ಸಂವಿಧಾನದ ಆಶಯಗಳ ಪಾಲನೆಗೆ ಕೊಪ್ಪಳ ವಿ.ವಿ.ಕುಲಪತಿ ಪ್ರೊ. ಎಸ್.ವಿ ಡಾಣಿ ಕರೆ

ಕುಕನೂರು:-ನಿರ್ಭಯ ದೃಷ್ಟಿ ನ್ಯೂಸ್************
ಕೊಪ್ಪಳ, ಜ-26: ಸಂವಿಧಾನ ನಿರ್ಮಾತೃಗಳು ಹಾಕಿ ಕೊಟ್ಟ ಸಂವಿಧಾನದ ಮೂಲ ಆಶಯಗಳಾದ ಸಹೋದರತೆ, ಸಮಾನತೆ ಇನ್ನಿತರ ಆದರ್ಶಗಳ ಪಾಲನೆಯಿಂದಾಗಿ ದೇಶ ಈಗ ವಿಶ್ವ ಗುರುವಾಗುವಂತಹ ಹಂತಕ್ಕೆ ತಲುಪಿದ್ದು, ಪ್ರತಿಯೊಬ್ಬರೂ ದೇಶದ ಅಭ್ಯುದಯಕ್ಕೆ ಕೈ ಜೋಡಿಸಬೇಕೆಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಸ್.ವಿ.ಡಾಣಿಯವರು ಅಭಿಪ್ರಾಯಪಟ್ಟರು.
ಇಲ್ಲಿಗೆ ಸಮೀಪದ ಕೊಪ್ಪಳ ವಿಶ್ವವಿದ್ಯಾಲಯ ಆವರಣದಲ್ಲಿಂದು ಆಯೋಜಿಸಲಾಗಿದ್ದ 77ನೇ ಗಣ ರಾಜ್ಯೋತ್ಸವದ ಸಮಾರಂಭದಲ್ಲಿ ಧ್ವಜಾರೋಹ ನೆರವೇರಿಸಿ, ಮಾತನಾಡಿದ ಅವರು, ಅನೇಕ ಮಹನೀಯರು, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ,ಬಲಿದಾನಗಳ ಫಲವಾಗಿ ದೊರೆತ ಸ್ವಾತಂತ್ರ್ಯದ ಹಾಗೂ ಸಂವಿಧಾನದ ಆದರ್ಶಗಳನ್ನು ಪ್ರತಿಯೊಬ್ಬರೂ ಗೌರವಿಸಬೇಕು. ದೇಶ ಈಗಾಗಲೇ ತಾಂತ್ರಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಬಹಳಷ್ಟು ಪ್ರಗತಿ ಸಾಧಿಸಿದೆ. ವಿಶ್ವ ಮಟ್ಟದಲ್ಲಿ ದೇಶ ಇನ್ನಷ್ಟು ಅಭಿವೃದ್ದಿ ಕಾಣಲು, ವಿಶ್ವ ಗುರುವಾಗುವ ದೇಶದ ಕನಸನ್ನು ನನಸಾಗಿಸಲು ಎಲ್ಲರೂ ಒಂದಾಗಿ ದುಡಿಯಬೇಕೆಂದರು.
ಈ ವೇಳೆ ಕುಲಸಚಿವರಾದ ಪ್ರೊ.ಕೆ ರಮೇಶ, ಆಡಳಿತಾಧಿಕಾರಿಗಳಾದ ಪ್ರೊ. ತಿಮ್ಮಾರೆಡ್ಡಿ ಮೇಟಿಯವರು, ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ, ಪ್ರಾರ್ಥನೆ, ಪುಷ್ಪ ನಮನ ಸಲ್ಲಿಸಲಾಯಿತು.
ಸಮಾರಂಭದಲ್ಲಿ ವಿ.ವಿ.ಯ ಉಪನ್ಯಾಸಕರುಗಳಾದ ಡಾ. ವೀರೇಶ ಉತ್ತಂಗಿ, ಡಾ. ಪ್ರಿಯಾಂಕ ಕೊನ್ನೂರ, ಡಾ.ಬಸವರಾಜ ಗಡಾದ, ಡಾ. ಪ್ರವೀಣ ಪೊಲೀಸಪಾಟೀಲ, ಡಾ.ಪಾರ್ವತಿ ಕನಕಗಿರಿ, ನಾಗರಾಜ , ಮೌಲಸಾಬ, ಬೋಧಕೇತರರಾದ ಪ್ರಕಾಶ ಕುರಿ, ತೌಫಿಕ ಅಹ್ಮದ, ಗಂಗಾಧರ, ಗಿರೀಶ ಇನ್ನಿತರರು ಹಾಜರಿದ್ದರು.
ಪ್ರಾದ್ಯಾಪಕರಾದ ಡಾ. ವೀರೇಶ ಉತ್ತಂಗಿ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು. ಈ ವೇಳೆ ವಿಶ್ವವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂಧಿ, ಗೃಹ ರಕ್ಷಕ ದಳದ ಸಿಬ್ಬಂಧಿ ಇನ್ನಿತರರು ಹಾಜರಿದ್ದರು.