ್ಲ ಹಿಂದುಗಳು ಭಾಗವಹಿಸುವುದರೊಂದಿಗೆ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಸಾರ್ವಜನಿಕರಿಗೆ ಕರೆ ನೀಡಿದರು.

ಈ ವೇಳೆ ಸಮಿತಿಯವರು ನಾವೆಲ್ಲಾ ಹಿಂದು, ನಾವೆಲ್ಲ ಒಂದು ಎನ್ನುವ ಘೋಷಣೆ ಕೂಗಿದರು.  

ಈ ಸಂದರ್ಭದಲ್ಲಿ ವಿರೂಪಾಕ್ಷಪ್ಪ ಹಳ್ಳಿ, ಗವಿಸಿದ್ದಪ್ಪ ಮುದ್ದಬಳ್ಳಿ, ಶಾಂತಯ್ಯ ಕಂತಿ, ಪ್ರಭು ಹಳ್ಳಿ, ಸೊಮ್ಮಣ್ಣ ಬಡಿಗೇರ್, ಅಂದಪ್ಪ ಹುರಳಿ, ಮಹೇಶ ದೊಡ್ಡಮನಿ, ರಾಮಣ್ಣ ಹಿರೇಮನಿ, ಶಿವಕುಮಾರ ಗುಳಗಣ್ಣವರ, ಮಂಜುನಾಥ್ ಕೋವಿ ಸೇರಿದಂತೆ ಇತರರು ಇದ್ದರು.

 

ನಿರಂತರ ಸುದ್ದಿ ಜಾಹಿರಾತು ಪ್ರಕಟಣೆಗಾಗಿ, ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713

Leave a Reply

Your email address will not be published. Required fields are marked *