ವಿಶ್ವನಾಥ ಮರಿಬಸಪ್ಪನವರ್.
ಕೊಪ್ಪಳ. *
ಕುಕನೂರು : ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಶಾಸಕ ವಿಜಯಾ ನಂದ ಕಾಶಪ್ಪನವರ್ ಮತ್ತು ಟ್ರಸ್ಟ್ ವತಿಯಿಂದ ಕೂಡಲ ಸಂಗಮ ಪಂಚಮಸಾಲಿ ಜಗದ್ಗುರು ಶ್ರೀ ಜಯಮೃತ್ಯುಂಜಯ ಸ್ವಾಮೀಜಿಗಳನ್ನು ಉಚ್ಚಾಟನೆ ಮಾಡಿದ್ದು, ಇದು ಅವರ ಭಕ್ತರಿಗೆ ಸಂಗತಿಯಾಗಿದೆ. ಇದನ್ನು ನಾವು ಖಂಡಿಸುತ್ತೇವೆ ಎಂದು ಮಾಜಿ ತಾಪಂ ಉಪಾಧ್ಯಕ್ಷ ಹಾಗೂ ಪಂಚಸೇನಾ ಜಿಲ್ಲಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ್ ಹೇಳಿದರು.
ಅವರು ನಮ್ಮ ಮಾಧ್ಯಮದೊಂದಿಗೆ ಮಾತನಾಡಿ ಜಯಮೃತ್ಯುಂಜಯ ಸ್ವಾಮೀಜಿಗಳು ಪೀಠಾರೋಹಣದಿಂದ ಸಮಾಜ ಕಟ್ಟುವ ಕೆಲಸ ಮಾಡಿದ್ದಾರೆ. ಹಗಲು ಇರುಳು ಎನ್ನದೆ ಸಮಾಜಕ್ಕೆ ಸೇವೆ ಸಲ್ಲಿಸಿದ್ದಾರೆ ಸಮಾಜದ ಶ್ರೇಯಸ್ಸಿಗಾಗಿ ಹಣದ ಆಸೆಗೆ ಬಲಿಯಾಗಲಿಲ್ಲ ಸಮಾಜದ ಏಳಿಗೆಗಾಗಿ, ಹಾಗೂ ಮೀಸಲಾತಿ ಜಾರಿಗಾಗಿ 750ಕಿ.ಮೀ ಪಾದಯಾತ್ರೆ ಮಾಡಲಾಗಿದೆ. 8 ರಿಂದ 10 ಲಕ್ಷ ಜನ ಸೇರಿಸಿ ಅರಮನೆ ಮೈದಾನದಲ್ಲಿ ಸಮಾವೇಶ ಮಾಡಿ ಪಂಚಮಸಾಲಿ ಸಮಾಜದ ಶಕ್ತಿ ಪ್ರದರ್ಶನ ಮಾಡಿದ ಶ್ರೇಯಸ್ಸು ಸ್ವಾಮೀಜಿಗಳು ಸಲ್ಲುತ್ತದೆ ಎಂದು ಹೇಳಿದರು.
ಶ್ರೀಗಳು ನಿಸ್ವಾರ್ಥ ಸೇವೆ ಮಾಡುವ ಮೂಲಕ ಅಪಾರ ಭಕ್ತರ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಅವರು ಯಾವುದಕ್ಕೂ ಆಸೆ ಪಟ್ಟವರಲ್ಲಾ ದುರುದ್ದೇಶದಿಂದ ಅವರನ್ನು ಉಚ್ಚಾಟನೆ ಮಾಡಿರುವುದು ಇಡೀ ಪಂಚಮಸಾಲಿ ಸಮಾಜಕ್ಕೆ ಕೋರಲಾಗಿದೆ.
ಜಯಮೃತ್ಯುಂಜಯ ಸ್ವಾಮೀಜಿ ಜೊತೆ ನಾವು ಮುಂದುವರೆಯುತ್ತೆವೆ. ಮುಂದೆ ಅವರು ತೆಗೆದುಕೊಳ್ಖುವ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೆವೆ ಎಂದು ಸ್ಥಾಪಿಸಿದರು.
ಶ್ರೀಗಳಿಂದ ರಾಜಕೀಯ ಲಾಭ ಗಿಟ್ಟಿಸಿಕೊಂಡು, ಅವರ ವಿರುದ್ಧ ಪಿತೂರಿ ನಡೆಸಿ, ಸಮಾಜಕ್ಕೆ ಅವರು ಕೊಟ್ಟ ನಿಸ್ವಾರ್ಥ ಸೇವೆ ನೆನೆಯದೇ, ಒತ್ತಡಕ್ಕೆ ಏಕಪಕ್ಷೀಯವಾಗಿ ಈ ನಿರ್ಧಾರ ತೆಗೆದುಕೊಂಡ ಟ್ರಸ್ಟ್ ಪದಾಧಿಕಾರಿಗಳು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು.
ಇಡೀ ಪಂಚಮಸಾಲಿ ಸಮಾಜ ಜೊತೆಗೂಡಿ ಸಂಘಟನೆಯ ಹೋರಾಟ ನಡೆಸುತ್ತೆವೆ, ಅವರಿಗೆ ನಮ್ಮ ನೈತಿಕತೆಯ ಬೆಂಬಲವಿದೆ ಎಂದು ಈ ವೇಳೆಯಲ್ಲಿ.
* ಬಾಕ್ಸ್,, *
ಶಾಸಕ ವಿಜಯಾನಂದ ಕಾಶಪ್ಪ ಅವರ ಸ್ವಯಂ ಘೋಷಿತ ಟ್ರಸ್ಟ್ ಇದ್ದಲ್ಲಿ, ಶ್ರೀಗಳ ಪೀಠಕ್ಕೆ ಅದಕ್ಕೂ ಯಾವುದೇ ಸಂಬಂಧವಿಲ್ಲ. ಇದೊಂದು ಏಕಪಕ್ಷೀಯ ನಿರ್ಧಾರವಾಗಿದ್ದು, ಇಡೀ ಅಖಂಡ ಪಂಚಮಸಾಲಿ ಸಮಾಜವು ಶ್ರೀಗಳೊಂದಿಗೆ ಇದ್ದು, ಅವರಿಗೆ ನೈತಿಕ ಬೆಂಬಲವನ್ನು ನೀಡಲಾಯಿತು. ವಿಜಯಾನಂದ ಕಾಶಪ್ಪನವರ್ ಹಾಗೂ ಉಳಿದ ಟ್ರಸ್ಟಿನ ಪದಾಧಿಕಾರಿಗಳು ನಡೆಯುತ್ತಿದ್ದಾರೆ ಇವರನ್ನು ಸಮಾಜದಿಂದ ಉಚ್ಚಾಟಿಸುವ ಕಾಲ ದೂರವಿಲ್ಲ.
* ವಿಶ್ವನಾಥ ಮರಿಬಸಪ್ಪನವರ್ *