ಭಾರತದಲ್ಲಿರುವ ಸಂವಿಧಾನವು ಪ್ರಪಂಚದಲ್ಲಿರುವ ಪ್ರತಿಯೊಂದು ಜೀವರಾಶಿಯು ಅನುಭವಿಸುವಂತ್ತ ಸಂವಿಧಾನವಾಗಿದೆ-ಕನಕರಾಯ ಭಜೇಂತ್ರಿ

ನಿರ್ಭಯ ದೃಷ್ಟಿ ನ್ಯೂಸ್********
ಕುಕನೂರ:- ಭಾರತದಲ್ಲಿರುವ ಸಂವಿಧಾನವು ಪ್ರಪಂಚದಲ್ಲಿರುವ ಪ್ರತಿಯೊಂದು ಜೀವ ರಾಶಿಯು ಅನುಭವಿಸುವಂತ್ತ ಸಂವಿಧಾನ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಮಾನಸಿಕ ಆಟೋಗ್ಯ ಕೇಂದ್ರ ಆಪ್ತಸಮಾಲೋಚಕ ಕನಕರಾಯ ಭಜೇಂತ್ರಿ ಹೇಳಿದರು.
ಪಟ್ಟಣದಲ್ಲಿ ತಹಸೀಲ್ದಾರ್ ಕಚೇರಿಯಲ್ಲಿ ನಡೆದ 77 ನೇ ಗಣರಾಜ್ಯೋತ್ಸವದ ದ್ವಜಾರೋಹಣ ನಂತರ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು ಭಾರತದಲ್ಲಿರುವ ಸಂವಿಧಾನವೂ ಭಾರತದಲ್ಲಿ ಅಷ್ಟೇ ಅಲ್ಲದೆ ಪ್ರಪಂಚದಲ್ಲಿರುವ ಪ್ರತಿಯೊಂದು ಜೀವರಾಶಿಯು ಅನುಭವಿಸುವಂತ್ತಾ ಸಂವಿಧಾನವನ್ನು ನಮ್ಮ ಭಾರತಕ್ಕೆ ತಂದುಕೊಟ್ಟ ಸಂವಿಧಾನ ಶಿಲ್ಪಿ ಡಾ, ಬಾಬಾಸಾಹೇಬ್ ಅಂಬೇಡ್ಕರ್ರವರು ಅಂತವರ ಜೀವನದ ಮೌಲ್ಯಗಳನ್ನು ಇಂದಿನ ಯುವಪೀಳಿಗೆಗೆ ಮೆಲಕು ಹಾಕಬೇಕು. ಗಣರಾಜ್ಯ ದಿನವು ಎಲ್ಲ ಭಾರತೀಯರನ್ನು ಭಾವನಾತ್ಮಕ, ಭಾಷಿಕ, ಭೌಗೋಳಿಕ ಹಾಗೂ ಆಡಳಿತಾತ್ಮಕವಾಗಿ ಬೆಸುಗೆ ಹಾಕಿದ ದಿನವಾಗಿದೆ. ಶ್ರೇಷ್ಠ ಸಂವಿಧಾನವನ್ನು ಎಲ್ಲ ಭಾರತೀಯರು ಮನಃಪೂರ್ವಕವಾಗಿ ಅಂತಃಕರಣದಿಂದ ಒಪ್ಪಿ ಸಂತಸಪಟ್ಟ ದಿನವಾಗಿದೆ’ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು 1950ರ ಜ.26 ರಿಂದ ಜಾರಿಗೆ ತರಲಾಯಿತು. ಆಂದಿನಿಂದಲೂ ಸಂವಿಧಾನ ದಿನ ಹಾಗೂ ಗಣರಾಜ್ಯೋತ್ಸವ ದಿನವನ್ನಾಗಿ ಸಂಭ್ರಮದಿಂದ ಆಚರಿಸತ್ತೇವೆ.
