oplus_1026

*ಭೂ ವಂಚಿತ ದಲಿತ ರೈತರಿಗೆ ನ್ಯಾಯ ಒದಗಿಸುವಂತೆ ನಿಂಗಪ್ಪ ಬೆಣಕಲ್ ಆಗ್ರಹ,,!* 

*ಬಡ ದಲಿತರ ಭೂಮಿಯಲ್ಲಿ ಸೋಲಾರ ಟೋರೆಂಟಾ,,! ಅಟ್ಟಹಾಸ* 

 

 *ಕುಕನೂರು :* ಚಂಡೂರು ಗ್ರಾಮದ ಸರ್ವೆ ನಂಬರ್ 76ರ ಭೂ ವಂಚಿತ ದಲಿತ ರೈತರ ಪಿತ್ರಾರ್ಜಿತ ಭೂಮಿಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಟೋರೆಂಟ್ ಸೋಲಾರ್ ಪವರ್ ಲಿಮಿಟೆಡ್ ಕಂಪನಿಯ ಕಾಮಗಾರಿ ಸ್ಥಗಿತಗೊಳಿಸಬೇಕು ಹಾಗೂ ನಡೆಯುತ್ತಿರುವ ಧರಣಿ ಹೋರಾಟದ ಕುರಿತು ತುರ್ತು ಕ್ರಮಕ್ಕೆ ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ, ಚಂದ್ರಕಾಂತ ಕಾದ್ರೊಳ್ಳಿ ಬಣದ ಜಿಲ್ಲಾ ಸಮಿತಿಯ ಜಿಲ್ಲಾ ಅಧ್ಯಕ್ಷ ನಿಂಗಪ್ಪ ಜಿ.ಎಸ್ ಬೆಣಕಲ್ ಆಗ್ರಹಿಸಿದರು.

ಅವರು ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿ ಕುಕುನೂರು ತಾಲೂಕ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಧರಣಿಯಲ್ಲಿ ಮಾತನಾಡಿ ತಾಲೂಕಿನ ಚಂಡೂರು ಗ್ರಾಮದ ದಲಿತ ರೈತರಾದ ಗೋವಿಂದಪ್ಪ ಗಾಳೆವ್ವ ಹರಿಜನ ಇವರ ಪಿತ್ರಾರ್ಜಿತ ಆಸ್ತಿಯಾಗಿರುವ ಸರ್ವೇ ನಂಬರ್ 76ರಲ್ಲಿ 17 ಎಕರೆ 39 ಗುಂಟೆ ಭೂಮಿಗೆ ಸಂಬಂಧಿಸಿದಂತೆ ಅಕ್ರಮ ದಾಖಲೆಗಳ ಆಧಾರದಲ್ಲಿ ಟೊರೆಂಟ್ ಸೋಲಾರ್ ಪವರ್ ಲಿಮಿಟೆಡ್ ಕಂಪನಿಯಿಂದ ಫ್ಯಾನ್ ಅಳವಡಿಕೆ ಕಾಮಗಾರಿ ನಡೆಯುತ್ತಿರುವುದು ಕಾನೂನು ಉಲ್ಲಂಘನೆಯಾಗಿರುತ್ತದೆ. 

ಈ ಅಕ್ರಮ ಕ್ರಮದ ವಿರುದ್ಧ ಈಗಾಗಲೇ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ ಚಂದ್ರಕಾಂತ್ ಎಸ್ ಕಾದ್ರೊಳ್ಳಿ ಬಣ್ಣ ವತಿಯಿಂದ ಧರಣಿ ಹೋರಾಟವನ್ನು ಪ್ರಾರಂಭಿಸಲಾಗಿದ್ದು, ಪ್ರಸ್ತುತ ಧರಣಿ ನಡೆಯುತ್ತಿದ್ದು, ಈ ವಿಷಯದಲ್ಲಿ ತಕ್ಷಣ ಆಡಳಿತಾತ್ಮಕ ಹಾಗೂ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಈಗ ನಡೆಯುತ್ತಿರುವ ಧರಣಿ ಹೋರಾಟವು ತೀವ್ರ ವಿಕೋಪದ ಹೋರಾಟವಾಗಿ ರೂಪಗೊಳ್ಳಲಿದೆ ಎಂಬುದನ್ನು ಮಾನ್ಯರು ಗಮನಕ್ಕೆ ತರಬಯಸುತ್ತೇವೆ ಎಂದು ಎಚ್ಚರಿಕೆ ನೀಡಿದರು. 

ಯಾವುದೇ ಪಕ್ಷದಲ್ಲಿ ಜಮೀನಿನಿಂದ ವಂಚಿತರಾದ ದಲಿತ ರೈತರ ಪಿತ್ರಾರ್ಜಿತ ಭೂಮಿಯನ್ನು ಅವರಿಗೆ ನೀಡಿ ನ್ಯಾಯ ಒದಗಿಸುವಲ್ಲಿ ತಾಲೂಕ ಆಡಳಿತ ಕಾರ್ಯ ನಿರ್ವಹಿಸಬೇಕು. 

ಅಕ್ರಮವಾಗಿ ನಡೆಯುತ್ತಿರುವ ಕಾಮಗಾರಿ ಹಾಗೂ ಬಡ ಕುಟುಂಬದ, ದಲಿತ ರೈತರ ಜಮೀನಿಗೆ ನ್ಯಾಯ ಸಿಗದೇ ಇದ್ದ ಪಕ್ಷದಲ್ಲಿ ಹೋರಾಟದ ಪರಿಣಾಮವಾಗಿ ಉಂಟಾಗುವ ಯಾವುದೇ ಅಹಿತಕರ ಘಟನೆಗಳು ಹಾಗೂ ಸಾರ್ವಜನಿಕ ಶಾಂತಿಗೆ ಸಂಬಂಧಿಸಿದ ಪರಿಸ್ಥಿತಿಗಳಿಗೆ ಸಂಪೂರ್ಣ ಹೊಣೆಗಾರಿಕೆ ತಾಲೂಕ ಆಡಳಿತದ ಮೇಲೆ ಇರುತ್ತದೆ ಎಂಬುದನ್ನು ಸ್ಪಷ್ಟ ಪಡಿಸುತ್ತೇವೆ ಎಂದು ಹೇಳಿದರು.

ಸರ್ವೆ ನಂಬರ್ 76ರ ಭೂಮಿಯಲ್ಲಿ ನಡೆಯುತ್ತಿರುವ ಎಲ್ಲಾ ಕಾಮಗಾರಿಗಳನ್ನು ತಕ್ಷಣ ಸ್ಥಗಿತಗೊಳಿಸಿ ಅಕ್ರಮ ಭೂ ದಾಖಲೆಗಳ ಕುರಿತು ಕ್ರಮ ಕೈಗೊಂಡು ಭೂ ವಂಚಿತ ದಲಿತ ರೈತರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಸಂದರ್ಭದಲ್ಲಿ

ಶಶಿಕಲಾ ಮಠದ ಜಿಲ್ಲಾ ಮಹಿಳಾ ಅಧ್ಯಕ್ಷರು, ಸಂಜೀವ ಮೂರ್ತಿ ಬೇವಿನ ಗಿಡದ ಜಿಲ್ಲಾ ಮಾಧ್ಯಮ ವಕ್ತಾರರು, ಕರಿಯಪ್ಪ ಡಿ ಮಣ್ಣಿನವರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಮೈಲ್ಲಪ್ಪ ಮಾದಿನೂರು ಜಿಲ್ಲಾ ಪ್ರಧಾನ ಸಂಚಾಲಕರು, ಭರಮಜ್ಜ ತಿಗರಿ ಕೊಪ್ಪಳ ತಾಲೂಕ ಅಧ್ಯಕ್ಷರು, ಶ್ರೀಕಾಂತ್ ಹೊಸಮನಿ ಕುಕನೂರು ತಾಲೂಕ ಅಧ್ಯಕ್ಷರು, ಯಮನೂರು ಬಣಕಾರ್ ಯಲಬುರ್ಗಾ ತಾಲೂಕ ಅಧ್ಯಕ್ಷ, ಯಮನೂರು ದೇವರಮನಿ ಕುಕನೂರು ತಾಲೂಕ ಉಪಾಧ್ಯಕ್ಷ, ವೀರೇಶ್ ದೊಡ್ಡಮನಿ ಯಲಬುರ್ಗಾ ತಾಲೂಕ ಉಪಾಧ್ಯಕ್ಷ, ಹಾಗೂ ಗ್ರಾಮಸ್ಥರಾದ ಈರಪ್ಪ ಡಿ ಹಿರೇಮನಿ, ರೇಣವ್ವ ಹಿರೇಮನಿ, ಭರಮಪ್ಪ ಹಿರೇಮನಿ, ಫಕೀರಪ್ಪ ಹಿರೇಮನಿ, ಲೋಹಿತ ಬಳಗೇರಿ, ಮಹಿಳೆಯರು ಹಾಗೂ ಇತರರು ಇದ್ದರು.

 

*ನಿರಂತರ ಸುದ್ದಿ ಜಾಹಿರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞9164386713*

Leave a Reply

Your email address will not be published. Required fields are marked *