ಭಾರತ 1947 ಆಗಸ್ಟ್ 15ರಂದು ಸ್ವತಂತ್ರವಾದ ನಂತರ ಆ.29ರಂದು ಡಾ.ಅಂಬೇಡ್ಕರ್ ಅವರ ನೇತೃತ್ವದಲ್ಲಿ ಕರಡು ಸಮಿತಿ ನೇಮಕವಾಯಿತು. ಈ ಸಮಿತಿಯು ಸಂವಿಧಾನದ ಕರಡನ್ನು ಸಿದ್ದಪಡಿಸಿ 1947 ನ.4ರಂದು ಶಾಸನ ಸಭೆಯಲ್ಲಿ ಮಂಡಿಸಿತು. 1949 ನ.26ರಂದು ಅಂಗೀಕರಿಸಲ್ಪಟ್ಟು ಪರಿಶೀಲನೆ ಮತ್ತು ತಿದ್ದುಪಡಿಗಳ ನಂತರ 1950 ಜ.26ರಂದು ಭಾರತ ಸಂವಿಧಾನ ಜಾರಿಗೆ ಬಂದಿತು. ಭಾರತ ಸ್ವಾತಂತ್ರ್ಯ ಚಳವಳಿಯಲ್ಲಿ 1930 ಜ.26 ರಂದು ಲಾಹೋರ್‌ನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಈನಿರ್ಧಾರ ತೆಗೆದುಕೊಂಡು ಭಾರತ ರಾಷ್ಟ್ರೀಯ ಕಾಂಗ್ರೆಸ್ ‘ಪೂರ್ಣ ಸ್ವರಾಜ್ಯ’ ಘೋಷಣೆ ಹೊರ ಹಾಕಿದರು. ಈ ಕಾರಣಕ್ಕಾಗಿ ಭಾರತ ಸಂವಿಧಾನವನ್ನು ಈ ದಿನದಂದೇ ಜಾರಿಗೆ ತರಲಾಯಿತು. ಅಂದರೆ ಅಂದು ಭಾರತವು ಗಣ ರಾಜ್ಯವಾಯಿತು. ಹಾಗಾದರೆ ಗಣ ರಾಜ್ಯವೆಂದರೆ ‘ಯಾವುದೇ ದೇಶ ದಲ್ಲಿ ಪ್ರಜೆಗಳನ್ನು ಆಳುವ ಸರ್ಕಾರ ವನ್ನು ನಿರ್ಧರಿಸುವ ಶಕ್ತಿ ಅಂತಿಮ ವಾಗಿ ಅದೇ ಪ್ರಜೆಗಳ ಕೈಯಲ್ಲಿರುವ ಸರ್ಕಾರದ ವ್ಯವಸ್ಥೆ ಹೀಗಾಗಿ ಈ ದಿನವನ್ನು ಸುವರ್ಣಾಕ್ಷರದಲ್ಲಿ ಬರದಿಡಬೇ ಕಾದ ದಿನ. ಏಕೆಂದರೆ ಜನರಿಂದ ಪ್ರತಿನಿಧಿಸಲ್ಪಡುವ ಜನಪ್ರತಿನಿಧಿಗಳ ಸರ್ಕಾರದ ಶಾಸನಬದ್ಧ ಆಡಳಿತ ವ್ಯವಸ್ಥೆಯಲ್ಲಿ ದೇಶವನ್ನು ಸರ್ವ ಸ್ವತಂತ್ರ ಸಾರ್ವಭೌಮ ಗಣರಾಜ್ಯ ಎಂದು ಒಮ್ಮತದಿಂದ ಮೊಳಗಿದೆ ಸುದಿನವಾಗಿದೆ.

ಈ ತಹಶೀಲ್ದಾರ್ ಬಸವರಾಜ್ ಬೆಣ್ಣೆ ಶಿರೂರು,ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್ ಪಾಟೀಲ್ ಬಿರಾದರ್, ಎಪಿಎಂಸಿ ಕಾರ್ಯದರ್ಶಿ ಗುರುಸ್ವಾಮಿ, ದಳಪತಿ ವೀರಯ್ಯ ತೋಟದಾರ್ಯಮಠ, ಸಮಾಜ ಸೇವಕ ರಶೀದ್ ಹಣಜಿಗೇರಿ, ಚುಸಾಪ ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ, ಸಿ ಆರ್ ಸಿ ಅಧಿಕಾರಿ ಪೀರ್ಸಾಬ್ ದಫೆದಾರ್, ಸಿರಸ್ತಿದಾರ್ ಮಹಮದ್ ಮುಸ್ತಾಫ್, ಶಿಕ್ಷಕ ಎಸ್ಎಂ ಹಿರೇಮಠ್, ನಿಂಗಪ್ಪ ಹೈದ್ರಿ ನಿರೋಪಿಸಿದರು ನಂತರ ವಿವಿಧ ಸಾಂಗ್ಸ್ ಕಾರ್ಯಕ್ರಮಗಳು ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಮಕ್ಕಳಿಂದ ಜರುಗಿದವು